ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಹಣದುಬ್ಬರ ಶೇ.0.61ಕ್ಕೆ ಏರಿಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹಣದುಬ್ಬರ ಶೇ.0.61ಕ್ಕೆ ಏರಿಕೆ
PTI
ಅಗತ್ಯ ಅಹಾರ ಧಾನ್ಯ ವಸ್ತುಗಳ ದರ ಏರಿಕೆಯ ಮಧ್ಯೆ ಹಣದುಬ್ಬರ ದರ ಗುರುವಾರ ಶೇ.0.61ಕ್ಕೆ ಏರಿಕೆ ಕಂಡಿದೆ. ಕಳೆದ ವಾರದ ವಾರಾಂತ್ಯಕ್ಕೆ ಶೇ.48ಕ್ಕೆ ಕುಸಿತ ಕಂಡಿತ್ತು.

ಮೇ 2ಕ್ಕೆ ವಾರಾಂತ್ಯಗೊಂಡಂತೆ ಶೇ.0.48ಕ್ಕೆ ಕುಸಿತ ಕಂಡಿದ್ದು, ಏಪ್ರಿಲ್ 25ಕ್ಕೆ ವಾರಂತ್ಯಗೊಂಡಂತೆ ಶೇ.0.57 ರಿಂದ ಶೇ.0.70ಕ್ಕೆಏರಿಕೆಯಾಗಿತ್ತು. ಇದೀಗ ಪ್ರಸಕ್ತ ವಾರದಲ್ಲಿ ಹಣದುಬ್ಬರ ಕೊಂಚ ಏರಿಕೆ ಕಂಡಿದೆ.

ಸಕ್ಕರೆ, ಹಾಲು, ತರಕಾರಿ, ದ್ವಿದಳ ಧಾನ್ಯಗಳು ಅಹಾರ ವಸ್ತುಗಳ ದರಗಳು ನಿರಂತರ ಏರಿಕೆ ಕಾಣುತ್ತಿರುವುದು ಜನತೆಯಲ್ಲಿ ಆತಂಕ ಮೂಡಿಸಿದೆ.

ಸಗಟು ಸೂಚ್ಯಂಕ ದರ ಕಳೆದ ವರ್ಷದ ಮೇ ವಾರಾಂತ್ಯಕ್ಕೆ ಶೇ.8.57ಕ್ಕೆ ತಲುಪಿತ್ತು. ಪ್ರಸಕ್ತ ತಿಂಗಳಲ್ಲಿ ಹಣದುಬ್ಬರ ದರ ನಿರಂತರ ಮೂರು ವಾರಗಳಲ್ಲಿ ಏರಿಕೆ ಕಂಡಿದೆ. ಕಳೆದ ಎಂಟು ವಾರಗಳಿಂದ ಹಣದುಬ್ಬರ ದರ ಏರಿಳಿಕೆ ಕಾಣುತ್ತಿದೆ.

ಪ್ರಸಕ್ತ ವಾರದಲ್ಲಿ ಟೀ ಶೇ.7 ರಷ್ಟು ಬಾಜ್ರಾ ಶೇ.3ರಷ್ಟು, ಹಾಲು, ಗೋಧಿ ಮತ್ತು ಮಸಾಲೆ ಪದಾರ್ಥಗಳ ಬೆಲೆಗಳಲ್ಲಿ ಏರಿಕೆ ಕಂಡಿವೆ. ಇಂಧನ,ವಿದ್ಯುತ್ ಮತ್ತು ಲ್ಯೂಬ್ರಿಕೆಂಟ್ಸ್‌ಗಳ ಸಗಟು ಸೂಚ್ಯಂಕ ದರದಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ.

ಏಪ್ರಿಲ್ ತಿಂಗಳಿನಲ್ಲಿ ಹಣದುಬ್ಬರ 0.18ಕ್ಕೆ ಕುಸಿತವಾಗಿದ್ದು, 1977-78ರಲ್ಲಿ ಹಣದುಬ್ಬರ ಭಾರೀ ಇಳಿಕೆ ಕಂಡಿತ್ತು. ಜಾಗತಿಕ ಮಟ್ಟದಲ್ಲಿ ದಿನಸಿ ವಸ್ತುಗಳ ದರಗಳು ಇಳಿಮುಖವಾದ ಹಿನ್ನೆಲೆಯಲ್ಲಿ ಕಳೆದ ಸೆಪ್ಟೆಂಬರ್ ತಿಂಗಳಿನಿಂದ ಸೂಚ್ಯಂಕ ದರ ಕುಸಿತ ಕಂಡಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
'ಪ್ಲೇಮ್' ಪೇಟೆಂಟ್ ಪ್ರಕರಣ: ಬಜಾಜ್ ವಿರುದ್ಧ ಟಿವಿಎಸ್‌‌ಗೆ ಜಯ
ಹೋಟೆಲ್ ಉದ್ಯಮ ಚೇತರಿಕೆ ನಿರೀಕ್ಷೆ: ಎಫ್‌ಎಚ್‌ಆರ್‌ಎಐ
ಹಣದುಬ್ಬರ ಶೇ 0.1 ನಿರೀಕ್ಷೆ
ಪಂಜಾಬ್ ನ್ಯಾಶನಲ್ ಬ್ಯಾಂಕ್: 865ಕೋಟಿ ರೂ. ಲಾಭ
ಗ್ರಾಮೀಣ ಪ್ರದೇಶಗಳತ್ತ ಮಾರುತಿ ಸುಜುಕಿ ಚಿತ್ತ
ಎಂಟಿಎನ್‌ಎಲ್ ಬಂದ್ ವಾಪಸ್-ಸೇವೆ ಪುನರಾರಂಭ