ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಅಮೆರಿಕದಲ್ಲಿ ಸಾವಿರ ನೂತನ ನೌಕರರ ನೇಮಕ: ಇನ್ಫೋಸಿಸ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಮೆರಿಕದಲ್ಲಿ ಸಾವಿರ ನೂತನ ನೌಕರರ ನೇಮಕ: ಇನ್ಫೋಸಿಸ್
ಭಾರತೀಯ ಮೂಲದ ಪ್ರತಿಷ್ಠಿತ ಸಾಫ್ಟ್‌ವೇರ್‌ ಕಂಪೆನಿಯಾದ ಇನ್ಫೋಸಿಸ್ ಸಾಫ್ಟ್‌ವೇರ್ ಕಂಪೆನಿ ಮುಂದಿನ 12ರಿಂದ 18ತಿಂಗಳೊಳಗೆ ಅಮೆರಿಕದಲ್ಲಿ 1 ಸಾವಿರ ಮಂದಿ ನೌಕರರನ್ನು ನೂತನವಾಗಿ ನೇಮಕ ಮಾಡಿಕೊಳ್ಳಲು ನಿರ್ಧರಿಸಲಾಗಿದೆ ಎಂದು ತಿಳಿಸಿದೆ.

ಈ ವಾರ ನಡೆಯಲಿರುವ ಮೈಕ್ರೋಸಾಫ್ಟ್ ಸಿಇಓಗಳ ಸಭೆಗಾಗಿ ಆಗಮಿಸಿರುವ ಇನ್ಫೋಸಿಸ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋಪಾಲ್ ಕೃಷ್ಣನ್ ಸ್ಥಳೀಯ ಮಾಧ್ಯಮ ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಅಮೆರಿಕದಲ್ಲಿ ಮಾಹಿತಿ ತಂತ್ರಜ್ಞಾನ ಮತ್ತಷ್ಟು ವಿಸ್ತರಿಸುವ ನಿಟ್ಟಿನಲ್ಲಿ ಸಾವಿರ ಮಂದಿ ನೂತನ ನೌಕರರನ್ನು ನೇಮಕ ಮಾಡಿಕೊಳ್ಳುವ ಯೋಜನೆ ಕಂಪೆನಿ ಮುಂದಿದೆ ಎಂದರು.

ಅಮೆರಿಕದಾದ್ಯಂತ ಮುಂದಿನ 12 ರಿಂದ 18ತಿಂಗಳೊಳಗೆ ಸಾವಿರ ನೌಕರರನ್ನು ನೇಮಕ ಮಾಡಲಾಗುವುದು ಎಂದು ಹೇಳಿದರು. ಅಮೆರಿಕದಾದ್ಯಂತ ಈಗಾಗಲೇ 14 ಸಾವಿರ ಕಂಪೆನಿಗಳಲ್ಲಿ ಅಮೆರಿಕ ಮೂಲದ 1,04,000ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ವಿವರಿಸಿದರು.

ಹೆಚ್ಚಿನ ಉತ್ತಮವಾದ ಸೇವೆಯನ್ನು ನೀಡುವ ಮೂಲಕ ನಮ್ಮ ಉದ್ಯಮವನ್ನು ಮತ್ತಷ್ಟು ಬೆಳೆಸುವ ವಿಶ್ವಾಸ ಹೊಂದಿರುವುದಾಗಿ ತಿಳಿಸಿದ ಅವರು, ಭಾರತ ಶೀಘ್ರವಾಗಿಯೇ ಆರ್ಥಿಕ ಹಿಂಜರಿತದಿಂದ ಚೇತರಿಕೆ ಕಾಣಲಿದೆ ಎಂದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸ್ಕೋಡಾದಿಂದ 'ನೂತನ ಲೌರಾ' ಮಾರುಕಟ್ಟೆಗೆ
ಹಣದುಬ್ಬರ ಶೇ.0.61ಕ್ಕೆ ಏರಿಕೆ
'ಪ್ಲೇಮ್' ಪೇಟೆಂಟ್ ಪ್ರಕರಣ: ಬಜಾಜ್ ವಿರುದ್ಧ ಟಿವಿಎಸ್‌‌ಗೆ ಜಯ
ಹೋಟೆಲ್ ಉದ್ಯಮ ಚೇತರಿಕೆ ನಿರೀಕ್ಷೆ: ಎಫ್‌ಎಚ್‌ಆರ್‌ಎಐ
ಹಣದುಬ್ಬರ ಶೇ 0.1 ನಿರೀಕ್ಷೆ
ಪಂಜಾಬ್ ನ್ಯಾಶನಲ್ ಬ್ಯಾಂಕ್: 865ಕೋಟಿ ರೂ. ಲಾಭ