ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಪೆಟ್ರೋಲ್-ಡಿಸೇಲ್ ಬೆಲೆಯಲ್ಲಿ ಹೆಚ್ಚಳ ಸಾಧ್ಯತೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪೆಟ್ರೋಲ್-ಡಿಸೇಲ್ ಬೆಲೆಯಲ್ಲಿ ಹೆಚ್ಚಳ ಸಾಧ್ಯತೆ
ಚುನಾವಣೆಗೂ ಮುನ್ನ ಪೆಟ್ರೋಲ್ ಮತ್ತು ಡಿಸೇಲ್ ದರವನ್ನು ಗಣನೀಯ ಪ್ರಮಾಣದಲ್ಲಿ ಇಳಿಕೆ ಮಾಡಿದ್ದ ಯುಪಿಎ ಸರಕಾರ ಇದೀಗ ಇನ್ನೊಂದು ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿಯುವ ಅವಕಾಶ ಒದಗಿರುವ ಬೆನ್ನಲ್ಲೇ ಅವುಗಳ ಬೆಲೆ ಏರಿಕೆಗೆ ಚಿಂತನೆ ನಡೆಸಿದೆ.

ಸರಕಾರದ ಹಿಡಿತದಿಂದ ಕೈಬಿಟ್ಟು ತೈಲ ಕಂಪನಿಗಳ ಸುಪರ್ದಿಗೆ ಒಪ್ಪಿಸುವ ಪ್ರಸ್ತಾವಕ್ಕೆ ಸರಕಾರ ಒಪ್ಪಿಗೆ ನೀಡಿದರೆ ಪೆಟ್ರೋಲ್ ಬೆಲೆ ಲೀಟರ್‌ಗೆ 2 ರೂಪಾಯಿ, ಹಾಗೂ ಡಿಸೇಲ್ ಬೆಲೆ ಲೀಟರ್‌‌ಗೆ 30 ಪೈಸೆಯಷ್ಟು ಏರಿಕೆಯಾಗಲಿದೆ.

ತೈಲ ಬೆಲೆಗಳ ಮೇಲಿನ ನಿಯಂತ್ರಣವನ್ನು ಸರಕಾರದಿಂದ ಮುಕ್ತಗೊಳಿಸುವ ಪ್ರಸ್ತಾವವೊಂದನ್ನು ಈಗಾಗಲೇ ಪೆಟ್ರೋಲಿಯಂ ಸಚಿವಾಲಯ ಸಿದ್ಧಪಡಿಸಿಕೊಂಡಿದೆ. ಅದಕ್ಕೆ ನೂತನ ಪೆಟ್ರೋಲಿಯಂ ಸಚಿವರು ಒಪ್ಪಿಗೆ ನೀಡಿದರೆ ಸಂಪುಟ ಸಭೆಯಲ್ಲಿ ಮಂಡಿಸಲಾಗುತ್ತದೆ. ಅಲ್ಲೂ ಒಪ್ಪಿಗೆ ದೊರೆತರೆ ಮುಂದೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ಬೆಲೆಗಳೂ ಏರಿಳಿಯುತ್ತಿವೆ, ಸದ್ಯಕ್ಕೆ ಪೆಟ್ರೋಲ್‌‌ಗೆ 2 , ಡಿಸೇಲ್‌‌ಗೆ 30 ಪೈಸೆಯಷ್ಟು ಬೆಲೆ ಏರಿಸಲು ನಿರ್ಧರಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಅಮೆರಿಕದಲ್ಲಿ ಸಾವಿರ ನೂತನ ನೌಕರರ ನೇಮಕ: ಇನ್ಫೋಸಿಸ್
ಸ್ಕೋಡಾದಿಂದ 'ನೂತನ ಲೌರಾ' ಮಾರುಕಟ್ಟೆಗೆ
ಹಣದುಬ್ಬರ ಶೇ.0.61ಕ್ಕೆ ಏರಿಕೆ
'ಪ್ಲೇಮ್' ಪೇಟೆಂಟ್ ಪ್ರಕರಣ: ಬಜಾಜ್ ವಿರುದ್ಧ ಟಿವಿಎಸ್‌‌ಗೆ ಜಯ
ಹೋಟೆಲ್ ಉದ್ಯಮ ಚೇತರಿಕೆ ನಿರೀಕ್ಷೆ: ಎಫ್‌ಎಚ್‌ಆರ್‌ಎಐ
ಹಣದುಬ್ಬರ ಶೇ 0.1 ನಿರೀಕ್ಷೆ