ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಸರಕು ಸಾಗಣೆಯಿಂದ ರೈಲ್ವೆಗೆ 53ಸಾ.ಕೋಟಿ ಆದಾಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸರಕು ಸಾಗಣೆಯಿಂದ ರೈಲ್ವೆಗೆ 53ಸಾ.ಕೋಟಿ ಆದಾಯ
2008-09ನೇ ಸಾಲಿನಲ್ಲಿ ಅಗತ್ಯ ವಸ್ತುಗಳ ಸಾಗಣೆಯಲ್ಲಿ ರೈಲ್ವೆ ಇಲಾಖೆ ಸುಮಾರು 53ಸಾವಿರ ಕೋಟಿ ರೂಪಾಯಿ ಸಂಪಾದಿಸಿರುವುದಾಗಿ ತಿಳಿಸಿದ್ದು, ಅದರಲ್ಲಿ 20ಸಾವಿರ ಕೋಟಿ ರೂ.ಕೇವಲ ಕಲ್ಲಿದ್ದಲು ಸಾಗಣೆಯಿಂದ ಗಳಿಸಿರುವುದಾಗಿದೆ ಎಂದು ತಿಳಿಸಿದೆ.

ಪ್ರಸಕ್ತ ಆರ್ಥಿಕ ವರ್ಷದಲ್ಲಿ ರೈಲ್ವೆ ಇಲಾಖೆ ಅಗತ್ಯ ವಸ್ತುಗಳ ಸರಕು ಸಾಗಣೆಯಿಂದಾಗಿ 53,137ಕೋಟಿ ರೂಪಾಯಿ ಆದಾಯ ಗಳಿಸಿರುವುದಾಗಿ ತಿಳಿಸಿದ್ದು, ಅದರಲ್ಲಿ 369.41 ಮಿಲಿಯನ್ ಟನ್ ಕಲ್ಲಿದ್ದಲು ಸಾಗಣೆಯಿಂದ 20,029ಕೋಟಿ ರೂ. ಆದಾಯ ಗಳಿಸಿರುವುದಾಗಿ ರೈಲ್ವೆ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಸಕ್ತ ಆರ್ಥಿಕ ವರ್ಷದ ಸಾಗಟದಲ್ಲಿ ಕಲ್ಲಿದ್ದಲು ಅಲ್ಲದೇ, ಇನ್ನಿತರ ವಸ್ತುಗಳಾದ ಸಿಮೆಂಟ್, ಆಹಾರ ವಸ್ತು, ಪೆಟ್ರೋಲಿಯಂ ಆಯಿಲ್, ಲ್ಯೂಬ್ರಿಕೆಂಟ್, ಐರನ್ ಓರ್ ಮತ್ತು ಸ್ಟೀಲ್ ಸಾಗಣೆಯನ್ನು ಕೂಡ ಸೇರಿದೆ.

ಏಪ್ರಿಲ್ ತಿಂಗಳೊಂದರಲ್ಲಿಯೇ ಸರಕು ಸಾಗಣೆಯ ಶುಲ್ಕದಿಂದ 4,571ಕೋಟಿ ರೂಪಾಯಿ ಗಳಿಸಿರುವುದಾಗಿ ಇಲಾಖೆ ಹೇಳಿದೆ. ಇದರಲ್ಲಿ 1866ಕೋಟಿ ರೂಪಾಯಿ ಕಲ್ಲಿದ್ದಲು ಸಾಗಣೆಯ ಶುಲ್ಕ ಸೇರಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪೆಟ್ರೋಲ್-ಡಿಸೇಲ್ ಬೆಲೆಯಲ್ಲಿ ಹೆಚ್ಚಳ ಸಾಧ್ಯತೆ
ಅಮೆರಿಕದಲ್ಲಿ ಸಾವಿರ ನೂತನ ನೌಕರರ ನೇಮಕ: ಇನ್ಫೋಸಿಸ್
ಸ್ಕೋಡಾದಿಂದ 'ನೂತನ ಲೌರಾ' ಮಾರುಕಟ್ಟೆಗೆ
ಹಣದುಬ್ಬರ ಶೇ.0.61ಕ್ಕೆ ಏರಿಕೆ
'ಪ್ಲೇಮ್' ಪೇಟೆಂಟ್ ಪ್ರಕರಣ: ಬಜಾಜ್ ವಿರುದ್ಧ ಟಿವಿಎಸ್‌‌ಗೆ ಜಯ
ಹೋಟೆಲ್ ಉದ್ಯಮ ಚೇತರಿಕೆ ನಿರೀಕ್ಷೆ: ಎಫ್‌ಎಚ್‌ಆರ್‌ಎಐ