ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ದೆಹಲಿ: ಏರ್‌‌ಟೆಲ್ ಎಸ್‌‌ಟಿಡಿ ದರ ನಿಮಿಷಕ್ಕೆ 75ಪೈಸೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ದೆಹಲಿ: ಏರ್‌‌ಟೆಲ್ ಎಸ್‌‌ಟಿಡಿ ದರ ನಿಮಿಷಕ್ಕೆ 75ಪೈಸೆ
ದೆಹಲಿ ಮತ್ತು ನ್ಯಾಶನಲ್ ಕ್ಯಾಪಿಟಲ್ ಪ್ರದೇಶಗಳಲ್ಲಿನ ಪ್ರೀ ಪೆಯ್ಡ್ ಗ್ರಾಹಕರಿಗೆ ಅನುಕೂಲವಾಗುವಂತೆ ವಿಶೇಷ ಎಸ್‌‌ಟಿಡಿ ಪ್ಯಾಕೇಜ್ ದರದ ಅನ್ವಯ ಪ್ರತಿನಿಮಿಷಕ್ಕೆ 75 ಪೈಸೆ ಮಾಡಿರುವುದಾಗಿ ಟೆಲಿಕಾಂನ ಬೃಹತ್ ಸಂಸ್ಥೆಯಾದ ಭಾರ್ತಿ ಏರ್‌ಟೆಲ್ ಗುರುವಾರ ಘೋಷಿಸಿದೆ.

ಭಾರತದಾದ್ಯಂತ ಅನ್ ಲಿಮಿಟೆಡ್ ಎಸ್‌ಟಿಡಿ ಕರೆಯನ್ನು ಏರ್‌‌ಟೆಲ್ ಗ್ರಾಹಕರು ಅನುಕೂಲವನ್ನು ಪಡೆದುಕೊಳ್ಳುವಂತೆ ಸಂಸ್ಥೆ ತಿಳಿಸಿದೆ. ಯಾವುದೇ ಮೊಬೈಲ್ ಅಥವಾ ದೂರವಾಣಿಗೆ ಎಸ್‌ಟಿಡಿ ಕರೆ ಮಾಡಿದಲ್ಲಿ ಪ್ರತಿನಿಮಿಷಕ್ಕೆ 75ಪೈಸೆ ನಿಗದಿಪಡಿಸಲಾಗಿದೆ.

47ರೂಪಾಯಿಯ ರಿಚಾರ್ಚ್ ಮಾಡಿದಲ್ಲಿ 30 ದಿನಗಳ ಕಾಲಾವಧಿಗೆ ಈ ಸೌಲಭ್ಯ ಪಡೆಯಬಹುದಾಗಿದೆ ಎಂದು ಏರ್‌‌ಟೆಲ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಗ್ರಾಹಕರಿಗೆ ಹೆಚ್ಚಿನ ಅನುಕೂಲವಾಗುವ ನಿಟ್ಟಿನಲ್ಲಿ ಏರ್‌‌ಟೆಲ್ ಎಸ್‌‌ಟಿಡಿ ದರವನ್ನು ಕಡಿತಗೊಳಿಸಿದ್ದು, ಇದು ದೆಹಲಿ ಮತ್ತು ಎನ್‌ಸಿಆರ್ (ನ್ಯಾಶನಲ್ ಕ್ಯಾಪಿಟಲ್ ರಿಜನಲ್) ಪ್ರಿ ಪೇಯ್ಡ್ ಗ್ರಾಹಕರಿಗೆ ಮಾತ್ರ ಅನ್ವಯ ಆಗಲಿದೆ ಎಂದು ಭಾರ್ತಿ ಏರ್‌ಟೆಲ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಶಿ ಆರೋರಾ ಹೇಳಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸರಕು ಸಾಗಣೆಯಿಂದ ರೈಲ್ವೆಗೆ 53ಸಾ.ಕೋಟಿ ಆದಾಯ
ಪೆಟ್ರೋಲ್-ಡಿಸೇಲ್ ಬೆಲೆಯಲ್ಲಿ ಹೆಚ್ಚಳ ಸಾಧ್ಯತೆ
ಅಮೆರಿಕದಲ್ಲಿ ಸಾವಿರ ನೂತನ ನೌಕರರ ನೇಮಕ: ಇನ್ಫೋಸಿಸ್
ಸ್ಕೋಡಾದಿಂದ 'ನೂತನ ಲೌರಾ' ಮಾರುಕಟ್ಟೆಗೆ
ಹಣದುಬ್ಬರ ಶೇ.0.61ಕ್ಕೆ ಏರಿಕೆ
'ಪ್ಲೇಮ್' ಪೇಟೆಂಟ್ ಪ್ರಕರಣ: ಬಜಾಜ್ ವಿರುದ್ಧ ಟಿವಿಎಸ್‌‌ಗೆ ಜಯ