ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ರಕ್ತದ ಅವಶ್ಯಕತೆ ಇದೆಯೇ? ಏರ್‌‌ಟೆಲ್‌ಗೆ ಕರೆ ಮಾಡಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಕ್ತದ ಅವಶ್ಯಕತೆ ಇದೆಯೇ? ಏರ್‌‌ಟೆಲ್‌ಗೆ ಕರೆ ಮಾಡಿ
ಜೀವರಕ್ಷಕವಾದ ರಕ್ತದ ಅವಶ್ಯಕತೆ ಯಾರಿಗೆ ಇರುತ್ತದೆಯೋ ಅಂತಹ ಏರ್‌ಟೆಲ್ ಗ್ರಾಹಕರಿಗೆ ಸಹಾಯವಾಣಿಯ ಸೇವೆಯನ್ನು ಒದಗಿಸಲಾಗುತ್ತಿದೆ. ಏರ್‌ಟೆಲ್ ಗ್ರಾಹಕರು ತಮ್ಮ ಮೊಬೈಲ್‌ನಿಂದ 51414ಗೆ ಉಚಿತ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದಾಗಿದೆ.

ಐವಿಆರ್ ಆಧಾರಿತ ಈ ತುರ್ತು ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ, ಅವಶ್ಯಕತೆ ಇರುವ ರಕ್ತದ ಗುಂಪಿನ ಮಾಹಿತಿ, ವಿಳಾಸದ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳಬಹುದಾ ಗಿದೆ. ರಕ್ತ ನೀಡುವವರು, ರಕ್ತದ ಅವಶ್ಯಕತೆ ಇರುವವರು ಮತ್ತು ರಕ್ತ ನಿಧಿಯ ನಡುವಿನ ಅಂತರವನ್ನು ಸಾಧ್ಯವಾದಷ್ಟು ಕಡಿತಗೊಳಿಸುವ ಉದ್ದೇಶವನ್ನು ಏರ್‌ಟೆಲ್ ಹೊಂದಿದೆ.

ಜೊತೆಗೆ ಮಕ್ಕಳಿಗೆ ನೀಡುವ ಲಸಿಕೆ ದಿನಗಳನ್ನು ನೆನಪಿಸುವ ವಿನೂತನ ಸೇವೆಯನ್ನೂ ವ್ಯಾಕ್ಸಿಡೇಟ್ ಹೆಸರಿನಲ್ಲಿ ಏರ್‌ಟೆಲ್ ಆರಂಭಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ನೊಂದಣಿಯು ಸಂಪೂರ್ಣ ಉಚಿತ. ಈ ಸೇವೆಯನ್ನು ಪಡೆದುಕೊಳ್ಳುವ ಮೂಲಕ ಪೋಷಕರು ತಮ್ಮ ಮಕ್ಕಳಿಗೆ ನೀಡಬೇಕಾಗಿರುವ ಲಸಿಕೆ ದಿಗಳನ್ನು ಸುಲಭವಾಗಿ ನೆನಪಿಟ್ಟುಕೊಳ್ಳಬಹುದು.

ಈ ಸೇವೆಗಾಗಿ ಏರ್‌ಟೆಲ್ ಗ್ರಾಹಕರು vacc ಎಂದು ಇಂಗ್ಲಿಷ್‌ನಲ್ಲಿ ಟೈಪ್ ಮಾಡಿ ಅದರ ಮುಂದೆ ಜನ್ಮ ದಿನಾಂಕವನ್ನು ದಿನ, ತಿಂಗಳು,ವರ್ಷ ಮಾದರಿಯಲ್ಲಿ ನಮೂದಿಸಿ 52225ಗೆ ಎಸ್‌ಎಂಎಸ್ ಕಳುಹಿಸಬೇಕು ಎಂದು ತಿಳಿಸಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಚಿನ್ನ ದರ ಏರಿಕೆ
ಬಜಾಜ್ ನಿವ್ವಳ ಲಾಭದಲ್ಲಿ ಕುಸಿತ
ಆದಾಯ ತೆರಿಗೆ ಮಿತಿ 2ಲಕ್ಷ ರೂ.ಸಾಧ್ಯತೆ
ದೆಹಲಿ: ಏರ್‌‌ಟೆಲ್ ಎಸ್‌‌ಟಿಡಿ ದರ ನಿಮಿಷಕ್ಕೆ 75ಪೈಸೆ
ಸರಕು ಸಾಗಣೆಯಿಂದ ರೈಲ್ವೆಗೆ 53ಸಾ.ಕೋಟಿ ಆದಾಯ
ಪೆಟ್ರೋಲ್-ಡಿಸೇಲ್ ಬೆಲೆಯಲ್ಲಿ ಹೆಚ್ಚಳ ಸಾಧ್ಯತೆ