ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಗುಜರಾತ್ ಮಾರುಕಟ್ಟೆಯತ್ತ ಏರ್‌ಸೆಲ್ ಚಿತ್ತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಗುಜರಾತ್ ಮಾರುಕಟ್ಟೆಯತ್ತ ಏರ್‌ಸೆಲ್ ಚಿತ್ತ
ಗುಜರಾತ್ ದೂರವಾಣಿ ಮಾರುಕಟ್ಟೆ ಮತ್ತಷ್ಟು ಸ್ಪರ್ಧೆಯನ್ನು ಕಾಣಲಿದೆ. ರಾಜ್ಯದ ಸರಾಸರಿ ಪ್ರತಿ ಇಬ್ಬರು ಮೊಬೈಲ್ ಫೋನ್ ಸಂಪರ್ಕ ಹೊಂದಿದ್ದಾರೆ. ಆದರೆ ಇದೀಗ ಏರ್‌ಸೆಲ್ ಮತ್ತು ಸಿಸ್ಟೆಮಾ ಮೊಬೈಲ್ ಗುಜರಾತ್‌ಗೆ ಪ್ರವೇಶ ಪಡೆಯುವ ಸನ್ನಾಹದಲ್ಲಿದೆ.

ಪ್ರಸಕ್ತ ಸಾಲಿನ ಕೊನೆಯಲ್ಲಿ ಏರ್‌ಸೆಲ್ ಹಾಗೂ ಸಿಸ್ಟೆಮಾ ಶ್ಯಾಮ್ ಕೂಡ ಗುಜರಾತ್‌ನಲ್ಲಿ ಮೊಬೈಲ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ಹೇಳಿದೆ. ಈಗಾಗಲೇ ಗುಜರಾತ್‌ನಲ್ಲಿ ಮೊಬೈಲ್ ಮೇನಿಯಾ ಎಂಬಂತೆ ಎಲ್ಲರಲ್ಲಿಯೂ ಮೊಬೈಲ್ ಇದ್ದು, ಮಾರ್ಕೆಟ್ ಮೇಲೆ ಕಣ್ಣಿಟ್ಟಿರುವ ಈ ಎರಡು ಕಂಪೆನಿಗಳು ಕೂಡ ಶೀಘ್ರದಲ್ಲೇ ಮೊಬೈಲ್ ಗುಜರಾತ್ ಮಾರುಕಟ್ಟೆಗೆ ಮೊಬೈಲ್ ಬಿಡುಗಡೆ ಮಾಡುವುದಾಗಿ ಘೋಷಿಸಿವೆ.

ದೇಶಾದ್ಯಂತ ಉಳಿದ 13ನಗರಗಳಲ್ಲಿ ಮಾರುಕಟ್ಟೆಯನ್ನು ವಿಸ್ತರಿಸುವ ಯೋಜನೆ ಹೊಂದಿರುವ ಏರ್‌ಸೆಲ್ ಹಾಗೂ ಸಿಸ್ಟೆಮಾ ಶ್ಯಾಮ್ ಟೆಲಿಸರ್ವಿಸ್ ಲಿಮಿಟೆಡ್ ಕೂಡ ಗುಜರಾತ್‌ನಲ್ಲಿ ಮಾರುಕಟ್ಟೆ ಹೊಂದುವ ಮಹತ್ವಾಕಾಂಕ್ಷೆ ಹೊಂದಿದೆ. ಈಗಾಗಲೇ ಈ ಎರಡು ಕಂಪೆನಿಗಳು ಲಕ್ಷಾಂತರ ಗ್ರಾಹಕರನ್ನು ಹೊಂದಿದೆ. ಮುಂದಿನ 3-4ವರ್ಷಗಳಲ್ಲಿ 30ರಿಂದ 40ಲಕ್ಷ ಮಿಲಿಯನ್ ಗ್ರಾಹಕರನ್ನು ಹೊಂದುವ ಗುರಿ ಹೊಂದಿರುವ ಕಂಪೆನಿಗಳು ಗುಜರಾತ್ ಮಾರುಕಟ್ಟೆ ಮೇಲೆ ಕಣ್ಣಿಟ್ಟಿವೆ.

ಏರ್ ಸೆಲ್ ಜಿಎಸ್ಎಂ ಸ್ಪೇಸ್ ಹೊಂದಿದ್ದರೆ, ಸಿಸ್ಟೆಮಾ ಶ್ಯಾಮ್ ಸಿಡಿಎಂಎ ತಂತ್ರಜ್ಞಾನ ಹೊಂದಿದೆ. ಪ್ರಸ್ತುತ ಗುಜರಾತ್‌ನಲ್ಲಿ ಜಿಎಸ್‌ಎಂ ತಂತ್ರಜ್ಞಾನ ಹೊಂದಿರುವ ವೋಡಾಫೋನ್ ಎಸ್ಸಾರ್, ಏರ್‌ಟೆಲ್, ಐಡಿಯಾ ಸೆಲ್ಯೂಲರ್ ಮತ್ತು ಬಿಎಸ್‌‌ಎನ್‌ಎಲ್ ಹಾಗೂ ಸಿಡಿಎಂಎ ತಂತ್ರಜ್ಞಾನದ ರಿಲಯನ್ಸ್ ಮತ್ತು ಟಾಟಾ ಇಂಡಿಕಾಂ ಪೈಪೋಟಿಯಲ್ಲಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಬ್ರಿಟನ್ ಏರ್‌ವೇಸ್‌ಗೆ 590ಮಿ.ಡಾಲರ್ ನಷ್ಟ
ರಕ್ತದ ಅವಶ್ಯಕತೆ ಇದೆಯೇ? ಏರ್‌‌ಟೆಲ್‌ಗೆ ಕರೆ ಮಾಡಿ
ಚಿನ್ನ ದರ ಏರಿಕೆ
ಬಜಾಜ್ ನಿವ್ವಳ ಲಾಭದಲ್ಲಿ ಕುಸಿತ
ಆದಾಯ ತೆರಿಗೆ ಮಿತಿ 2ಲಕ್ಷ ರೂ.ಸಾಧ್ಯತೆ
ದೆಹಲಿ: ಏರ್‌‌ಟೆಲ್ ಎಸ್‌‌ಟಿಡಿ ದರ ನಿಮಿಷಕ್ಕೆ 75ಪೈಸೆ