ರೈತರಿಗೆ ಇನ್ನಷ್ಟು ಅನುಕೂಲವಾಗುವ ನಿಟ್ಟಿನಲ್ಲಿ ಬಹುಪಯೋಗಿ ಭತ್ತದ ನಾಟಿ ಯಂತ್ರವನ್ನು ಬೆಂಗಳೂರಿನ ವಿಎಸ್ಟಿ ಟಿಲ್ಲರ್ಸ್ ಮತ್ತು ಟ್ರಾಕ್ಟರ್ಸ್ ಬಿಡುಗಡೆಗೊಳಿಸಿದೆ.
ರೈತರು ಚಿಂತೆ ಮರೆತು ಯಾವುದೇ ಶ್ರಮವಿಲ್ಲದೆ ಭತ್ತದ ನಾಟಿ ಕೆಲಸ ಮುಗಿಸಬಲ್ಲ ವಿಎಸ್ಟಿ ಶಕ್ತಿ ಎಂಟು ಸಾಲು ಭತ್ತ ನಾಟಿ ಯಂತ್ರ ಪ್ರತಿ ಎಕರೆ ನಾಟಿ ಕಾರ್ಯದ ವೆಚ್ಚವನ್ನು ಸುಮಾರು 1 ಸಾವಿರ ರೂ.ಗಳಷ್ಟು ಉಳಿಸುವುದಲ್ಲದೆ. ಇಳುವರಿಯಲ್ಲೂ ಶೇ.1.5ರಷ್ಟು ಹೆಚ್ಚಳ ಸಾಧಿಸಲು ಸಹಕಾರಿ ಎಂದು ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಬಿಸಿಎಸ್ ಅಯ್ಯಂಗಾರ್ ತಿಳಿಸಿದ್ದಾರೆ.
ಒಂದೇ ದಿನದಲ್ಲಿ 4ಎಕರೆ ನಾಟಿ ಕೆಲಸ ಮುಗಿಸಬಲ್ಲ ಈ ಸರಳ, ಅಲ್ಪ ವೆಚ್ಚದ ಯಂತ್ರ ಖರೀದಿಗೆ ಸರ್ಕಾರ 65,000 ರೂ.ಸಹಾಯಧನ ನೀಡುತ್ತಿರುವುದು ವಿಎಸ್ಟಿ ಶಕ್ತಿ ಉಪಯುಕ್ತತೆಗೆ ಮತ್ತೊಂದು ನಿದರ್ಶನವಾಗಿದೆ.
ವಿಎಸ್ಟಿ ಶಕ್ತಿ ಭತ್ತ ನಾಟಿ ಯಂತ್ರವನ್ನು ಜನಪ್ರಿಯಗೊಳಿಸಲು ಕೃಷಿ ಇಲಾಖೆ ಸಹ ಕಾರ್ಯಕ್ರಮ ರೂಪಿಸುತ್ತಿದೆ. ಸರ್ಕಾರಿ ಸಹಾಯಧನ ರಿಯಾಯಿತಿ ಬೆಲೆ 99,800ರೂ.ಗೆ ವಿಎಸ್ಟಿ ಶಕ್ತಿ ಲಭ್ಯ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ. |