ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಸತ್ಯಂನಲ್ಲಿ 10 ಸಾವಿರ ಹೆಚ್ಚುವರಿ ಸಿಬ್ಬಂದಿಗಳು:ಟೆಕ್ ಮಹೀಂದ್ರಾ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸತ್ಯಂನಲ್ಲಿ 10 ಸಾವಿರ ಹೆಚ್ಚುವರಿ ಸಿಬ್ಬಂದಿಗಳು:ಟೆಕ್ ಮಹೀಂದ್ರಾ
ಸತ್ಯಂ ಕಂಪ್ಯೂಟರ್ ಸಂಸ್ಥೆಯ 40 ಸಾವಿರ ಸಿಬ್ಬಂದಿಗಳಲ್ಲಿ 10 ಸಾವಿರ ಉದ್ಯೋಗಿಗಳು ಹೆಚ್ಚುವರಿಯಾಗಿದ್ದಾರೆ ಎಂದು ಸತ್ಯಂ ಸಂಸ್ಥೆಯನ್ನು ಖರೀದಿಸಿದ ಟೆಕ್ ಮಹೀಂದ್ರಾ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.

ಸತ್ಯಂ ಸಂಸ್ಥೆಯ 40 ಸಾವಿರ ಉದ್ಯೋಗಿಗಳಲ್ಲಿ 10 ಸಾವಿರ ನೌಕರರು ಹೆಚ್ಚುವರಿಯಾಗಿದ್ದು, ಹೆಚ್ಚುವರಿ ನೌಕರರ ಸಮಸ್ಯೆ ಇತ್ಯರ್ಥಕ್ಕೆ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಟೆಕ್ ಮಹೀಂದ್ರಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿನೀತ್ ನಯ್ಯರ್ ಕಂಪೆನಿಯ ಅಡಳಿತ ಮಂಡಳಿಯ ಸದಸ್ಯರ ಸಭೆಯ ನಂತರ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಏತನ್ಮಧ್ಯೆ, ಸತ್ಯಂ ಅಡಳಿತ ಮಂಡಳಿಯ ಅಧ್ಯಕ್ಷರಾದ ಕಿರನ್ ಕಾರ್ನಿಕ್ ಅವರು ಮಾತನಾಡಿ, ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಲಾಗಿಲ್ಲ. ಆದರೆ ಹೆಚ್ಚುವರಿ ಉದ್ಯೋಗಿಗಳನ್ನು ಯಾವ ರೀತಿ ಹೊಂದಾಣಿಕೆ ಮಾಡಬೇಕು ಎನ್ನುವ ಕುರಿತಂತೆ ಚರ್ಚಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಕಳೆದ ತಿಂಗಳು ಟೆಕ್ ಮಹೀಂದ್ರಾ, ಸಂಸ್ಥೆ ಹೈದ್ರಾಬಾದ್ ಮೂಲದ ಸತ್ಯಂ ಕಂಪೆನಿಯ ಶೇ.51ರಷ್ಟು ಶೇರುಗಳನ್ನು ಮುಕ್ತ ಹರಾಜಿನಲ್ಲಿ 2990 ಕೋಟಿ ರೂಪಾಯಿಗಳನ್ನು ಪಾವತಿಸಿ ಖರೀದಿಸಿತ್ತು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ತೆರಿಗೆ ರಿಯಾಯಿತಿ ಸಾಧ್ಯತೆ ಕಡಿಮೆ
ಹಡಗು ನಿರ್ಮಾಣ ಉದ್ಯಮಕ್ಕೆ ಪ್ಯಾಕೇಜ್: ಕೇಂದ್ರ
ಭಾರ್ತಿ, ಇನ್ಫೋಸಿಸ್, ವಿಪ್ರೋ ಪ್ರಪಂಚದ ಅತ್ಯುತ್ತಮ ಐಟಿ ಕಂಪೆನಿ
ಸತ್ಯಂಗೆ ಮತ್ತೆ 4ನೂತನ ನಿರ್ದೇಶಕರ ನೇಮಕ
ಭಾರತದಲ್ಲಿ 800ಕೋಟಿ ರೂ.ಹೂಡಿಕೆ: ಎಲ್‌ಜಿ
ಬೆಂಗಳೂರು: ರೈತಮಿತ್ರ - 'ವಿಎಸ್‌ಟಿ ಶಕ್ತಿ ಟಿಲ್ಲರ್ಸ್'