ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಕಡಿಮೆ ವೆಚ್ಚದ ಪ್ರವಾಸಕ್ಕೆ ಕೊನೆ ಅವಕಾಶ!
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಡಿಮೆ ವೆಚ್ಚದ ಪ್ರವಾಸಕ್ಕೆ ಕೊನೆ ಅವಕಾಶ!
ಪ್ರಸಕ್ತ ರಜಾ ದಿನಗಳ ಅವಧಿಯಲ್ಲಿ ವಿದೇಶ ಪ್ರವಾಸ ಕೈಗೊಳ್ಳುವ ರಜಾ ಪ್ರಿಯರಿಗೆ ವಿಮಾನಯಾನ ಸಂಸ್ಥೆಗಳು ದರ ಕಡಿತದ ಅಂತಿಮ ಕರೆಯನ್ನು ನೀಡಿವೆ.ಮುಂದಿನ ತಿಂಗಳಲ್ಲಿ ದರ ಏರಿಕೆಯಾಗಲಿರುವುದರಿಂದ ದರ ಕಡಿತದ ಸದುಪಯೋಗಪಡಿಸಿಕೊಳ್ಳಬೇಕು ಎಂದು ಏರ್‌ಲೈನ್ ಸಂಸ್ಥೆಗಳು ಪ್ರವಾಸಿಗರಿಗೆ ಮನವಿ ಮಾಡಿವೆ.

ಶುಕ್ರವಾರದಂದು ಲುಫ್ಥಾನ್ಸಾ ಏರ್‌ಲೈನ್ಸ್ ಶೇ.50 ರಷ್ಟು ನೀಡಿದ ರಿಯಾಯಿತಿಯನ್ನು ಹಿಂದಕ್ಕೆ ತೆಗೆದುಕೊಂಡಿದೆ. ದಕ್ಷಿಣ ಏಷ್ಯಾದ ದೈತ ವಿಮಾನಯಾನ ಸಂಸ್ಥೆ ಸಿಂಗಾಪೂರ್ ಏರ್‌ಲೈನ್ಸ್ ಕೂಡಾ ಸಿಂಗಾಪೂರ್‌ಗೆ ತೆರಳುವ ಪ್ರವಾಸಿಗರಿಗೆ ಹೋಗಿಬರುವ ಟಿಕೆಟ್ ದರವನ್ನು ಕೇವಲ 11 ಸಾವಿರ ರೂಪಾಯಿಗಳಿಗೆ ದರ ಕಡಿತಗೊಳಿಸಿ ನಿಗದಿಪಡಿಸಿತ್ತು. ಭಾರತದಿಂದ ಚೀನಾಗೆ 22 ಸಾವಿರ, ಪರ್ತ್‌ಗೆ 25 ಸಾವಿರ ಹಾಗೂ ಆಸ್ಟ್ರೇಲಿಯಾ ನಗರಗಳಿಗೆ ಹೋಗಿಬರುವ ಟಿಕೆಟ್ ದರವನ್ನು 36 ಸಾವಿರ ರೂಪಾಯಿಗಳಿಗೆ ಕಡಿತಗೊಳಿಸಿದೆ.

ಮೇ 25 ರಿಂದ ಸಿಂಗಾಪೂರ್‌ಗೆ ತೆರಳುವ ಪ್ರವಾಸಿಗರಿಗಾಗಿ ಮುಂಬರುವ ಮೇ.29 ರವರೆಗೆ ದರ ಕಡಿತದ ಅವಧಿಯನ್ನು ವಿಸ್ತರಿಸಿದ್ದು, ಚೀನಾ ಮತ್ತು ಆಸ್ಟ್ರೇಲಿಯಾಗೆ ತೆರಳುವ ಪ್ರವಾಸಿಗರಿಗೆ ಜೂನ್‌ 12ರ ವರೆಗೆ ವಿಸ್ತರಿಸಲಾಗಿದೆ ಎಂದು ವಿಮಾನಯಾನ ಸಂಸ್ಥೆ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.

ಆದರೆ, ಏರ್‌ಇಂಡಿಯಾ ವಿಮಾನಯಾನ ಸಂಸ್ಥೆ, ಲಂಡನ್‌ಗೆ ತೆರಳುವ ಪ್ರವಾಸಿಗರಿಗೆ 21,900 ರೂಪಾಯಿ ಹಾಗೂ ನ್ಯೂಯಾರ್ಕ್‌ಗೆ 42ಸಾವಿರ ರೂಪಾಯಿಗಳ ದರ ಕಡಿತವನ್ನು ಮುಂದುವರಿಸಲು ನಿರ್ಧರಿಸಿದೆ.

ಬ್ರಿಟಿಷ್ ಏರ್‌ವೇಸ್ ಕೂಡಾ ಪ್ರಥಮ ದರ್ಜೆ ಹಾಗೂ ಬಿಜಿನೆಸ್ ದರ್ಜೆಯ ಪ್ರವಾಸಿಗರಿಗೆ ನಿಗದಿತ ಅವಧಿಯವರೆಗೆ ಶೇ.50 ರಷ್ಟು ರಿಯಾಯಿತಿಯನ್ನು ಘೋಷಿಸಿದ್ದು, ಸ್ಥಿರ ಸರಕಾರ ಅಸ್ಥಿತ್ವಕ್ಕೆ ಬಂದಿರುವುದರಿಂದ ಉಭಯ ದೇಶಗಳ ನಡುವೆ ವಹಿವಾಟು ಏರಿಕೆಯಾಗುವ ಸಾಧ್ಯತೆ ಹಾಗೂ ವಿದೇಶಗಳಲ್ಲಿ ಶಾಲೆಗಳಿಗೆ ರಜೆಗಳಿರುವುದರಿಂದ ಪ್ರಯಾಣಿಕರ ಒತ್ತಡ ಹೆಚ್ಚಳವಾಗುವ ನಿರೀಕ್ಷೆಯಿಂದಾಗಿ ಮುಂದಿನ ದಿನಗಳಲ್ಲಿ ಟಿಕೆಟ್ ದರಗಳು ಏರಿಕೆಯಾಗಲಿವೆ ಎಂದು ಏರ್‌ಲೈನ್ಸ್‌ ಮೂಲಗಳು ತಿಳಿಸಿವೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಆರ್ಥಿಕ ಸುಸ್ಥಿತಿಗೆ ಮೊದಲ ಆದ್ಯತೆ: ಪ್ರಧಾನಿ
ಸತ್ಯಂನಲ್ಲಿ 10 ಸಾವಿರ ಹೆಚ್ಚುವರಿ ಸಿಬ್ಬಂದಿಗಳು:ಟೆಕ್ ಮಹೀಂದ್ರಾ
ತೆರಿಗೆ ರಿಯಾಯಿತಿ ಸಾಧ್ಯತೆ ಕಡಿಮೆ
ಹಡಗು ನಿರ್ಮಾಣ ಉದ್ಯಮಕ್ಕೆ ಪ್ಯಾಕೇಜ್: ಕೇಂದ್ರ
ಭಾರ್ತಿ, ಇನ್ಫೋಸಿಸ್, ವಿಪ್ರೋ ಪ್ರಪಂಚದ ಅತ್ಯುತ್ತಮ ಐಟಿ ಕಂಪೆನಿ
ಸತ್ಯಂಗೆ ಮತ್ತೆ 4ನೂತನ ನಿರ್ದೇಶಕರ ನೇಮಕ