ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಉದ್ಯೋಗ ಮಾರುಕಟ್ಟೆ ಚೇತರಿಸಿಕೊಳ್ಳುತ್ತಿದೆ: ಅಂಟಲ್ಸ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಉದ್ಯೋಗ ಮಾರುಕಟ್ಟೆ ಚೇತರಿಸಿಕೊಳ್ಳುತ್ತಿದೆ: ಅಂಟಲ್ಸ್
ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಅನಿಶ್ಚಿತತೆಯ ನಡುವೆಯೂ ಭಾರತದ ಉದ್ಯೋಗ ಮಾರುಕಟ್ಟೆ ಚೇತರಿಸಿಕೊಳ್ಳುವ ಲಕ್ಷಣಗಳನ್ನು ತೋರಿಸುತ್ತಿದ್ದು, ಉದ್ಯೋಗ ನೀಡುವಿಕೆಯಲ್ಲಿ ಶೇ.47 ರಷ್ಟು ಪ್ರಗತಿ ಸಾಧಿಸಿದೆ ಎಂದು ಅಧ್ಯಯನ ನಡೆಸಿದ ಸಂಸ್ಥೆಯೊಂದು ಪ್ರಕಟಿಸಿದೆ.

2009ರ ಆರಂಭಿಕ ಹಂತದಲ್ಲಿ ಉದ್ಯೋಗ ನೀಡುವಿಕೆಯಲ್ಲಿ ಕೆಲ ಮಟ್ಟಿಗೆ ಕುಸಿತ ಕಂಡುಬಂದಿದ್ದು, ಮುಂಬರುವ ದಿನಗಳಲ್ಲಿ ಉದ್ಯೋಗ ಮಾರುಕಟ್ಟೆ ಚೇತರಿಸಿಕೊಳ್ಳುವ ಸಾಧ್ಯತೆಗಳಿವೆ ಎಂದು ಗ್ಲೋಬಲ್ ಮ್ಯಾನೇಜ್‌ಮೆಂಟ್ ಆಂಡ್ ಪ್ರೋಫೇಶನಲ್‌ ರಿಕ್ರೂಟ್‌ಮೆಂಟ್‌ ಸಂಸ್ಥೆ ಪ್ರಕಟಿಸಿದ ಅಧ್ಯಯನ ವರದಿಯಲ್ಲಿ ತಿಳಿಸಿದೆ.

ಕಳೆದ ವರ್ಷದ ಅ ವಧಿಯಲ್ಲಿ ಉದ್ಯೋಗ ಮಾರುಕಟ್ಟೆ ಶೇ.29 ರಷ್ಟು ಕುಸಿತ ಕಂಡಿದ್ದು ಪ್ರಸಕ್ತ ಅವಧಿಯಲ್ಲಿ ಶೇ.47ರಷ್ಟು ಚೇತರಿಕೆ ಕಂಡಿದೆ ಎಂದು ಅಂಟಲ್ ಇಂಟರ್‌ನ್ಯಾಷನಲ್, ಗ್ಲೋಬಲ್ ಸ್ನ್ಯಾಪ್‌ಶಾಟ್‌ ಎನ್ನುವ ವರದಿಯಲ್ಲಿ ಪ್ರಕಟಿಸಿದೆ.

ಉದ್ಯೋಗ ಕಳೆದುಕೊಳ್ಳುವ ಭೀತಿ ನಿಧಾನವಾಗಿ ದೂರವಾಗುತ್ತಿದ್ದು,ಮುಂದಿನ ದಿನಗಳಲ್ಲಿ ಉತ್ತಮ ಉದ್ಯೋಗವಕಾಶಗಳು ಲಭ್ಯವಾಗಲಿವೆ ಎಂದು ಅಂಟಲ್ಸ್‌ನ ಮುಖ್ಯಕಾರ್ಯನಿರ್ವಹಣಾಧಿಕಾರಿ ಟೋನಿ ಗುಡ್‌ವಿನ್ ತಿಳಿಸಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕಡಿಮೆ ವೆಚ್ಚದ ಪ್ರವಾಸಕ್ಕೆ ಕೊನೆ ಅವಕಾಶ!
ಆರ್ಥಿಕ ಸುಸ್ಥಿತಿಗೆ ಮೊದಲ ಆದ್ಯತೆ: ಪ್ರಧಾನಿ
ಸತ್ಯಂನಲ್ಲಿ 10 ಸಾವಿರ ಹೆಚ್ಚುವರಿ ಸಿಬ್ಬಂದಿಗಳು:ಟೆಕ್ ಮಹೀಂದ್ರಾ
ತೆರಿಗೆ ರಿಯಾಯಿತಿ ಸಾಧ್ಯತೆ ಕಡಿಮೆ
ಹಡಗು ನಿರ್ಮಾಣ ಉದ್ಯಮಕ್ಕೆ ಪ್ಯಾಕೇಜ್: ಕೇಂದ್ರ
ಭಾರ್ತಿ, ಇನ್ಫೋಸಿಸ್, ವಿಪ್ರೋ ಪ್ರಪಂಚದ ಅತ್ಯುತ್ತಮ ಐಟಿ ಕಂಪೆನಿ