ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಜುಲೈ 31ರೊಳಗಾಗಿ ಬಜೆಟ್‌ಗೆ ಅನುಮೋದನೆ:ಚಿದಂಬರಂ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜುಲೈ 31ರೊಳಗಾಗಿ ಬಜೆಟ್‌ಗೆ ಅನುಮೋದನೆ:ಚಿದಂಬರಂ
ನೂತನವಾಗಿ ಅಧಿಕಾರಕ್ಕೆ ಬಂದ ಯುಪಿಎ ಸರಕಾರ ಜುಲೈ 31ರೊಳಗೆ 2009-10ರ ಬಜೆಟ್‌‌ ಮಂಡನೆಗೆ ಸಂಸತ್ತಿನಿಂದ ಅನುಮೋದನೆ ಪಡೆಯುವ ಸಾಧ್ಯತೆಗಳಿವೆ ಎಂದು ಗೃಹ ಸಚಿವ ಪಿ.ಚಿದಂಬರಂ ಹೇಳಿದ್ದಾರೆ.

15ನೇ ಲೋಕಸಭೆಯ ಪ್ರಥಮ ಅಧಿವೇಶನ ಜೂನ್ 1 ರಿಂದ ಜೂನ್ 9 ರವರೆಗೆ ನಡೆಯಲಿದ್ದು, ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ ಎಂದು ಸಚಿವ ಚಿದಂಬರಂ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಜುಲೈ 31ರೊಳಗೆ ಬಜೆಟ್ ಮಂಡನೆಗಾಗಿ ಸಂಸತ್ತಿನ ಅನುಮೋದನೆ ಪಡೆಯುವ ವಿಶ್ವಾಸವಿದೆ.ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಜೂನ್ 4 ರಂದು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ ಎಂದು ನುಡಿದರು.

ಜುಲೈ ಮಾಸಾಂತ್ಯದವರೆಗಿನ ಅವಧಿಗಾಗಿ ಮಧ್ಯಂತರ ಬಜೆಟ್‌ಗಾಗಿ ಸಂಸತ್ತು ಅನುಮೋದನೆ ನೀಡಿದ್ದು,ಮುಂದಿನ ಅವಧಿಯ ಸಂಪೂರ್ಣ ಬಜೆಟ್ ಅನುಮೋದನೆಗಾಗಿ ಸಂಸತ್ತಿನಲ್ಲಿ ಮಂಡಿಸಲಾಗುವುದು ಎಂದು ವಿತ್ತ ಸಚಿವಾಲಯದ ಕಾರ್ಯದರ್ಶಿ ಅಶೋಕ್ ಚಾವ್ಲಾ ತಿಳಿಸಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಉದ್ಯೋಗ ಮಾರುಕಟ್ಟೆ ಚೇತರಿಸಿಕೊಳ್ಳುತ್ತಿದೆ: ಅಂಟಲ್ಸ್
ಕಡಿಮೆ ವೆಚ್ಚದ ಪ್ರವಾಸಕ್ಕೆ ಕೊನೆ ಅವಕಾಶ!
ಆರ್ಥಿಕ ಸುಸ್ಥಿತಿಗೆ ಮೊದಲ ಆದ್ಯತೆ: ಪ್ರಧಾನಿ
ಸತ್ಯಂನಲ್ಲಿ 10 ಸಾವಿರ ಹೆಚ್ಚುವರಿ ಸಿಬ್ಬಂದಿಗಳು:ಟೆಕ್ ಮಹೀಂದ್ರಾ
ತೆರಿಗೆ ರಿಯಾಯಿತಿ ಸಾಧ್ಯತೆ ಕಡಿಮೆ
ಹಡಗು ನಿರ್ಮಾಣ ಉದ್ಯಮಕ್ಕೆ ಪ್ಯಾಕೇಜ್: ಕೇಂದ್ರ