ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಕಂಪ್ಯೂಟರ್‌ ಸಾಫ್ಟ್‌ವೇರ್ ರಫ್ತಿನಲ್ಲಿ ಕುಸಿತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಂಪ್ಯೂಟರ್‌ ಸಾಫ್ಟ್‌ವೇರ್ ರಫ್ತಿನಲ್ಲಿ ಕುಸಿತ
ಜಗತ್ತಿನ ಬಲಾಢ್ಯ ಆರ್ಥಿಕ ರಾಷ್ಟ್ರಗಳಾದ ಅಮೆರಿಕ ಮತ್ತು ಯುರೋಪ್‌ಗಳಲ್ಲಿ ಆರ್ಥಿಕ ಬಿಕ್ಕಟ್ಟು ಎದುರಾಗಿದ್ದರಿಂದ ಭಾರತದ ಸಾಫ್ಟ್‌ವೇರ್ ರಫ್ತಿನಲ್ಲಿ ಶೇ.96.6 ರಷ್ಟು ಕುಸಿತವಾಗಿ 1 ಮಿಲಿಯನ್ ಡಾಲರ್‌ ನಷ್ಟವಾಗಿದೆ ಎಂದು ವಹಿವಾಟಿನ ಮೂಲಗಳು ತಿಳಿಸಿವೆ.

ಕಳೆದ ವರ್ಷದ ಮಾರ್ಚ್‌ ತಿಂಗಳಿನಲ್ಲಿ 29 ಮಿಲಿಯನ್ ಡಾಲರ್ ಸಾಫ್ಟ್‌ವೇರ್ ರಫ್ತು ವಹಿವಾಟು ನಡೆಸಿದ್ದು, ಹಿಂದಿನ ವರ್ಷಕ್ಕೆ ಹೋಲಿಸಿದಲ್ಲಿ ಪ್ರಸಕ್ತ ವರ್ಷದ ರಫ್ತು ವಹಿವಾಟಿನಲ್ಲಿ 1 ಮಿಲಿಯನ್ ಡಾಲರ್ ಕುಸಿತವಾಗಿದೆ ಎಂದು ವಾಣಿಜ್ಯ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

2008-09ರ ಆರ್ಥಿಕ ಸಾಲಿನಲ್ಲಿ ಸಾಫ್ಟ್‌ವೇರ್ ರಫ್ತು ವಹಿವಾಟು ಶೇ. 14.2 ರಷ್ಟು ಕುಸಿತವಾಗಿ 127 ಮಿಲಿಯನ್ ಡಾಲರ್‌ಗಳಿಗೆ ತಲುಪಿದೆ. 2007-08ರ ಆರ್ಥಿಕ ಸಾಲಿನಲ್ಲಿ 148 ಮಿಲಿಯನ್ ಡಾಲರ್‌ಗಳ ವಹಿವಾಟು ನಡೆಸಿತ್ತು.

ಭಾರತದ ಎಲೆಕ್ಟ್ರಾನಿಕ್ ವಸ್ತುಗಳ ರಫ್ತು ವಹಿವಾಟು ಕೂಡಾ ಕಳೆದ ವರ್ಷದ ಮಾರ್ಚ್‌ ತಿಂಗಳಿಗೆ ಹೋಲಿಸಿದಲ್ಲಿ ಶೇ.1.1 ರಷ್ಟು ಕುಸಿತವಾಗಿ 358 ಮಿಲಿಯನ್ ಡಾಲರ್‌ಗಳಿಂದ 354 ಮಿಲಿಯನ್ ಡಾಲರ್‌ಗಳಿಗೆ ತಲುಪಿದೆ ಎಂದು ಸಚಿವಾಲಯ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.

ಆದರೆ, 2008-09ರ ಆರ್ಥಿಕ ಸಾಲಿನಲ್ಲಿ ಸಾಗರೋತ್ತರ ದೇಶಗಳಲ್ಲಿ ಎಲೆಕ್ಟ್ರಾನಿಕ್ ವಸ್ತುಗಳ ಮಾರಾಟದಲ್ಲಿ ಶೇ.27.4ರಷ್ಟು ಏರಿಕೆಯಾಗಿ 3.35 ಬಿಲಿಯನ್ ಡಾಲರ್‌ಗಳಿಂದ 4.27 ಬಿಲಿಯನ್ ಡಾಲರ್‌ಗಳಿಗೆ ತಲುಪಿತ್ತು ಎಂದು ವಾಣಿಜ್ಯ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಎಸ್‌ಬಿಐ: ದಾಖಲೆಯ ಠೇವಣಿ ಚಿನ್ನ ಸಂಗ್ರಹ
ಜುಲೈ 31ರೊಳಗಾಗಿ ಬಜೆಟ್‌ಗೆ ಅನುಮೋದನೆ:ಚಿದಂಬರಂ
ಉದ್ಯೋಗ ಮಾರುಕಟ್ಟೆ ಚೇತರಿಸಿಕೊಳ್ಳುತ್ತಿದೆ: ಅಂಟಲ್ಸ್
ಕಡಿಮೆ ವೆಚ್ಚದ ಪ್ರವಾಸಕ್ಕೆ ಕೊನೆ ಅವಕಾಶ!
ಆರ್ಥಿಕ ಸುಸ್ಥಿತಿಗೆ ಮೊದಲ ಆದ್ಯತೆ: ಪ್ರಧಾನಿ
ಸತ್ಯಂನಲ್ಲಿ 10 ಸಾವಿರ ಹೆಚ್ಚುವರಿ ಸಿಬ್ಬಂದಿಗಳು:ಟೆಕ್ ಮಹೀಂದ್ರಾ