ದೇಶದ ಅತಿ ದೊಡ್ಡ ಬ್ಯಾಂಕ್ ಭಾರತೀಯ ಸ್ಟೇಟ್ ಬ್ಯಾಂಕ್ ಆರಂಭಿಸಿದ ಚಿನ್ನ ಠೇವಣಿ ಯೋಜನೆಗೆ ಗುಜರಾತಿನಲ್ಲಿ ಅತ್ಯುತ್ತಮ ಪ್ರತಿಕ್ರಿಯೆ ಬಂದಿದ್ದು, ಕಳೆದ ಎರಡು ತಿಂಗಳ ಅವಧಿಯಲ್ಲಿ 548 ಕೆಜಿ ಚಿನ್ನ ಸಂಗ್ರಹವಾಗಿದೆ.
ಮನೆಯ ಬೀರುಗಳಲ್ಲಿ ಭದ್ರವಾಗಿ ಇಡಲಾಗಿದ್ದ ಚಿನ್ನವನ್ನು ವ್ಯಾಪಾರದ ಮುಖ್ಯವಾಹಿನಿಗೆ ತರುವ ಸಲುವಾಗಿ ಎಸ್‌ಬಿಐ ಕಳೆದ ಮಾರ್ಚ್‌ನಲ್ಲಿ ಈ ಯೋಜನೆ ಆರಂಭಿಸಿತ್ತು.
ಅಹಮದಾಬಾದ್, ಸೂರತ್, ರಾಜ್‌ಕೋಟ್ ಹಾಗೂ ವಡೋದರಾ ಶಾಖೆಗಳಲ್ಲಿ ಕೇವಲ ಎರಡೇ ತಿಂಗಳಲ್ಲಿ 548 ಕೆಜಿ ಚಿನ್ನ ಸಂಗ್ರಹವಾಗಿದೆ. ದೇಶದ ಜನರ ಬಳಿ ಸುಮಾರು 15 ಸಾವಿರ ಟನ್‌ಗಳಷ್ಟು ಚಿನ್ನ ನಿರುಪಯುಕ್ತವಾಗಿ ಬಿದ್ದಿದೆ. ಇದನ್ನು ಠೇವಣಿಯಾಗಿ ಬ್ಯಾಂಕ್ಗಳಲ್ಲಿ ಇಡುವ ಮೂಲಕ ಅದರಿಂದ ಲಾಭ ಪಡೆಯಬಹುದು ಎಂದು ಎಶ್‌ಬಿಐ ಬ್ಯಾಂಕ್ ತಿಳಿಸಿದೆ. |