ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಟಾಟಾ ಗ್ರೂಪ್‌ನಿಂದ ಇ-ಮಾಲ್‌ ವಹಿವಾಟು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಟಾಟಾ ಗ್ರೂಪ್‌ನಿಂದ ಇ-ಮಾಲ್‌ ವಹಿವಾಟು
ಉಪ್ಪು ತಯಾರಿಕೆಯಿಂದ ಸಾಫ್ಟ್‌ವೇರ್‌ ಕ್ಷೇತ್ರದವರೆಗೆ ಉದ್ಯಮವನ್ನು ವಿಸ್ತರಿಸಿರುವ ಟಾಟಾ ಗ್ರೂಪ್, ಕಂಪೆನಿಯ ಉತ್ಪನ್ನಗಳನ್ನು ಇ-ಮಾಲ್ ವಹಿವಾಟಿನ ಮೂಲಕ ಆನ್‌ಲೈನ್‌ನಲ್ಲಿ ಮಾರಾಟ ಮಾಡಲು ಯೋಜನೆಯನ್ನು ರೂಪಿಸಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ..

ಯೋಜನೆಯನ್ನು ಆರಂಭಿಸುವ ಸಿದ್ದತೆಯಲ್ಲಿದ್ದೇವೆ. ನಮ್ಮ ಕಂಪೆನಿಯ ತಜ್ಞರ ತಂಡ ಯೋಜನೆಯನ್ನು ಅಭಿವೃದ್ಧಿಪಡಿಸುತ್ತಿದೆ. ಮುಂಬರುವ ಎರಡು ತಿಂಗಳಲ್ಲಿ ಯೋಜನೆ ಜಾರಿಗೆ ಬರಲಿದೆ ಎಂದು ಟಾಟಾ ಗ್ರೂಪ್‌ನ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಹೆಚ್ಚಿನ ವಿವರಗಳನ್ನು ನೀಡಲು ಬಯಸದ ಅಧಿಕಾರಿಗಳು ಟಾಟಾ ಗ್ರೂಪ್‌ ಸಂಸ್ಥೆಯ ಎಲ್ಲ ಉತ್ಪನ್ನಗಳನ್ನು ಆನ್‌ಲೈನ್ ಮುಖಾಂತರ ಮಾರಾಟ ಮಾಡಲಾಗುವುದು ಎಂದು ವಿವರಣೆ ನೀಡಿದ್ದಾರೆ.

ಆದರೆ, ಬಲ್ಲ ಮೂಲಗಳ ಪ್ರಕಾರ ಇ-ಮಾಲ್ ಇನ್ನಿತರ ವಾಣಿಜ್ಯ ಪೋರ್ಟಲ್‌ಗಳಂತೆ ಕಾರ್ಯನಿರ್ವಹಿಸಲಿದ್ದು, ಇತ್ತಿಚೆಗೆ ಜನಪ್ರಿಯವಾದ ಆನ್‌ಶಾಪಿಂಗ್‌‌ನ ಹೊಸ ಅನುಭವ ನೀಡಲಿದೆ ಎಂದು ಮಾಹಿತಿ ನೀಡಿವೆ.

ಶಾಪಿಂಗ್‌‌ಗೆ ತೆರಳಿ ಅನಗತ್ಯ ಸಮಯ ವ್ಯರ್ಥವಾಗಲು ಬಯಸದ ಗ್ರಾಹಕರಿಗೆ ಮನೆಯಲ್ಲಿ ಕುಳಿತು ಆನ್‌ಲೈನ್‌ ಮುಖಾಂತರ ತಮಗೆ ಇಷ್ಟವಾದ ವಸ್ತುಗಳನ್ನು ಖರೀದಿಸಲು ಅನುಕೂಲವಾಗುವಂತೆ ಆನ್‌ಲೈನ್‌ ಶಾಪಿಂಗ್‌ ಆರಂಭಿಸಲಾಗುತ್ತಿದೆ ಎಂದು ಟಾಟಾ ಮೂಲಗಳು ತಿಳಿಸಿವೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಇಂಡಿಯಾದಲ್ಲಿ ಲಿ ಮೆರಿಡಿಯನ್ ರಿಸಾರ್ಟ್
ವರ್ಷಾಂತ್ಯಕ್ಕೆ ಆರ್ಥಿಕ ಚೇತರಿಕೆ: ಸುಬ್ಬರಾವ್
ಸೂಕ್ತ ಕಾಲದಲ್ಲಿ ಬಜೆಟ್ ಮಂಡನೆ: ಮುಖರ್ಜಿ
ಭಾರತದ ಮನರಂಜನೆ ಕೈಗಾರಿಕೆ ಬೆಳವಣಿಗೆ
ಎಸ್‌ಬಿಐ ಯೋಜನೆ: 548 ಕೆಜಿ ಚಿನ್ನ ಸಂಗ್ರಹ
ಅಮೆರಿಕದ 34 ಬ್ಯಾಂಕ್‌ಗಳು ದಿವಾಳಿ