ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಅಂಬಾನಿ ಸಹೋದರರ ಸಂಪತ್ತಿನಲ್ಲಿ 90 ಸಾ.ಕೋ ಏರಿಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಂಬಾನಿ ಸಹೋದರರ ಸಂಪತ್ತಿನಲ್ಲಿ 90 ಸಾ.ಕೋ ಏರಿಕೆ
ದೇಶದ ಜನತೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ಪರವಾಗಿ ತೀರ್ಪು ನೀಡಿದ ಕೇವಲ ಐದು ದಿನಗಳ ವಹಿವಾಟಿನಲ್ಲಿ ಅಂಬಾನಿ ಸಹೋದರರು 90 ಸಾವಿರ ಕೋಟಿ ರೂಪಾಯಿಗಳ ಸಂಪತ್ತನ್ನು ಹೆಚ್ಚಿಸಿಕೊಂಡು ಅತಿ ಹೆಚ್ಚು ಲಾಭ ಪಡೆದವರ ಸಾಲಿನಲ್ಲಿ ಮುಂಚೂಣಿಯಲ್ಲಿದ್ದಾರೆ.

ಲೋಕಸಭಾ ಚುನಾವಣೆಯ ಫಲಿತಾಂಶ ಘೋಷಣೆಯಾದ ನಂತರ ಅನಿಲ್ ಅಂಬಾನಿ ವಹಿವಾಟಿನ ಮಾರುಕಟ್ಟೆಯ ಮೌಲ್ಯ ಶೇ.35 ರಷ್ಟು ಏರಿಕೆಯಾಗಿದ್ದು, ಸಹೋದರ ಮುಕೇಶ್ ಅಂಬಾನಿಯ ವಹಿವಾಟಿನ ಮೌಲ್ಯ ಶೇ.12 ರಷ್ಟು ಏರಿಕೆ ಕಂಡಿದೆ.

ಶೇರುಪೇಟೆ ನೋಂದಾಯಿತ ಅಂಬಾನಿ ಸಹೋದರರ ಒಂಬತ್ತು ಕಂಪೆನಿಗಳಲ್ಲಿ ಮೌಲ್ಯದಲ್ಲಿ ಭಾರಿ ಏರಿಕೆ ಕಂಡಿದ್ದು, ಮುಕೇಶ್ ಅಂಬಾನಿ ದಾಖಲೆಯ 44,000 ಕೋಟಿ ಲಾಭವಾಗಿದ್ದು, ಅನಿಲ್‌ ಅಂಬಾನಿ ಸಂಚಾಲಿತ ಉದ್ಯಮಗಳ ಸಂಪತ್ತಿನಲ್ಲಿ 43,800 ಕೋಟಿ ರೂಪಾಯಿ ಏರಿಕೆ ಕಂಡಿದೆ.

ಮೇ 16 ರಂದು ಲೋಕಸಭಾ ಚುನಾವಣೆ ಫಲಿತಾಂಶ ಘೋಷಣೆಯಾದ ನಂತರ ಮೇ 17 ರಂದು ಮಾರುಕಟ್ಟೆಗೆ ರಜೆಯ ಕಾರಣ ಮೇ 18 ರಿಂದ ಮೇ 22ರ ವರೆಗಿನ ವಹಿವಾಟಿನಲ್ಲಿ ಒಟ್ಟು 90 ಸಾವಿರ ಕೋಟಿ ರೂಪಾಯಿ ಮೌಲ್ಯ ಏರಿಕೆ ಕಂಡಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಡಾಲರ್ ಎದುರಿಗೆ ರೂಪಾಯಿ ಮೌಲ್ಯ ಕುಸಿತ
ಟಾಟಾ ಗ್ರೂಪ್‌ನಿಂದ ಇ-ಮಾಲ್‌ ವಹಿವಾಟು
ಇಂಡಿಯಾದಲ್ಲಿ ಲಿ ಮೆರಿಡಿಯನ್ ರಿಸಾರ್ಟ್
ವರ್ಷಾಂತ್ಯಕ್ಕೆ ಆರ್ಥಿಕ ಚೇತರಿಕೆ: ಸುಬ್ಬರಾವ್
ಸೂಕ್ತ ಕಾಲದಲ್ಲಿ ಬಜೆಟ್ ಮಂಡನೆ: ಮುಖರ್ಜಿ
ಭಾರತದ ಮನರಂಜನೆ ಕೈಗಾರಿಕೆ ಬೆಳವಣಿಗೆ