ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಎಫ್‌ಡಿಐ ನೀತಿಗಳಲ್ಲಿ ಬದಲಾವಣೆಗಳು ಅನಿವಾರ್ಯ:ನಾಥ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಎಫ್‌ಡಿಐ ನೀತಿಗಳಲ್ಲಿ ಬದಲಾವಣೆಗಳು ಅನಿವಾರ್ಯ:ನಾಥ್
ವಿದೇಶಿ ಬಂಡವಾಳ ಹೂಡಿಕೆ ಕುರಿತಂತೆ ಕೇಂದ್ರ ಸರಕಾರದ ನೀತಿಗಳಲ್ಲಿ ನಿರಂತರ ಬದಲಾವಣೆ ಅನಿವಾರ್ಯವಾಗಿದೆ ಎಂದು ಸಚಿವ ಕಮಲ್‌ನಾಥ್ ಹೇಳಿದ್ದಾರೆ.

ಈ ಹಿಂದೆ ವಾಣಿಜ್ಯ ಮತ್ತು ಕೈಗಾರಿಕೆ ಖಾತೆಯನ್ನು ಹೊಂದಿದ್ದ ಸಚಿವ ಕಮಲ್‌ನಾಥ್, ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅಡ್ಡಿಯಾಗಿರುವ ಅಡೆತಡೆಗಳನ್ನು ನಿವಾರಿಸಲಾಗುವುದು. ಆದರೆ ಮಲ್ಟಿ ಬ್ರ್ಯಾಂಡ್‌ ರಿಟೇಲ್‌ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅನುಮತಿ ನೀಡುವುದು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

2009-09 ಏಪ್ರಿಲ್‌ನಿಂದ ಫೆಬ್ರವರಿಯವರೆಗೆ ಭಾರತ 25 ಬಿಲಿಯನ್ ಡಾಲರ್‌ಗಳ ವಿದೇಶಿ ನೇರ ಬಂಡವಾಳ ಹೂಡಿಕೆಯನ್ನು ಆಕರ್ಷಿಸಿದ್ದು,ಫೆಬ್ರವರಿ ತಿಂಗಳಲ್ಲಿ ಕೇಂದ್ರ ಸರಕಾರ ಎಫ್‌ಡಿಐ ನೀತಿಗಳಲ್ಲಿ ಬದಲಾವಣೆ ತಂದಿರುವುದು ಹೂಡಿಕೆದಾರರಲ್ಲಿ ಗೊಂದಲ ಉಂಟು ಮಾಡಿದೆ ಎಂದು ಹೇಳಿದ್ದಾರೆ.

ದೇಶದ ಪ್ರಮುಖ ಟೆಲಿಕಾಂ ಸಂಸ್ಥೆ ಭಾರ್ತಿ ಏರ್‌ಟೆಲ್ ಹಾಗೂ ದಕ್ಷಿಣ ಆಫ್ರಿಕಾದ ಟೆಲಿಕಾಂ ಕಂಪೆನಿ ಎಂಟಿಎನ್ ‌ ಶೇರುಗಳ ನಿಯಂತ್ರಣ ಕುರಿತಂತೆ ಮಾತನಾಡಿದ ಸಚಿವ ಕಮಲ್‌ನಾಥ್, ಉಭಯ ದೇಶಗಳ ನಡುವಣ ವ್ಯಾಪಾರ ವೃದ್ಧಿಗೆ ಬಿಜಿನೆಸ್ ಕಾರ್ಪೋರೇಶನ್ ನೆರವಾಗಲಿದೆ ಎಂದು ತಿಳಿಸಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸತ್ಯಂ 8 ಸಾವಿರ ಉದ್ಯೋಗಿಗಳಿಗೆ ಕೊಕ್ ?
ಬಜೆಟ್ ಸಿದ್ದತೆ ಆರಂಭಿಸಿದ ಸಚಿವ ಮುಖರ್ಜಿ
ಟಾಟಾ ಇಂಡಿಕಾಂ ಯಾಹೂ ಇಂಡಿಯಾ ಒಪ್ಪಂದ
ಅಂಬಾನಿ ಸಹೋದರರ ಸಂಪತ್ತಿನಲ್ಲಿ 90 ಸಾ.ಕೋ ಏರಿಕೆ
ಡಾಲರ್ ಎದುರಿಗೆ ರೂಪಾಯಿ ಮೌಲ್ಯ ಕುಸಿತ
ಟಾಟಾ ಗ್ರೂಪ್‌ನಿಂದ ಇ-ಮಾಲ್‌ ವಹಿವಾಟು