ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಎಂಟಿಎನ್‌ ಸ್ವಾಧೀನಕ್ಕೆ ಪುನರ್‌ಮಾತುಕತೆ: ಭಾರ್ತಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಎಂಟಿಎನ್‌ ಸ್ವಾಧೀನಕ್ಕೆ ಪುನರ್‌ಮಾತುಕತೆ: ಭಾರ್ತಿ
ಸುನೀಲ್ ಮಿತ್ತಲ್ ಸಂಚಾಲಿತ ದೈತ್ಯ ಟೆಲಿಕಾಂ ಸಂಸ್ಥೆ ಭಾರ್ತಿ ಏರ್‌ಟೆಲ್, ದಕ್ಷಿಣ ಆಫ್ರಿಕಾದ ಟೆಲಿಕಾಂ ಎಂಟಿಎನ್‌ ಕಂಪೆನಿಯ ಶೇರುಗಳನ್ನು ಖರೀದಿಸುವ ಪ್ರಯತ್ನ ಮುಂದುವರಿಸಿದ್ದು, ಜುಲೈ 31ರೊಳಗೆ ಉಭಯ ಕಂಪೆನಿಗಳು ಒಪ್ಪಂದಕ್ಕೆ ಬರುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

ಒಂದು ವೇಳೆ ಉಭಯ ಕಂಪೆನಿಗಳು ಒಂದಾದಲ್ಲಿ ವಾರ್ಷಿಕವಾಗಿ 20 ಬಿಲಿಯನ್ ಡಾಲರ್‌ ಆದಾಯವನ್ನು ಪಡೆಯಲಿದ್ದು, 200 ಮಿಲಿಯನ್‌ಗಿಂತಲೂ ಹೆಚ್ಚು ಗ್ರಾಹಕರನ್ನು ಹೊಂದಲಿವೆ.

ಭಾರ್ತಿ ಏರ್‌ಟೆಲ್ ಸಂಸ್ಥೆ ಎಂಟಿಎನ್‌ ಗ್ರೂಪ್‌ನ ಶೇ.49 ರಷ್ಟು ಶೇರುಗಳನ್ನು ಖರೀದಿಸಲಿದ್ದು, ಅದರಂತೆ ಎಂಟಿಎನ್‌ ಹಾಗೂ ಅದರ ಶೇರುದಾರರು ಭಾರ್ತಿ ಏರ್‌ಟೆಲ್‌ನಲ್ಲಿ ಶೇ.36 ರಷ್ಟು ಶೇರುಗಳನ್ನು ಹೊಂದಲಿದ್ದಾರೆ ಎಂದು ಭಾರ್ತಿ ಏರ್‌ಟೆಲ್ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.

ಟೆಲಿಕಾಂ ದೈತ್ಯ ಸಂಸ್ಥೆಗಳಾದ ಭಾರ್ತಿ ಏರ್‌ಟೆಲ್ ಮತ್ತು ದಕ್ಷಿಣ ಆಫ್ರಿಕಾದ ಎಂಟಿಎನ್‌ ಸಂಸ್ಥೆ ಜುಲೈ 31ರೊಳಗಾಗಿ ಚರ್ಚೆ ನಡೆಸಿ ಅಂತಿಮ ತೀರ್ಮಾನಕ್ಕೆ ಬರಲಿವೆ ಎಂದು ಕಂಪೆನಿಯ ಅಧಿಕಾರಿಗಳು ತಿಳಿಸಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಎಫ್‌ಡಿಐ ನೀತಿಗಳಲ್ಲಿ ಬದಲಾವಣೆಗಳು ಅನಿವಾರ್ಯ:ನಾಥ್
ಸತ್ಯಂ 8 ಸಾವಿರ ಉದ್ಯೋಗಿಗಳಿಗೆ ಕೊಕ್ ?
ಬಜೆಟ್ ಸಿದ್ದತೆ ಆರಂಭಿಸಿದ ಸಚಿವ ಮುಖರ್ಜಿ
ಟಾಟಾ ಇಂಡಿಕಾಂ ಯಾಹೂ ಇಂಡಿಯಾ ಒಪ್ಪಂದ
ಅಂಬಾನಿ ಸಹೋದರರ ಸಂಪತ್ತಿನಲ್ಲಿ 90 ಸಾ.ಕೋ ಏರಿಕೆ
ಡಾಲರ್ ಎದುರಿಗೆ ರೂಪಾಯಿ ಮೌಲ್ಯ ಕುಸಿತ