ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಫಾರೆಕ್ಸ್: ರೂಪಾಯಿ ಮೌಲ್ಯದಲ್ಲಿ ಕುಸಿತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಫಾರೆಕ್ಸ್: ರೂಪಾಯಿ ಮೌಲ್ಯದಲ್ಲಿ ಕುಸಿತ
ಏಷ್ಯಾ ಮಾರುಕಟ್ಟೆಗಳ ಕುಸಿತದಿಂದಾಗಿ ದೇಶಿಯ ಮಾರುಕಟ್ಟೆ ಕೂಡಾ ಕುಸಿತ ಕಂಡು ವಿದೇಶಿ ಬಂಡವಾಳದ ಹೊರಹರಿವು ಹೆಚ್ಚಳವಾಗುವ ಸಾಧ್ಯತೆಗಳಿವೆ ಎನ್ನುವ ಆತಂಕದಲ್ಲಿ ಡಾಲರ್ ಎದುರಿಗೆ ರೂಪಾಯಿ 16 ಪೈಸೆ ಕುಸಿತ ಕಂಡಿದೆ.

ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ಎದುರಿಗೆ ರೂಪಾಯಿ ಮೌಲ್ಯದಲ್ಲಿ 16 ಪೈಸೆ ಕುಸಿತ ಕಂಡು 47.44 ರೂಪಾಯಿಗಳಿಗೆ ತಲುಪಿದೆ.

ಸೋಮವಾರದ ವಹಿವಾಟಿನಲ್ಲಿ ಡಾಲರ್ ಎದುರಿಗೆ ರೂಪಾಯಿ 18 ಪೈಸೆ ಕುಸಿತ ಕಂಡು 47.28/30 ರೂಪಾಯಿಗಳಿಗೆ ತಲುಪಿ ಮುಕ್ತಾಯವಾಗಿತ್ತು.

ಏಷ್ಯಾ ಮಾರುಕಟ್ಟೆಗಳು ಆರಂಭಿಕ ವಹಿವಾಟಿನಲ್ಲಿ ಶೇ.0.5 ರಷ್ಟು ಇಳಿಕೆ ಕಂಡಿದ್ದರಿಂದ ವಿದೇಶಿ ಬಂಡವಾಳದ ಹೊರಹರಿವು ಹೆಚ್ಚಳವಾದ ಹಿನ್ನೆಲೆಯಲ್ಲಿ ಡಾಲರ್ ಎದುರಿಗೆ ರೂಪಾಯಿ ಮೌಲ್ಯದಲ್ಲಿ ಕುಸಿತವಾಗಿದೆ. ಮಾಸಂತ್ಯದಲ್ಲಿ ಡಾಲರ್ ಬೇಡಿಕೆ ಹೆಚ್ಚಳವಾಗಿರುವುದು ಒಂದು ಕಾರಣವಾಗಿದೆ ಎಂದು ಮಾರುಕಟ್ಟೆಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಬಿಎಸ್‌ಇ-30 ಸೂಚ್ಯಂಕ ಹಿಂದಿನ ದಿನದ ವಹಿವಾಟಿನ ಮುಕ್ತಾಯಕ್ಕೆ 26 ಪಾಯಿಂಟ್‌ಗಳ ಏರಿಕೆ ಕಂಡು 13,913.22 ಅಂಕಗಳಿಗೆ ತಲುಪಿ ಮುಕ್ತಾಯವಾಗಿತ್ತು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸತ್ಯಂಗೆ ಮ‌ೂವರು ಅಧಿಕಾರಗಳ ರಾಜೀನಾಮೆ
ಪ್ರಣಬ್ ಮುಖರ್ಜಿ ಅಧಿಕಾರ ಸ್ವೀಕಾರ
ಎಂಟಿಎನ್‌ ಸ್ವಾಧೀನಕ್ಕೆ ಪುನರ್‌ಮಾತುಕತೆ: ಭಾರ್ತಿ
ಎಫ್‌ಡಿಐ ನೀತಿಗಳಲ್ಲಿ ಬದಲಾವಣೆಗಳು ಅನಿವಾರ್ಯ:ನಾಥ್
ಸತ್ಯಂ 8 ಸಾವಿರ ಉದ್ಯೋಗಿಗಳಿಗೆ ಕೊಕ್ ?
ಬಜೆಟ್ ಸಿದ್ದತೆ ಆರಂಭಿಸಿದ ಸಚಿವ ಮುಖರ್ಜಿ