ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಭಾರ್ತಿ ಏರ್‌ಟೆಲ್, ಎಂಟಿಎನ್ ಒಪ್ಪಂದ ಸೂಕ್ತ: ರೋಮಲ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭಾರ್ತಿ ಏರ್‌ಟೆಲ್, ಎಂಟಿಎನ್ ಒಪ್ಪಂದ ಸೂಕ್ತ: ರೋಮಲ್
ದೇಶದ ಟೆಲಿಕಾಂ ದೈತ್ಯ ಸಂಸ್ಥೆ ಭಾರ್ತಿ ಏರ್‌ಟೆಲ್ , ದಕ್ಷಿಣ ಆಫ್ರಿಕಾದ ಬೃಹತ್ ಟೆಲಿಕಾಂ ಸಂಸ್ಥೆಯಾದ ಎಂಟಿಎನ್‌ನ ಶೇ.49 ರಷ್ಟು ಶೇರುಗಳನ್ನು ಖರೀದಿಸುವ ನಿರ್ಧಾರ ದೀರ್ಘಾವಧಿಗೆ ಉತ್ತಮ ವ್ಯಾಪಾರ ತಂತ್ರವಾಗಿದ್ದರೂ ದೇಶಿಯ ಟೆಲಿಕಾಂ ಸಂಸ್ಥೆಗಳ ಅಲ್ಪಾವಧಿಯ ವಹಿವಾಟಿಗೆ ಒತ್ತಡ ಬೀರುವ ಸಾಧ್ಯತೆಗಳಿವೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಭಾರ್ತಿ ಏರ್‌ಟೆಲ್ ಎಂಟಿಎನ್‌ ಶೇರುಗಳನ್ನು ಸ್ವಾಧೀನಪಡಿಸಿಕೊಳ್ಳುವ ಒಪ್ಪಂದ ಪ್ರಸ್ತುತ ಅವಧಿಯಲ್ಲಿ ಧೀರ್ಘಾವದಿ ವಹಿವಾಟಿಗೆ ಉತ್ತಮವಾಗಿದ್ದರೂ ಅಲ್ಪಾವಧಿಗೆ ನಗದು ಹಣದ ಒತ್ತಡವನ್ನು ಎದುರಿಸಬೇಕಾಗುತ್ತದೆ ಎಂದು ಬಿಎಂಆರ್ ಅಡ್ವೈಸರ್ಸ್‌ನ ವಿವೇಕ್ ಗುಪ್ತಾ ಹೇಳಿದ್ದಾರೆ.

ಕೆಪಿಎಂಜಿ ಇಂಡಿಯಾದ ಟೆಲಿಕಾಂ ಮುಖ್ಯಸ್ಥ ರೊಮಲ್ ಶೆಟ್ಟಿ ಮಾತನಾಡಿ, ಭಾರ್ತಿ ಏರ್‌ಟೆಲ್ ಟೆಲಿಕಾಂ ಸಂಸ್ಥೆ ಎಂಟಿಎನ್‌ ಶೇರುಗಳನ್ನು ಸ್ವಾಧೀನಪಡಿಸಿಕೊಳ್ಳುವುದರೊಂದಿಗೆ ಜಾಗತಿಕ ಟೆಲಿಕಾಂ ಕ್ಷೇತ್ರದಲ್ಲಿ ಭಾರತ ಮುನ್ನಡೆ ಸಾಧಿಸಿದಂತಾಗುತ್ತದೆ ಎಂದು ತಿಳಿಸಿದ್ದಾರೆ.

ದಕ್ಷಿಣ ಆಫ್ರಿಕಾದ ದಿಗ್ಗಜ ಟೆಲಿಕಾಂ ಕಂಪೆನಿ ಎಂಟಿಎನ್‌ನೊಂದಿಗೆ ಒಪ್ಪಂದವಾಗುವುದರೊಂದಿಗೆ ಭಾರ್ತಿ ಏರ್‌ಟೆಲ್ ಸಂಸ್ಥೆ ದೀರ್ಘಾವಧಿಯಲ್ಲಿ ಹೆಚ್ಚಿನ ಲಾಭ ಪಡೆಯಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪ್ರಸ್ತುತ ಅವಧಿಯಲ್ಲಿ ಭಾರ್ತಿ‌ ಏರ್‌ಟೆಲ್ ಆರ್ಥಿಕ ವಹಿವಾಟಿನ ಮೇಲೆ ಅಲ್ಪಾವಧಿಯ ಪರಿಣಾಮ ಬೀರಿದರೂ ಮುಂಬರುವ ದಿನಗಳಲ್ಲಿ ಜಾಗತಿಕ ಮಟ್ಟದ ಟೆಲಿಕಾಂ ಕಂಪೆನಿಯಾಗಿ ಹೊರಹೊಮ್ಮಲಿದೆ ಎಂದು ಶೆಟ್ಟಿ ತಿಳಿಸಿದ್ದಾರೆ.

ಭಾರ್ತಿ ಏರ್‌ಟೆಲ್ ಕಂಪೆನಿ ದಕ್ಷಿಣ ಆಫ್ರಿಕಾದ ಟೆಲಿಕಾಂ ಕ್ಷೇತ್ರದ ಎಂಟಿಎನ್‌ ಕಂಪೆನಿಯ ಶೇ.49 ರಷ್ಟು ಶೇರುಗಳನ್ನು ಸ್ವಾಧೀನಪಡಿಸಿಕೊಳ್ಳುವ ಕುರಿತಂತೆ ಮುಂಬರುವ ಜುಲೈ 31ರೊಳಗೆ ಅಂತಿಮ ನಿರ್ಧಾರಕ್ಕೆ ಬರಲಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಫಾರೆಕ್ಸ್: ರೂಪಾಯಿ ಮೌಲ್ಯದಲ್ಲಿ ಕುಸಿತ
ಸತ್ಯಂಗೆ ಮ‌ೂವರು ಅಧಿಕಾರಗಳ ರಾಜೀನಾಮೆ
ಪ್ರಣಬ್ ಮುಖರ್ಜಿ ಅಧಿಕಾರ ಸ್ವೀಕಾರ
ಎಂಟಿಎನ್‌ ಸ್ವಾಧೀನಕ್ಕೆ ಪುನರ್‌ಮಾತುಕತೆ: ಭಾರ್ತಿ
ಎಫ್‌ಡಿಐ ನೀತಿಗಳಲ್ಲಿ ಬದಲಾವಣೆಗಳು ಅನಿವಾರ್ಯ:ನಾಥ್
ಸತ್ಯಂ 8 ಸಾವಿರ ಉದ್ಯೋಗಿಗಳಿಗೆ ಕೊಕ್ ?