ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಬ್ಯಾಂಕ್ ಆಫ್ ಬರೋಡಾಗೆ 2,384 ಕೋಟಿ ಲಾಭ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬ್ಯಾಂಕ್ ಆಫ್ ಬರೋಡಾಗೆ 2,384 ಕೋಟಿ ಲಾಭ
ಸಾರ್ವಜನಿಕ ಕ್ಷೇತ್ರದ ಬ್ಯಾಂಕ್‌ ಆಫ್ ಬರೋಡಾ ಮಾರ್ಚ್ 31ಕ್ಕೆ ವರ್ಷಾಂತ್ಯಗೊಂಡಂತೆ ಕ್ರೂಢಿಕೃತ ನಿವ್ವಳ ಲಾಭದಲ್ಲಿ ಶೇ.54 ರಷ್ಟು ಏರಿಕೆಯಾಗಿ 2,384.08 ಕೋಟಿ ರೂಪಾಯಿಗಳಿಗೆ ತಲುಪಿದೆ ಎಂದು ಬ್ಯಾಂಕ್ ಮೂಲಗಳು ತಿಳಿಸಿವೆ.

ಕಳೆದ 2007-08ರ ಆರ್ಥಿಕ ಸಾಲಿನಲ್ಲಿ ಕ್ರೂಢಿಕೃತ ನಿವ್ವಳ ಲಾಭ 1,548.38 ಕೋಟಿ ರೂಪಾಯಿಗಳಾಗಿತ್ತು ಎಂದು ಬ್ಯಾಂಕ್ ಆಫ್ ಬರೋಡಾ ಮುಂಬೈ ಶೇರುಪೇಟೆಗೆ ಸಲ್ಲಿಸಿದ ಮಾಹಿತಿಯಲ್ಲಿ ಬಹಿರಂಗಪಡಿಸಿದೆ.

2008ರ ಆರ್ಥಿಕ ಸಾಲಿನಲ್ಲಿ ಕ್ರೂಢಿಕೃತ ಒಟ್ಟು ನಿವ್ವಳ ಆದಾಯ 14,306.67 ಕೋಟಿ ರೂಪಾಯಿಗಳಾಗಿದ್ದು, 2009ರ ಆರ್ಥಿಕ ಸಾಲಿನಲ್ಲಿ 18,297.91 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ ಎಂದು ಶೇರುಪೇಟೆಗೆ ಸಲ್ಲಿಸಿದ ವಿವರಣೆಯಲ್ಲಿ ತಿಳಿಸಿದೆ.

ಕಳೆದ 2008ರ ಸಾಲಿನಲ್ಲಿ 1435.52 ಕೋಟಿ ರೂಪಾಯಿಗಳ ನಿವ್ವಳ ಲಾಭಗಳಿಸಿದ್ದ ಬ್ಯಾಂಕ್, 2009ರ ಮಾರ್ಚ್ 31ಕ್ಕೆ ವರ್ಷಾಂತ್ಯಗೊಂಡಂತೆ ನಿವ್ವಳ ಲಾಭದಲ್ಲಿ ಶೇ.55 ರಷ್ಟು ಏರಿಕೆಯಾಗಿ 2,227.2 ಕೋಟಿ ರೂಪಾಯಿಗಳಿಗೆ ತಲುಪಿದೆ.

ಕಳೆದ ವರ್ಷದ ಆರ್ಥಿಕ ಸಾಲಿನಲ್ಲಿ 276.44 ಕೋಟಿ ರೂಪಾಯಿಗಳ ನಿವ್ವಳ ಲಾಭಗಳಿಸಿದ್ದ ಬ್ಯಾಂಕ್, ಪ್ರಸಕ್ತ ವರ್ಷದ ಲಾಭವನ್ನು ಮೂರು ಪಟ್ಟು ಹೆಚ್ಚಿಸಿಕೊಂಡು ಮಾರ್ಚ್ 31ಕ್ಕೆ ಅಂತ್ಯಗೊಂಡಂತೆ 752.69 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ ಎಂದು ಬ್ಯಾಂಕ್ ಆಫ್ ಬರೋಡಾ ಮುಂಬೈ ಶೇರುಪೇಟೆಗೆ ಸಲ್ಲಿಸಿದ ವಿವರಣೆಯಲ್ಲಿ ಪ್ರಕಟಿಸಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಆರ್ಥಿಕ ನೀತಿ: ಎಡಪಕ್ಷಗಳ ನಂತರ ಯುಪಿಎಗೆ ತೃಣಮೂಲ ಅಡ್ಡಿ
ಭಾರ್ತಿ ಏರ್‌ಟೆಲ್, ಎಂಟಿಎನ್ ಒಪ್ಪಂದ ಸೂಕ್ತ: ರೋಮಲ್
ಫಾರೆಕ್ಸ್: ರೂಪಾಯಿ ಮೌಲ್ಯದಲ್ಲಿ ಕುಸಿತ
ಸತ್ಯಂಗೆ ಮ‌ೂವರು ಅಧಿಕಾರಗಳ ರಾಜೀನಾಮೆ
ಪ್ರಣಬ್ ಮುಖರ್ಜಿ ಅಧಿಕಾರ ಸ್ವೀಕಾರ
ಎಂಟಿಎನ್‌ ಸ್ವಾಧೀನಕ್ಕೆ ಪುನರ್‌ಮಾತುಕತೆ: ಭಾರ್ತಿ