ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಜುಲೈ ಮೊದಲನೆ ವಾರದಲ್ಲಿ ಬಜೆಟ್ ಮಂಡನೆ:ಪ್ರಣಬ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜುಲೈ ಮೊದಲನೆ ವಾರದಲ್ಲಿ ಬಜೆಟ್ ಮಂಡನೆ:ಪ್ರಣಬ್
ಯುಪಿಎ ಸರಕಾರದ ಆದ್ಯತೆಗಳು ಹಾಗೂ ಸುಧಾರಣಾ ನೀತಿಗಳನ್ನು ಒಳಗೊಂಡಿರುವ 2009-19ರ ಆರ್ಥಿಕ ಸಾಲಿನ ಮಹತ್ವದ ಬಜೆಟ್ ಜುಲೈ ಮೊದಲ ವಾರದಲ್ಲಿ ಮಂಡಿಸಲಾಗುವುದು ಎಂದು ಕೇಂದ್ರ ಹಣಕಾಸು ಖಾತೆ ಸಚಿವ ಪ್ರಣಬ್ ಮುಖರ್ಜಿ ಹೇಳಿದ್ದಾರೆ.

ಮಧ್ಯಂತರ ಬಜೆಟ್ ಮಂಡನೆಗೆ ಆಸ್ಪದ ನೀಡದೆ ಜುಲೈ ಮೊದಲ ವಾರದಲ್ಲಿ ಪರಿಪೂರ್ಣ ಬಜೆಟ್ ಮಂಡಿಸಲಾಗುವುದು ಎಂದು ಸಚಿವ ಪ್ರಣಬ್ ಮುಖರ್ಜಿ ಸುದ್ದಿ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಜಾಗತಿಕ ಆರ್ಥಿಕ ಕುಸಿತದಿಂದ ಕಂಗಾಲಾದ ಕ್ಷೇತ್ರಗಳು ಹಾಗೂ ಮಧ್ಯಂತರ ಬಜೆಟ್‌ ಮಂಡನೆಯಲ್ಲಿ ವ್ಯಕ್ತವಾದ ಸಮಸ್ಯೆಗಳು ಹಾಗೂ ಆತಂಕಗಳಿಗೆ ಪ್ರಸ್ತುತ ಬಜೆಟ್‌ನಲ್ಲಿ ಆದ್ಯತೆ ನೀಡಲಾಗುವುದು ಎಂದು ಮುಖರ್ಜಿ ತಿಳಿಸಿದ್ದಾರೆ.

ಕೇಂದ್ರ ಸರಕಾರ ಜುಲೈ 31ರೊಳಗಾಗಿ ಬಜೆಟ್ ಮಂಡಿಸದಿದ್ದಲ್ಲಿ ಸಂಸತ್ತಿನಿಂದ ಅನುಮೋದನೆ ಪಡೆದು ಕ್ರೂಢೀಕೃತ ನಿಧಿಯಿಂದ ಹಣವನ್ನು ಪಡೆಯಬೇಕಾಗಿರುವುದರಿಂದ ಜುಲೈ ಮೊದಲನೆ ವಾರದೊಳಗಾಗಿ ಬಜೆಟ್ ಮಂಡಿಸಲಾಗುವುದು ಎಂದು ಕೇಂದ್ರ ಹಣಕಾಸು ಖಾತೆ ಸಚಿವ ಪ್ರಣಬ್ ಮುಖರ್ಜಿ ತಿಳಿಸಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಬ್ಯಾಂಕ್ ಆಫ್ ಬರೋಡಾಗೆ 2,384 ಕೋಟಿ ಲಾಭ
ಆರ್ಥಿಕ ನೀತಿ: ಎಡಪಕ್ಷಗಳ ನಂತರ ಯುಪಿಎಗೆ ತೃಣಮೂಲ ಅಡ್ಡಿ
ಭಾರ್ತಿ ಏರ್‌ಟೆಲ್, ಎಂಟಿಎನ್ ಒಪ್ಪಂದ ಸೂಕ್ತ: ರೋಮಲ್
ಫಾರೆಕ್ಸ್: ರೂಪಾಯಿ ಮೌಲ್ಯದಲ್ಲಿ ಕುಸಿತ
ಸತ್ಯಂಗೆ ಮ‌ೂವರು ಅಧಿಕಾರಗಳ ರಾಜೀನಾಮೆ
ಪ್ರಣಬ್ ಮುಖರ್ಜಿ ಅಧಿಕಾರ ಸ್ವೀಕಾರ