ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಹೊಂಡಾದಿಂದ ಸಿಬಿಎಫ್‌ ಸ್ಟನ್ನರ್‌ ಬೈಕ್ ಮಾರುಕಟ್ಟೆಗೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹೊಂಡಾದಿಂದ ಸಿಬಿಎಫ್‌ ಸ್ಟನ್ನರ್‌ ಬೈಕ್ ಮಾರುಕಟ್ಟೆಗೆ
ದೇಶದ ಪ್ರಮುಖ ದ್ವಿಚಕ್ರವಾಹನ ತಯಾರಿಕೆ ಸಂಸ್ಥೆಯಾದ ಹೊಂಡಾ ಮೋಟಾರ್‌ಸೈಕಲ್‌ ಇಂಡಿಯಾ ನೂತನ ಆವೃತ್ತಿಯಾದ 125 ಸಿಸಿ ಸ್ಪೋರ್ಟ್ಸ್ ‌ ಸಿಬಿಎಫ್‌ ಸ್ಟನ್ನರ್‌ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, 64.630 ರೂಪಾಯಿಗಳ (ಶೋರೂಂ ಹೊರತುಪಡಿಸಿ) ದರವನ್ನು ನಿಗದಿಪಡಿಸಿದೆ.

ಭಾರತದ ದ್ವಿಚಕ್ರವಾಹನ ಮಾರುಕಟ್ಟೆಯಲ್ಲಿ ಹೊಂಡಾ ದ್ವಿಚಕ್ರವಾಹನಗಳ ಮಾರಾಟವನ್ನು ಹೆಚ್ಚಿಸುವ ತಂತ್ರವಾಗಿದೆ ಎಂದು ಉದ್ಯಮದ ಮೂಲಗಳು ತಿಳಿಸಿವೆ.

ಕಳೆದ ವರ್ಷದ ಆರ್ಥಿಕ ಸಾಲಿನಲ್ಲಿ 10.7 ಲಕ್ಷ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಲಾಗಿದ್ದು, ಪ್ರಸಕ್ತ ವರ್ಷದಲ್ಲಿ 12.5 ಲಕ್ಷ ದ್ವಿಚಕ್ರ ವಾಹನಗಳ ಮಾರಾಟದ ಗುರಿಯನ್ನು ಹೊಂದಲಾಗಿದೆ. ಸಿಬಿಎಫ್‌ ಸ್ಟನ್ನರ್‌ ಗ್ರಾಹಕರ ಮೆಚ್ಚುಗೆ ಪಡೆಯುವ ವಿಶ್ವಾಸವಿದೆ ಎಂದು ಹೊಂಡಾ ಮೋಟಾರ್ಸ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಂಜಿ ಅಯೋಮಾ ಸುದ್ದಿಗಾರರಿಗೆ ತಿಳಿಸಿದ್ದಾರೆ.

ನೂತನ ಬೈಕ್ ಸಿಬಿಎಫ್ ಸ್ಟನ್ನರ್‌ನಲ್ಲಿ ( ಪ್ರೋಗ್ರಾಂ ಫ್ಯೂಲ್ ಇಂಜಕ್ಷನ್ ) ತಂತ್ರಜ್ಞಾನವನ್ನು ಅಳವಡಿಸಲಾಗಿದ್ದು, ಇದರಿಂದಾಗಿ ಹೆಚ್ಚಿನ ವೇಗವನ್ನು ಪಡೆಯಲು ಸಾಧ್ಯವಾಗುತ್ತದೆ. ಜೂನ್ ಮೊದಲನೇ ವಾರದಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ಸೂಸೈಟಿ ಆಫ್ ಇಂಡಿಯನ್ ಅಟೋಮೋಬೈಲ್ ಮ್ಯಾನುಫ್ಯಾಕ್ಚರರ್ಸ್‌ ಪ್ರಕಾರ 2007-08ರ ಆರ್ಥಿಕ ಸಾಲಿನಲ್ಲಿ 72.49,278 ದ್ವಿಚಕ್ರವಾಹನಗಳನ್ನು ಮಾರಾಟ ಮಾಡಲಾಗಿದ್ದು, 2008-09ರ ಆರ್ಥಿಕ ಸಾಲಿನಲ್ಲಿ ಶೇ.2.60 ರಷ್ಟು ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಏರಿಕೆಯಾಗಿ 74,37,670 ವಾಹನಗಳನ್ನು ಮಾರಾಟ ಮಾಡಲಾಗಿದೆ ಎಂದು ಪ್ರಕಟಿಸಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಜುಲೈ ಮೊದಲನೆ ವಾರದಲ್ಲಿ ಬಜೆಟ್ ಮಂಡನೆ:ಪ್ರಣಬ್
ಬ್ಯಾಂಕ್ ಆಫ್ ಬರೋಡಾಗೆ 2,384 ಕೋಟಿ ಲಾಭ
ಆರ್ಥಿಕ ನೀತಿ: ಎಡಪಕ್ಷಗಳ ನಂತರ ಯುಪಿಎಗೆ ತೃಣಮೂಲ ಅಡ್ಡಿ
ಭಾರ್ತಿ ಏರ್‌ಟೆಲ್, ಎಂಟಿಎನ್ ಒಪ್ಪಂದ ಸೂಕ್ತ: ರೋಮಲ್
ಫಾರೆಕ್ಸ್: ರೂಪಾಯಿ ಮೌಲ್ಯದಲ್ಲಿ ಕುಸಿತ
ಸತ್ಯಂಗೆ ಮ‌ೂವರು ಅಧಿಕಾರಗಳ ರಾಜೀನಾಮೆ