ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ನಷ್ಟದಲ್ಲಿರುವ ಕ್ಷೇತ್ರಗಳಿಗೆ ಸರಕಾರ ಆದ್ಯತೆ: ಮುಖರ್ಜಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನಷ್ಟದಲ್ಲಿರುವ ಕ್ಷೇತ್ರಗಳಿಗೆ ಸರಕಾರ ಆದ್ಯತೆ: ಮುಖರ್ಜಿ
ಜಾಗತಿಕ ಆರ್ಥಿಕ ಬಿಕ್ಕಟ್ಟಿನಿಂದ ತೊಂದರೆ ಅನುಭವಿಸುತ್ತಿರುವ ಕ್ಷೇತ್ರಗಳಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಕೇಂದ್ರ ಹಣಕಾಸು ಖಾತೆ ಸಚಿವ ಪ್ರಣಬ್ ಮುಖರ್ಜಿ ಹೇಳಿದ್ದಾರೆ.

ದೇಶದ ಉತ್ಪಾದಕ ಕ್ಷೇತ್ರ ನಕಾರಾತ್ಮಕ ವಲಯದಲ್ಲಿ ಸಾಗುತ್ತಿರುವುದು ಆತಂಕ ಮೂಡಿಸಿದ್ದು, ಉತ್ಪಾದಕ ಕ್ಷೇತ್ರ ಚೇತರಿಕೆಗಾಗಿ ಮುಂಬರುವ ಬಜೆಟ್‌ನಲ್ಲಿ ವಿಶೇಷ ಗಮನಹರಿಸಲಾಗುವುದಲ್ಲದೇ ಹಲವು ನೀತಿಗಳಲ್ಲಿ ಬದಲಾವಣೆ ತಂದು ಚೇತರಿಸಿಕೊಳ್ಳಲು ಅವಕಾಶ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಪ್ರಸಕ್ತ ವರ್ಷದಲ್ಲಿ ಆರ್ಥಿಕ ಅಭಿವೃದ್ಧಿ ದರ ಶೇ.6 ರಿಂದ ಶೇ.6.5 ರವರೆಗೆ ತಲುಪುವ ಸಾಧ್ಯತೆಗಳಿದ್ದು, ಕುಂಠಿತಗೊಂಡ ಕ್ಷೇತ್ರಗಳ ಏಳಿಗೆಗೆ ಸರಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ. ಆರ್ಥಿಕತೆಗೆ ಮತ್ತಷ್ಟು ಸ್ವಾತಂತ್ರ್ಯ ನೀಡುವ ಅವಕಾಶಗಳಿವೆ ಎಂದು ಹೇಳಿದ್ದಾರೆ.

ಭಾರತದಲ್ಲಿ ಸಾಲ ನೀಡುವ ನೀತಿಗೆ ಸರಕಾರ ಮುಕ್ತತೆಯನ್ನು ಘೋಷಿಸಿದ್ದರೂ ಬ್ಯಾಂಕ್‌ಗಳ ಅನಿಶ್ಚಿತತೆ ನೀತಿಗಳಿಂದಾಗಿ ಸರಿಯಾದ ಸಮಯಕ್ಕೆ ಗ್ರಾಹಕರಿಗೆ ಸಾಲ ದೊರೆಯುತ್ತಿಲ್ಲ ಎಂದು ವಿಷಾದಿಸಿದ ಸಚಿವ ಪ್ರಣಬ್ ಮುಖರ್ಜಿ, ಬ್ಯಾಂಕ್‌ಗಳ ನೀತಿಗಳಲ್ಲಿ ಬದಲಾವಣೆ ಅಗತ್ಯ ಎಂದು ತಿಳಿಸಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಚಿನ್ನದ ದರ : ಪ್ರತಿ 10 ಗ್ರಾಂಗೆ 14,890 ರೂ.
ಹೊಂಡಾದಿಂದ ಸಿಬಿಎಫ್‌ ಸ್ಟನ್ನರ್‌ ಬೈಕ್ ಮಾರುಕಟ್ಟೆಗೆ
ಜುಲೈ ಮೊದಲನೆ ವಾರದಲ್ಲಿ ಬಜೆಟ್ ಮಂಡನೆ:ಪ್ರಣಬ್
ಬ್ಯಾಂಕ್ ಆಫ್ ಬರೋಡಾಗೆ 2,384 ಕೋಟಿ ಲಾಭ
ಆರ್ಥಿಕ ನೀತಿ: ಎಡಪಕ್ಷಗಳ ನಂತರ ಯುಪಿಎಗೆ ತೃಣಮೂಲ ಅಡ್ಡಿ
ಭಾರ್ತಿ ಏರ್‌ಟೆಲ್, ಎಂಟಿಎನ್ ಒಪ್ಪಂದ ಸೂಕ್ತ: ರೋಮಲ್