ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಫಾರೆಕ್ಸ್: ರೂಪಾಯಿ ಮೌಲ್ಯ ಬಲವರ್ಧನೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಫಾರೆಕ್ಸ್: ರೂಪಾಯಿ ಮೌಲ್ಯ ಬಲವರ್ಧನೆ
ಏಷ್ಯಾ ಮಾರುಕಟ್ಟೆಗಳ ಚೇತರಿಕೆಯಿಂದಾಗಿ ದೇಶಿಯ ಶೇರುಪೇಟೆ ಚೇತರಿಕೆ ಕಂಡು ವಿದೇಶಿ ಬಂಡವಾಳದ ಒಳಹರಿವು ಹೆಚ್ಚಳವಾಗುವ ನಿರೀಕ್ಷೆಗಳ ಹಿನ್ನೆಲೆಯಲ್ಲಿ ಡಾಲರ್ ಎದುರಿಗೆ ರೂಪಾಯಿ ಮೌಲ್ಯದಲ್ಲಿ 41 ಪೈಸೆ ಏರಿಕೆ ಕಂಡಿದೆ.

ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಹಿಂದಿನ ದಿನದ ವಹಿವಾಟಿನ ಮುಕ್ತಾಯಕ್ಕೆ ಡಾಲರ್‌ಗೆ 47.92 ರೂಪಾಯಿಗಳಿಗೆ ತಲುಪಿತ್ತು. ಇಂದಿನ ಆರಂಭಿಕ ವಹಿವಾಟಿನಲ್ಲಿ ಮತ್ತೆ 41 ಪೈಸೆ ಚೇತರಿಕೆ ಕಂಡಿದ್ದರಿಂದ 47.51 ರೂಪಾಯಿಗಳಿಗೆ ತಲುಪಿದೆ.

ಮಂಗಳವಾರದ ವಹಿವಾಟಿನಲ್ಲಿ ಡಾಲರ್ ಎದುರಿಗೆ ರೂಪಾಯಿ 64 ಪೈಸೆ ಕುಸಿತ ಕಂಡು 47.92/93 ರೂಪಾಯಿಗಳಿಗೆ ತಲುಪಿದೆ.

ಏಷ್ಯಾ ಮಾರುಕಟ್ಟೆಗಳ ಚೇತರಿಕೆಯಿಂದಾಗಿ ದೇಶಿಯ ಶೇರುಪೇಟೆ ಚೇತರಿಕೆ ಕಂಡು ವಿದೇಶಿ ಬಂಡವಾಳದ ಒಳಹರಿವು ಹೆಚ್ಚಳವಾಗುವ ಸಾಧ್ಯತೆಗಳಿಂದಾಗಿ ಡಾಲರ್ ಎದುರಿಗೆ ರೂಪಾಯಿ ಮೌಲ್ಯದಲ್ಲಿ ಚೇತರಿಕೆ ಕಂಡಿದೆ ಎಂದು ಮಾರುಕಟ್ಟೆಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಆದರೆ, ಮಾಸಾಂತ್ಯದ ಹಿನ್ನೆಲೆಯಲ್ಲಿ ಅಮುದು ವಹಿವಾಟುದಾರರು ಹಾಗೂ ತೈಲ ವಹಿವಾಟುದಾರರಿಂದ ಡಾಲರ್ ಬೇಡಿಕೆ ಹೆಚ್ಚಳದ ಮಧ್ಯೆಯು ರೂಪಾಯಿ ಮೌಲ್ಯ ಏರಿಕೆ ಕಂಡಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಯ‌ೂನಿಟೆಕ್ ಅಗ್ಗದ ಮನೆ
ಆಂಧ್ರ ಬ್ಯಾಂಕ್ ವಹಿವಾಟು ವೃದ್ಧಿ
ನಷ್ಟದಲ್ಲಿರುವ ಕ್ಷೇತ್ರಗಳಿಗೆ ಸರಕಾರ ಆದ್ಯತೆ: ಮುಖರ್ಜಿ
ಚಿನ್ನದ ದರ : ಪ್ರತಿ 10 ಗ್ರಾಂಗೆ 14,890 ರೂ.
ಹೊಂಡಾದಿಂದ ಸಿಬಿಎಫ್‌ ಸ್ಟನ್ನರ್‌ ಬೈಕ್ ಮಾರುಕಟ್ಟೆಗೆ
ಜುಲೈ ಮೊದಲನೆ ವಾರದಲ್ಲಿ ಬಜೆಟ್ ಮಂಡನೆ:ಪ್ರಣಬ್