ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಟಾಟಾ ಕಮ್ಯೂನಿಕೇಶನ್ಸ್‌‌ಗೆ 302.3ಕೋಟಿ ನಿವ್ವಳ ಲಾಭ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಟಾಟಾ ಕಮ್ಯೂನಿಕೇಶನ್ಸ್‌‌ಗೆ 302.3ಕೋಟಿ ನಿವ್ವಳ ಲಾಭ
ದೇಶದ ಟೆಲಿಕಾಂ ದೈತ್ಯ ಸಂಸ್ಥೆ ಟಾಟಾ ಕಮ್ಯೂನಿಕೇಶನ್ಸ್ ಕಳೆದ ವರ್ಷಕ್ಕೆ ಹೋಲಿಸಿದಲ್ಲಿ 2009ರ ಮಾರ್ಚ್31ಕ್ಕೆ ನಾಲ್ಕನೇ ತ್ರೈಮಾಸಿಕ ಅಂತ್ಯಗೊಂಡಂತೆ ಐದು ಪಟ್ಟು ನಿವ್ವಳ ಲಾಭದಲ್ಲಿ ಹೆಚ್ಚಳವಾಗಿ 302.37 ಕೋಟಿ ರೂಪಾಯಿಗಳಿಗೆ ತಲುಪಿದೆ.

ಕಳೆದ ವರ್ಷದ ನಾಲ್ಕನೇ ತ್ರೈಮಾಸಿಕ ಅವಧಿಯಲ್ಲಿ 56.03 ಕೋಟಿ ರೂಪಾಯಿಗಳ ಲಾಭಗಳಿಸಿತ್ತು ಎಂದು ಟಾಟಾ ಕಮ್ಯೂನಿಕೇಶನ್ಸ್ ಮುಂಬೈ ಶೇರುಪೇಟೆಗೆ ಸಲ್ಲಿಸಿದ ಮಾಹಿತಿಯಲ್ಲಿ ಬಹಿರಂಗಪಡಿಸಿದೆ.

ಟೆಲಿಕಾಂ ಸೇವೆಗಳಿಂದಾಗಿ 2007-08ರ ಆರ್ಥಿಕ ಸಾಲಿನಲ್ಲಿ 855.53 ಕೋಟಿ ರೂಪಾಯಿಗಳ ಆದಾಯವಾಗಿದ್ದು,2008-09ರ ಆರ್ಥಿಕ ಸಾಲಿನಲ್ಲಿ 886.93 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ.

2009ರ ಮಾರ್ಚ್ 31ಕ್ಕೆ ಅಂತ್ಯಗೊಂಡಂತೆ ವಾರ್ಷಿಕ ನಿವ್ವಳ ಲಾಭದಲ್ಲಿ 515.95 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ. ಹಿಂದಿನ ವರ್ಷದಲ್ಲಿ 304 ಕೋಟಿ ರೂಪಾಯಿಗಳ ನಿವ್ವಳ ಲಾಭಗಳಿಸಿತ್ತು.

ಟಾಟಾ ಕಮ್ಯೂನಿಕೇಶನ್ಸ್‌ನ ಕ್ರೂಢೀಕೃತ ನಿವ್ವಳ ಲಾಭ ಹಿಂದಿನ ವರ್ಷದಲ್ಲಿ 10.30 ಕೋಟಿ ರೂಪಾಯಿಗಳಾಗಿದ್ದು, 12 ತಿಂಗಳ ಅವಧಿಯಲ್ಲಿ 315.80 ಕೋಟಿ ರೂಪಾಯಿಗಳಾಗಿ ಏರಿಕೆಯಾಗಿದೆ.

ಟಾಟಾ ಕಮ್ಯೂನಿಕೇಶನ್ಸ್‌ನ ಅಡಳಿತ ಮಂಡಳಿ 2008-09ರ ಆರ್ಥಿಕ ಸಾಲಿನಲ್ಲಿ 10 ರೂಪಾಯಿ ಮುಖಬೆಲೆಯ ಶೇರುಗಳಿಗೆ 4.50 ರೂಪಾಯಿಗಳ ಡೆವಿಡೆಂಡ್‌ ಘೋಷಿಸಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಫಾರೆಕ್ಸ್: ರೂಪಾಯಿ ಮೌಲ್ಯ ಬಲವರ್ಧನೆ
ಯ‌ೂನಿಟೆಕ್ ಅಗ್ಗದ ಮನೆ
ಆಂಧ್ರ ಬ್ಯಾಂಕ್ ವಹಿವಾಟು ವೃದ್ಧಿ
ನಷ್ಟದಲ್ಲಿರುವ ಕ್ಷೇತ್ರಗಳಿಗೆ ಸರಕಾರ ಆದ್ಯತೆ: ಮುಖರ್ಜಿ
ಚಿನ್ನದ ದರ : ಪ್ರತಿ 10 ಗ್ರಾಂಗೆ 14,890 ರೂ.
ಹೊಂಡಾದಿಂದ ಸಿಬಿಎಫ್‌ ಸ್ಟನ್ನರ್‌ ಬೈಕ್ ಮಾರುಕಟ್ಟೆಗೆ