ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಕಾಮನ್‌ವೆಲ್ತ್ ಗೇಮ್ಸ್: ಹೋಟೆಲ್ ಉದ್ಯಮಕ್ಕೆ ಶುಕ್ರದೆಸೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಾಮನ್‌ವೆಲ್ತ್ ಗೇಮ್ಸ್: ಹೋಟೆಲ್ ಉದ್ಯಮಕ್ಕೆ ಶುಕ್ರದೆಸೆ
ಜಾಗತಿಕ ಆರ್ಥಿಕ ಕುಸಿತ ಹಾಗೂ ಮುಂಬೈನಲ್ಲಿ ನಡೆದ ಉಗ್ರರ ದಾಳಿಯಿಂದಾಗಿ ಅತಿಥಿಗಳ ಕೊರತೆಯನ್ನು ಎದುರಿಸುತ್ತಿರುವ ಹೋಟೆಲ್ ಉದ್ಯಮಕ್ಕೆ ಮುಂದಿನ ವರ್ಷದಲ್ಲಿ ನಡೆಯಲಿರುವ ಕಾಮನ್‍‌ವೆಲ್ತ್ ಪಂದ್ಯಗಳು ಹೋಟೆಲ್ ಉದ್ಯಮಕ್ಕೆ ಚೇತರಿಕೆ ನೀಡುವ ಸಾಧ್ಯತೆಗಳಿವೆ.

ಮಾರ್ಚ್ ತಿಂಗಳ ನಂತರ ಹೋಟೆಲ್ ಉದ್ಯಮ ಅಲ್ಪಪ್ರಮಾಣದಲ್ಲಿ ಚೇತರಿಕೆ ಕಂಡಿದ್ದು,ಕಳೆದ ವರ್ಷದ ನಷ್ಟದ ಬಗ್ಗೆ ನಿಖರವಾಗಿ ಹೇಳಲು ಸಾಧ್ಯವಿಲ್ಲ. ಆದರೆ ಕಾಮನ್‌ವೆಲ್ತ್ ಪಂದ್ಯಗಳು ಹೋಟೆಲ್ ಉದ್ಯಮಕ್ಕೆ ಗಣನೀಯ ಚೇತರಿಕೆ ನೀಡುವ ನಿರೀಕ್ಷೆಗಳಿವೆ ಎಂದು ಹೋಟೆಲ್ ಅಸೋಸಿಯೇಶನ್ ಆಫ್ ಇಂಡಿಯಾದ ನಿರ್ದೇಶಕ ಭರತ್ ಭೂಷಣ್ ಹೇಳಿದ್ದಾರೆ.

ಮುಂಬೈನಲ್ಲಿ ನಡೆದ ಉಗ್ರರ ದಾಳಿ ಹಾಗೂ ಜಾಗತಿಕ ಆರ್ಥಿಕ ಕುಸಿತದಿಂದಾಗಿ ಹೋಟೆಲ್ ಉದ್ಯಮ ನಷ್ಟ ಅನುಭವಿಸಿದ್ದರೂ 2010ರಲ್ಲಿ ನಡೆಯುವ ಕಾಮನ್‌ವೆಲ್ತ್ ಪಂದ್ಯಗಳು ಪ್ರವಾಸೋದ್ಯಮಕ್ಕೆ ಕ್ಷೇತ್ರಕ್ಕೆ ಸಮೃದ್ಧಿಯನ್ನು ತರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾರ್ಲಸನ್‌ ಗ್ರೂಫ್ ಆಫ್ ಹೋಟೆಲ್ಸ್‌ನ ಉಪಾಧ್ಯಕ್ಷ ಕೆ.ಬಿ. ಕಚಿವು ಮಾತನಾಡಿ, ಮುಂಬರುವ ಕಾಮನ್‌ವೆಲ್ತ್ ಪಂದ್ಯಗಳಿಂದಾಗಿ ಈಗಾಗಲೇ ಹೋಟೆಲ್‌ಗಳು ಆದರಾತಿಥ್ಯ ಒತ್ತಡವನ್ನು ಎದುರಿಸುತ್ತಿವೆ ಎಂದು ಹೇಳಿದ್ದಾರೆ.

ಮುಂಬರುವ ವರ್ಷದಲ್ಲಿ ಹೋಟೆಲ್ ಉದ್ಯಮಗಳು ಶೇ.15 ರಷ್ಟು ಚೇತರಿಕೆ ಕಾಣುವ ಸಾಧ್ಯತೆಗಳಿದ್ದು ಕಾಮನ್‌ವೆಲ್ತ್ ಪಂದ್ಯಗಳು ಕೇವಲ ಮೂರು ವಾರಗಳ ಅವಧಿಗೆ ನಡೆಯುತ್ತಿದ್ದರೂ ಪಂದ್ಯ ಆರಂಭಕ್ಕಿಂತ ಮೊದಲ ಹೆಚ್ಚಿನ ಅತಿಥಿಗಳು ಆಗಮಿಸುವುದರಿಂದ ಹೆಚ್ಚುವರಿ ಕೋಣೆಗಳು ಇತರ ಹೆಚ್ಚುವರಿ ಸೌಲಭ್ಯಗಳನ್ನು ಒದಗಿಸಲು ಸಿದ್ದತೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಟಾಟಾ ಕಮ್ಯೂನಿಕೇಶನ್ಸ್‌‌ಗೆ 302.3ಕೋಟಿ ನಿವ್ವಳ ಲಾಭ
ಫಾರೆಕ್ಸ್: ರೂಪಾಯಿ ಮೌಲ್ಯ ಬಲವರ್ಧನೆ
ಯ‌ೂನಿಟೆಕ್ ಅಗ್ಗದ ಮನೆ
ಆಂಧ್ರ ಬ್ಯಾಂಕ್ ವಹಿವಾಟು ವೃದ್ಧಿ
ನಷ್ಟದಲ್ಲಿರುವ ಕ್ಷೇತ್ರಗಳಿಗೆ ಸರಕಾರ ಆದ್ಯತೆ: ಮುಖರ್ಜಿ
ಚಿನ್ನದ ದರ : ಪ್ರತಿ 10 ಗ್ರಾಂಗೆ 14,890 ರೂ.