ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಟಿಸಿಎಸ್‌ ಸಿಇಒ ಸ್ಥಾನಕ್ಕೆ ಚಂದ್ರಶೇಖರನ್ ನೇಮಕ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಟಿಸಿಎಸ್‌ ಸಿಇಒ ಸ್ಥಾನಕ್ಕೆ ಚಂದ್ರಶೇಖರನ್ ನೇಮಕ
ಟಾಟಾ ಕನ್ಸಲ್‌ಟನ್ಸಿ ಸರ್ವಿಸಸ್‌ನ ಕಾರ್ಯಕಾರಿ ನಿರ್ದೇಶಕ ಮತ್ತು ಸಿಒಒ ಎನ್‌ ಚಂದ್ರಶೇಖರನ್ ಅವರನ್ನು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾಗಿ ನೇಮಕ ಮಾಡಲಾಗಿದ್ದು, ಪ್ರಸ್ತುತವಿರುವ ಸಿಇಒ ರಾಮದೊರೈ ಅವರ ಅಧಿಕಾರವಧಿಯನ್ನು ಎರಡು ತಿಂಗಳವರೆಗೆ ವಿಸ್ತರಣೆ ಮಾಡಲಾಗಿದೆ.

ಟಾಟಾ ಕನ್ಸಲ್‌ಟನ್ಸಿ ಸರ್ವಿಸಸ್‌‌ನ ಅಡಳಿತ ಮಂಡಳಿಯ ನಿರ್ದೇಶಕರು ಸಿಇಒ ಹಾಗೂ ವ್ಯವಸ್ಥಾಪಕ ನಿರ್ದೇಶಕ ರಾಮದೊರೈ ಅವರ ಅಧಿಕಾರವಧಿಯನ್ನು ಶೇರುದಾರರು ಅನುಮೋದನೆಯ ಮೇರೆಗೆ ಅಗಸ್ಟ್ 2009 ರಿಂದ 2009 ಅಕ್ಟೋಬರ್ 5ರವರೆಗೆ ವಿಸ್ತರಿಸಿ ಆದೇಶ ಹೊರಡಿಸಿದೆ.

ರಾಮದೊರೈಯವರನ್ನು 2004 ಅಗಸ್ಟ್ ತಿಂಗಳಲ್ಲಿ ಸಿಇಒ ಹಾಗೂ ವ್ಯವಸ್ಥಾಪಕ ನಿರ್ದೇಶಕ ಹುದ್ದೆಗೆ ಐದು ವರ್ಷಗಳ ಅವಧಿಗೆ ನೇಮಕ ಮಾಡಲಾಗಿತ್ತು. ಟಿಸಿಎಸ್ ಕಂಪೆನಿಯಲ್ಲಿ 65 ವರ್ಷಗಳಿಗೆ ನಿವೃತ್ತಿ ಹೊಂದುವ ನೀತಿಗಳಿರುವುದರಿಂದ ಅಕ್ಟೋಬರ್ 5 ರಂದು ರಾಮದೊರೈಯವರಿಗೆ 65 ವರ್ಷಗಳು ತುಂಬಲಿರುವುದರಿಂದ ಅವರ ಸ್ಥಾನಕ್ಕೆ ಚಂದ್ರಶೇಖರನ್ ಅವರನ್ನು ನೇಮಕ ಮಾಡಲಾಗಿದೆ.

ಟಾಟಾ ಕನ್ಸಲ್‌ಟನ್ಸಿ ಸರ್ವಿಸಸ್‌ ಅಗಸ್ಟ್ 2004ರಲ್ಲಿ ಸಾರ್ವಜನಿಕ ಕ್ಷೇತ್ರಕ್ಕೆ ಕಾಲಿಟ್ಟಿದ್ದು, ಸಂಸ್ಥೆಯ ನಿಯಮದ ಪ್ರಕಾರ ವ್ಯವಸ್ಥಾಪಕ ನಿರ್ದೇಶಕರು 4-5 ವರ್ಷಗಳ ಅವಧಿಗೆ ಮಾತ್ರ ಕಾರ್ಯನಿರ್ವಹಿಸಲು ಅನುಮತಿಯಿರುವುದರಿಂದ ರಾಮ್‌ದೊರೈ ನಿವೃತ್ತಿ ಹೊಂದಬೇಕಾಗಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕಾಮನ್‌ವೆಲ್ತ್ ಗೇಮ್ಸ್: ಹೋಟೆಲ್ ಉದ್ಯಮಕ್ಕೆ ಶುಕ್ರದೆಸೆ
ಟಾಟಾ ಕಮ್ಯೂನಿಕೇಶನ್ಸ್‌‌ಗೆ 302.3ಕೋಟಿ ನಿವ್ವಳ ಲಾಭ
ಫಾರೆಕ್ಸ್: ರೂಪಾಯಿ ಮೌಲ್ಯ ಬಲವರ್ಧನೆ
ಯ‌ೂನಿಟೆಕ್ ಅಗ್ಗದ ಮನೆ
ಆಂಧ್ರ ಬ್ಯಾಂಕ್ ವಹಿವಾಟು ವೃದ್ಧಿ
ನಷ್ಟದಲ್ಲಿರುವ ಕ್ಷೇತ್ರಗಳಿಗೆ ಸರಕಾರ ಆದ್ಯತೆ: ಮುಖರ್ಜಿ