ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಬ್ಯಾಂಕ್‌ಗಳಿಂದ ಮತ್ತಷ್ಟು ಬಡ್ಡಿ ದರ ಕಡಿತ ಸಾಧ್ಯತೆ?
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬ್ಯಾಂಕ್‌ಗಳಿಂದ ಮತ್ತಷ್ಟು ಬಡ್ಡಿ ದರ ಕಡಿತ ಸಾಧ್ಯತೆ?
ಭಾರತೀಯ ರಿಸರ್ವ್ ಬ್ಯಾಂಕ್ ಆದೇಶದಂತೆ ವಿತ್ತ ಸಚಿವಾಲಯ ಸರಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಗೆ ನಿರ್ದೇಶನ ನೀಡಿದ ಹಿನ್ನೆಲೆಯಲ್ಲಿ ಮುಂಬರುವ ಎರಡು ವಾರಗಳಲ್ಲಿ 100-150 ಬೇಸಿಸ್ ಪಾಯಿಂಟ್‌ಗಳನ್ನು ಬ್ಯಾಂಕ್‌ಗಳು ಕಡಿತ ಮಾಡಲಿವೆ ಎಂದು ಮಾಧ್ಯಮ ಮೂಲಗಳು ತಿಳಿಸಿವೆ.

ಕೇಂದ್ರ ಹಣಕಾಸು ಖಾತೆ ಸಚಿವ ಪ್ರಣಬ್ ಮುಖರ್ಜಿ ಜೂನ್ 12 ರಂದು ಸಾಲ ನೀಡಿಕೆ ಹೆಚ್ಚಳ ಕುರಿತಂತೆ ಚರ್ಚಿಸಲು ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್‌ಗಳ ಮುಖ್ಯಸ್ಥರನ್ನು ಭೇಟಿ ಮಾಡಲಿರುವುದರಿಂದ ಅಂದೇ ಬ್ಯಾಂಕ್‌ಗಳು ಬೇಸಿಸ್ ಪಾಯಿಂಟ್‌ ದರ ಕಡಿತ ಘೋಷಿಸುವ ಸಾಧ್ಯತೆಗಳಿವೆ ಎಂದು ಎಕಾನಾಮಿಕ್ ಟೈಮ್ಸ್ ವರದಿ ಮಾಡಿದೆ.

ಸ್ಟೇಟ್‌ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಮಹಾರಾಷ್ಟ್ರ, ಯುಕೋ ಬ್ಯಾಂಕ್ ,ಕಾರ್ಪೋರೇಶನ್ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ರಾಜಸ್ಥಾನ್ ಬ್ಯಾಂಕ್‌ಗಳು ಬೇಸಿಸ್ ಪಾಯಿಂಟ್‌ ಕಡಿತದ ಬೆಳವಣಿಗೆಗಳನ್ನು ಖಚಿತಪಡಿಸಿವೆ.

ಕೇಂದ್ರ ರಿಸರ್ವ್ ಬ್ಯಾಂಕ್ ಅಕ್ಟೋಬರ್ ಮಧ್ಯದ ಅವಧಿಯಿಂದ ಕಡಿಮೆ ಅವಧಿಯ ಸಾಲದ ಮೇಲಿನ 425 ಬೇಸಿಸ್ ಪಾಯಿಂಟ್‌ಗಳನ್ನು ಕಡಿತಗೊಳಿಸಿದ್ದು, ದೇಶದ ಐದು ಪ್ರಮುಖ ವಾಣಿಜ್ಯ ಬ್ಯಾಂಕ್‌ಗಳು 200 ಬೇಸಿಸ್ ಪಾಯಿಂಟ್‌‌ಗಳನ್ನು ಕಡಿತ ಮಾಡಿ ಆದೇಶ ಹೊರಡಿಸಿವೆ.

ಸಾಲದ ಮೇಲಿನ ಬಡ್ಡಿ ದರಗಳು ಇಳಿಕೆ ಕಾಣುತ್ತಿರುವುದರಿಂದ ಮತ್ತಷ್ಟು ಬಡ್ಡಿ ದರಗಳನ್ನು ಕಡಿತಗೊಳಿಸುವುದು ಅಗತ್ಯವಾಗಿದೆ ಎಂದು ಕಾರ್ಪೋರೇಶನ್ ಬ್ಯಾಂಕ್ ಮುಖ್ಯಸ್ಥ ಜೆ.ಎಂ ಗರ್ಗ್ ಹೇಳಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಆರ್ಥಿಕಾಭಿವೃದ್ಧಿಗೆ ಪ್ರಥಮ ಆದ್ಯತೆ: ಪ್ರಣಬ್
ಟಿಸಿಎಸ್‌ ಸಿಇಒ ಸ್ಥಾನಕ್ಕೆ ಚಂದ್ರಶೇಖರನ್ ನೇಮಕ
ಕಾಮನ್‌ವೆಲ್ತ್ ಗೇಮ್ಸ್: ಹೋಟೆಲ್ ಉದ್ಯಮಕ್ಕೆ ಶುಕ್ರದೆಸೆ
ಟಾಟಾ ಕಮ್ಯೂನಿಕೇಶನ್ಸ್‌‌ಗೆ 302.3ಕೋಟಿ ನಿವ್ವಳ ಲಾಭ
ಫಾರೆಕ್ಸ್: ರೂಪಾಯಿ ಮೌಲ್ಯ ಬಲವರ್ಧನೆ
ಯ‌ೂನಿಟೆಕ್ ಅಗ್ಗದ ಮನೆ