ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಮೊಬೈಲ್ ಮೂಲಕ ಮುಂಗಡ ಟಿಕೆಟ್ ಕಾಯ್ದಿರಿಸಿ: ಕಿಂಗ್‌ಫಿಶರ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮೊಬೈಲ್ ಮೂಲಕ ಮುಂಗಡ ಟಿಕೆಟ್ ಕಾಯ್ದಿರಿಸಿ: ಕಿಂಗ್‌ಫಿಶರ್
ಖಾಸಗಿ ವಿಮಾನಯಾನ ಸಂಸ್ಥೆಯಾದ ಕಿಂಗ್‌ಫಿಶರ್ ಏರ್‌ಲೈನ್ಸ್ , ಮೊಬೈಲ್ ಮುಖಾಂತರ ಮುಂಗಡ ಟಿಕೆಟ್ ಕಾಯ್ದಿರಿಸುವ ಕಿಂಗ್‌ ಮೊಬೈಲ್ ವ್ಯವಸ್ಥೆಯನ್ನು ಆರಂಭಿಸಿದ್ದು, ಜಿಪಿಆರ್‌ಎಸ್‌ ಮೊಬೈಲ್ ಹ್ಯಾಂಡ್‌ಸೆಟ್‌ಗಳ ಮುಖಾಂತರ ngpayನಲ್ಲಿ ನೋಂದಾಯಿಸಿದ ನಂತರ ಯಾವಾಗ ಬೇಕಾದರೂ ಎಲ್ಲಿಗೆ ಬೇಕಾದರೂ ಟಿಕೆಟ್ ಕಾಯ್ದಿರಿಸಬಹುದಾಗಿದೆ ಎಂದು ಕಿಂಗ್‌‌ಫಿಶರ್ ಮೂಲಗಳು ತಿಳಿಸಿವೆ,

ngpay ವಾಣಿಜ್ಯ ಸೇವೆಯನ್ನು ನೀಡುವ ವ್ಯವಸ್ಥೆಯಾಗಿದ್ದು, ಸದಸ್ಯತ್ವ ನೋಂದಣಿಯಾದ ನಂತರ ಮುಂಗಡ ಟಿಕೆಟ್ ಕಾಯ್ದಿರಿಸಬಹುದಾಗಿದೆ.

ಜಿಪಿಆರ್‌ಎಸ್ ಮೊಬೈಲ್ ಹ್ಯಾಂಡ್‌ಸೆಟ್ ಹೊಂದಿರುವ ಗ್ರಾಹಕರು ಹೈ-ಎಂಡ್ ಅಥವಾ ಲೋ-ಎಂಡ್ ಫೋನ್‌ಗಳ ಮುಖಾಂತರ ಕಿಂಗ್‌ಫಿಶರ್ ಟಿಕೆಟ್‌ಗಳ ಮುಂಗಡ ಬುಕ್ಕಿಂಗ್ ಮಾಡಬಹುದಾಗಿದೆಎಂದು ಕಿಂಗ್‌ಫಿಶರ್ ಏರ್‌ಲೈನ್ಸ್ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.

ಕಿಂಗ್ ಮೊಬೈಲ್ ಆರಂಭದಿಂದಾಗಿ ವಿಮಾನಯಾನ ಪ್ರಯಾಣಿಕರು ತಮ್ಮ ಮೊಬೈಲ್ ಫೋನ್‌ ಮುಖಾಂತರ ಕಿಂಗ್‌ಫಿಶರ್ ಹಾಲಿಡೇಸ್ ಸ್ಥಳಗಳನ್ನು ಇ-ಮೇಲ್ ಮೂಲಕ ಪರಿಶೀಲಿಸಿ ಇ-ಟಿಕೆಟ್‌‌ಗಳ ದರವನ್ನು ಪಾವತಿಸಿ ಮುಂಗಡ ಟಿಕೆಟ್‌ ಕಾಯ್ದಿರಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಆದರೆ ಈ ಸೇವೆಯನ್ನು ಬಯಸುವ ಗ್ರಾಹಕರು ತಮ್ಮ ಜುಪಿಆರ್‌ಎಸ್ ಹ್ಯಾಂಡ್‌ಸೆಟ್ ಮೂಲಕ ಕಿಂಗ್‌ ಮೊಬೈಲ್‌ಗೆ 56388 ಎಸ್‌ಎಂಎಸ್ ಕಳುಹಿಸಿದಲ್ಲಿ ngpay ಅರ್ಜಿಯನ್ನು ಪಡೆದು ಡೌನ್‌ಲೋಡ್ ಮಾಡಬಹುದಾಗಿದೆ.

ಒಂದು ಬಾರಿ ngpayನಲ್ಲಿ ನೋಂದಣಿಯಾದಲ್ಲಿ ಗ್ರಾಹಕರು ಕಿಂಗ್ ಫಿಶರ್ ಹಾಲಿಡೇಸ್‌ ಪ್ಯಾಕೇಜ್ಸ್‌‌ಗಳಿಗೆ ಮುಂಗಡ ಟಿಕೆಟ್ ಕಾಯ್ದಿರುಸುವುದಲ್ಲದೇ ಕಿಂಗ್‍‌ ಇ-ಮೇಲ್‌ಗಳನ್ನು ಪರಿಶೀಲಿಸಬಹುದಾಗಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಬ್ಯಾಂಕ್‌ಗಳಿಂದ ಮತ್ತಷ್ಟು ಬಡ್ಡಿ ದರ ಕಡಿತ ಸಾಧ್ಯತೆ?
ಆರ್ಥಿಕಾಭಿವೃದ್ಧಿಗೆ ಪ್ರಥಮ ಆದ್ಯತೆ: ಪ್ರಣಬ್
ಟಿಸಿಎಸ್‌ ಸಿಇಒ ಸ್ಥಾನಕ್ಕೆ ಚಂದ್ರಶೇಖರನ್ ನೇಮಕ
ಕಾಮನ್‌ವೆಲ್ತ್ ಗೇಮ್ಸ್: ಹೋಟೆಲ್ ಉದ್ಯಮಕ್ಕೆ ಶುಕ್ರದೆಸೆ
ಟಾಟಾ ಕಮ್ಯೂನಿಕೇಶನ್ಸ್‌‌ಗೆ 302.3ಕೋಟಿ ನಿವ್ವಳ ಲಾಭ
ಫಾರೆಕ್ಸ್: ರೂಪಾಯಿ ಮೌಲ್ಯ ಬಲವರ್ಧನೆ