ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಸತ್ಯಂನ ಆಸ್ಟ್ರೇಲಿಯಾ ಮುಖ್ಯಸ್ಥ ನಾಂಗಿಯಾ ರಾಜೀನಾಮೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸತ್ಯಂನ ಆಸ್ಟ್ರೇಲಿಯಾ ಮುಖ್ಯಸ್ಥ ನಾಂಗಿಯಾ ರಾಜೀನಾಮೆ
ಮಾಹಿತಿ ತಂತ್ರಜ್ಞಾನ ಕ್ಷೇತ್ರದ ದಿಗ್ಗಜ ಕಂಪೆನಿ ಸತ್ಯಂ ಕಂಪ್ಯೂಟರ್ಸ್‌ನ ಆಸ್ಟ್ರೇಲಿಯಾ ಶಾಖೆಯ ಮುಖ್ಯಸ್ಥ ದೀಪಕ್ ನಾಂಗಿಯಾ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಆಸ್ಟ್ರೇಲಿಯಾದಲ್ಲಿ ಸತ್ಯಂ ಕಂಪ್ಯೂಟರ್ಸ್‌ ಸಂಸ್ಥೆಯ ಮುಖ್ಯಸ್ಥರಾಗಿದ್ದ ದೀಪಕ್ ನಾಂಗಿಯಾ ಮಾಧ್ಯಮಗಳೊಂದಿಗೆ ಮಾತನಾಡಿ, ಕಳೆದ ಮೂರು ವಾರಗಳ ಹಿಂದೆ ತಮ್ಮ ಹುದ್ದೆಗೆ ರಾಜೀನಾಮೆಯನ್ನು ನೀಡಿದ್ದು, ಇತರ ಅವಕಾಶಗಳಿಗಾಗಿ ಹುಡುಕಾಟ ನಡೆಸುತ್ತಿರುವುದಾಗಿ ಹೇಳಿದ್ದಾರೆ ಎಂದು ಮಾಧ್ಯಮಗಳ ವರದಿ ಮಾಡಿವೆ.

ಸತ್ಯಂ ಸಂಸ್ಥೆಯಲ್ಲಿ ಕಳೆದ 2002 ರಿಂದ ಕಾರ್ಯನಿರ್ವಹಿಸುತ್ತಿದ್ದು, 200 ಮಿಲಿಯನ್ ಡಾಲರ್ ವಹಿವಾಟು ನಡೆಸುವಲ್ಲಿ ಮಹತ್ತರ ಪಾತ್ರವಹಿಸಿ ಟೆಲ್‌ಸ್ಟ್ರಾ, ನ್ಯಾಬ್ ಮತ್ತು ಕ್ವಿಂಟಾಸ್‌ನಂತಹ ಜಾಗತಿಕ ಕಂಪೆನಿಗಳೊಂದಿಗೆ ವಹಿವಾಟು ಕುದುರಿಸುವಲ್ಲಿ ಯಶಸ್ವಿಯಾಗಿದ್ದರು.

ಸತ್ಯಂ ಕಂಪೆನಿಯ ವಕ್ತಾರರು ಮಾತನಾಡಿ, ನಾಂಗಿಯಾ ರಾಜೀನಾಮೆ ನೀಡಿರುವುದಪರಿಂದ ಅವರ ಸ್ಥಾನಕ್ಕೆ ಮತ್ತೊಬ್ಬರನ್ನು ಗುರುತಿಸಲಾಗಿದ್ದು,ಶೀಘ್ರದಲ್ಲಿ ಘೋಷಿಸಲಾಗುವುದು ಎಂದು ತಿಳಿಸಿದ್ದಾರೆ.

ಆದರೆ, ಟೆಲ್‌ಸ್ಟ್ರಾ ಮತ್ತು ನ್ಯಾಬ್ ಕಂಪೆನಿಗಳು ಸತ್ಯಂ ಕಂಪ್ಯೂಟರ್ಸ್‌ನ ಸಂಸ್ಥಾಪಕ ರಾಮಲಿಂಗಾರಾಜು ಎಸಗಿದ ಬಹುಕೋಟಿ ವಂಚನೆಯಿಂದಾಗಿ ಒಪ್ಪಂದಗಳನ್ನು ಹಿಂದಕ್ಕೆ ತೆಗೆದುಕೊಳ್ಳುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಬ್ರಿಟಾನಿಯಾ ಇಂಡಸ್ಟ್ರೀಸ್‌ಗೆ 151 ಕೋಟಿ ಲಾಭ
ಫಾರೆಕ್ಸ್: ರೂಪಾಯಿ ಮೌಲ್ಯ ಕುಸಿತ
ಎಂಆರ್‌ಪಿಎಲ್‌ಗೆ 607.62 ಕೋಟಿ ನಿವ್ವಳ ಲಾಭ
ಹಂದಿಜ್ವರ ಔಷಧಿ ಮೇಲಿನ ಆಮದು ತೆರಿಗೆ ರದ್ದು
ಸತ್ಯಂ ರಾಜು ಬಂಧನದ ಆವಧಿ ಜೂನ್ 10 ರವರೆಗೆ ವಿಸ್ತರಣೆ
ಮೊಬೈಲ್ ಮೂಲಕ ಮುಂಗಡ ಟಿಕೆಟ್ ಕಾಯ್ದಿರಿಸಿ: ಕಿಂಗ್‌ಫಿಶರ್