ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಹಣದುಬ್ಬರ ದರ ಶೇ.0.61ಕ್ಕೆ ಏರಿಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹಣದುಬ್ಬರ ದರ ಶೇ.0.61ಕ್ಕೆ ಏರಿಕೆ
ಅಹಾರ ಧಾನ್ಯಗಳ ದರಗಳಲ್ಲಿ ಏರಿಕೆ ಕಂಡುಬಂದರೂ ಮೇ 16ಕ್ಕೆ ವಾರಂತ್ಯಗೊಂಡಂತೆ ಹಣದುಬ್ಬರ ದರ ಶೇ.0.61ಕ್ಕೆ ತಲುಪಿದ್ದು, ಹಿಂದಿನ ವಾರದಂತೆ ಪ್ರಸಕ್ತ ವಾರದ ಹಣದುಬ್ಬರ ಪ್ರಮಾಣದಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ ಎಂದು ವಿತ್ತಸಚಿವಾಲಯದ ಮೂಲಗಳು ತಿಳಿಸಿವೆ.

ಸಗಟು ಸೂಚ್ಯಂಕ ಹಣದುಬ್ಬರ ದರ ಹಿಂದಿನ ವರ್ಷದ ಮೇ ತಿಂಗಳ ನಾಲ್ಕನೇ ವಾರದಲ್ಲಿ ಶೇ8.66 ರಷ್ಟಾಗಿತ್ತು ಎಂದು ವಿತ್ತ ಸಚಿವಾಲಯದ ಅಧಿಕಾರಿಗಳು ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದ್ದಾರೆ.

ಪ್ರಸಕ್ತ ವಾರದಲ್ಲಿ ವಿಮಾನಯಾನ ಇಂಧನ ಮತ್ತು ಇಂಜಿನ್ ತೈಲ ದರದಲ್ಲಿ ಶೇ.2 ರಷ್ಟು ಏರಿಕೆಯಾಗಿದೆ

ಉತ್ಪಾದಕ ವಸ್ತುಗಳಲ್ಲಿ ಕಚ್ಚಾ ತೈಲ ದರ ಶೇ.21ಕ್ಕೆ ಏರಿಕೆಯಾಗಿದ್ದು, ಅಹಾರ ಧಾನ್ಯಗಳಲ್ಲಿ ಶೇ.7 ರಷ್ಟು ಮತ್ತು ಅಮುದು ಖಾದ್ಯ ತೈಲ ಶೇ.3 ರಷ್ಟು ಏರಿಕೆ ಕಂಡಿವೆ.

ಹಣದುಬ್ಬರ ದರ ಮಾರ್ಚ್ 21ಕ್ಕೆ ವಾರಂತ್ಯಗೊಂಡಂತೆ ಶೇ.0.31 ರಿಂದ ಶೇ.0.84 ರಷ್ಟು ನಿರೀಕ್ಷೆಯಂತೆ ಏರಿಕೆ ಕಾಣುವ ಸಾಧ್ಯತೆಗಳಿವೆ ಎಂದು ಆರ್ಥಿಕ ತಜ್ಞರು ಹೇಳಿಕೆ ನೀಡಿದ್ದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಟೆಕ್ ಮಹೀಂದ್ರಾ ನಿರ್ದೇಶಕರು ಸತ್ಯಂಗೆ ಸೇರ್ಪಡೆ
ಸತ್ಯಂನ ಆಸ್ಟ್ರೇಲಿಯಾ ಮುಖ್ಯಸ್ಥ ನಾಂಗಿಯಾ ರಾಜೀನಾಮೆ
ಬ್ರಿಟಾನಿಯಾ ಇಂಡಸ್ಟ್ರೀಸ್‌ಗೆ 151 ಕೋಟಿ ಲಾಭ
ಫಾರೆಕ್ಸ್: ರೂಪಾಯಿ ಮೌಲ್ಯ ಕುಸಿತ
ಎಂಆರ್‌ಪಿಎಲ್‌ಗೆ 607.62 ಕೋಟಿ ನಿವ್ವಳ ಲಾಭ
ಹಂದಿಜ್ವರ ಔಷಧಿ ಮೇಲಿನ ಆಮದು ತೆರಿಗೆ ರದ್ದು