ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಉತ್ತೇಜನ ಪ್ಯಾಕೇಜ್‌ನಿಂದ 1.50 ಲಕ್ಷ ಉದ್ಯೋಗ ಸೃಷ್ಟಿ: ಒಬಾಮಾ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಉತ್ತೇಜನ ಪ್ಯಾಕೇಜ್‌ನಿಂದ 1.50 ಲಕ್ಷ ಉದ್ಯೋಗ ಸೃಷ್ಟಿ: ಒಬಾಮಾ
ಅಮೆರಿಕದ ಅಧ್ಯಕ್ಷರಾಗಿ ತಾವು ಅಧಿಕಾರ ಸ್ವೀಕರಿಸಿದ ನಂತರ 787 ಬಿಲಿಯನ್ ಡಾಲರ್‌ಗಳ ಉತ್ತೇಜನ ಪ್ಯಾಕೇಜ್‌ ಘೋಷಿಸಿದ ಹಿನ್ನೆಲೆಯಲ್ಲಿ ಪರೋಕ್ಷವಾಗಿ 1.50 ಲಕ್ಷ ಉದ್ಯೋಗಗಳು ಸೃಷ್ಟಿಯಾಗಿವೆ ಅಥವಾ ಉಳಿಯಲು ಸಾಧ್ಯವಾಗಿವೆ ಎಂದು ಬರಾಕ್ ಒಬಾಮಾ ಹೇಳಿದ್ದಾರೆ.

ಅರ್ಧ ಶತಮಾನದಿಂದ ಎಂದೂ ಕಾಣದಂತಹ ಆರ್ಥಿಕ ಕುಸಿತ ಆತಂಕ ಸೃಷ್ಟಿಸಿತ್ತು. ನೂರು ದಿನಗಳ ಹಿಂದೆ ಎದುರಾಗಿದ್ದ ಜಾಗತಿಕ ಆರ್ಥಿಕ ಬಿಕ್ಕಟ್ಟಿನಿಂದ ಹೊರಬಂದಿದ್ದು, ಪ್ರಸಕ್ತ ಅವಧಿಯಲ್ಲಿ ಉತ್ತಮ ಆರ್ಥಿಕ ಫಲಿತಾಂಶಗಳು ಕಂಡುಬರುತ್ತಿವೆ ಎಂದು ಒಬಾಮಾ ಲಾಸ್ ವೆಗಾಸ್‌ ನೆವಡಾ ನಗರದಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ .

ಉತ್ತೇಜನ ಪ್ಯಾಕೇಜ್‌ಗಳಲ್ಲಿ ತೆರಿಗೆ ಕಡಿತ ಅಳವಡಿಸಿರುವುದರಿಂದ ದೇಶದ ಅನೇಕ ಕುಟಂಬಗಳ ವೇತನಗಳಲ್ಲಿ ಏರಿಕೆಯಾಗಿದ್ದು, ಉದ್ಯೋಗದಿಂದ ವಂಚಿತರಾದವರಿಗೆ ಹೆಚ್ಚುವರಿ ಸೌಲಭ್ಯಗಳು ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ವೆಚ್ಚದಲ್ಲಿ ರಿಯಾಯಿತಿ ಘೋಷಿಸಲಾಗಿದೆ ಎಂದು ತಿಳಿಸಿದ್ದಾರೆ.

ನಾವು ಸರಿಯಾದ ದಾರಿಯನ್ನು ಕ್ರಮಿಸಿದ್ದರೂ ಆರ್ಥಿಕತೆ ಸುಸ್ಥಿತಿಗೆ ತಲುಪುವ ಗುರಿ ತುಂಬಾ ದೂರವಿದೆ ಎಂದು ಅಧ್ಯಕ್ಷ ಬರಾಕ್ ಒಬಾಮಾ ಹೇಳಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಲೀಡ್‌ ಬ್ಯಾಂಕ್‌ಗಳು ಗ್ರಾಹಕರ ಸಭೆ ನಡೆಸಲಿ:ಆರ್‌ಬಿಐ
ಎಲ್‌ ಆಂಡ್ ಟಿ ನಿವ್ವಳ ಲಾಭದಲ್ಲಿ ಗಣನೀಯ ಏರಿಕೆ
ಹಣದುಬ್ಬರ ದರ ಶೇ.0.61ಕ್ಕೆ ಏರಿಕೆ
ಟೆಕ್ ಮಹೀಂದ್ರಾ ನಿರ್ದೇಶಕರು ಸತ್ಯಂಗೆ ಸೇರ್ಪಡೆ
ಸತ್ಯಂನ ಆಸ್ಟ್ರೇಲಿಯಾ ಮುಖ್ಯಸ್ಥ ನಾಂಗಿಯಾ ರಾಜೀನಾಮೆ
ಬ್ರಿಟಾನಿಯಾ ಇಂಡಸ್ಟ್ರೀಸ್‌ಗೆ 151 ಕೋಟಿ ಲಾಭ