ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಫಾರೆಕ್ಸ್: ರೂಪಾಯಿ ಮೌಲ್ಯ ಬಲವರ್ಧನೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಫಾರೆಕ್ಸ್: ರೂಪಾಯಿ ಮೌಲ್ಯ ಬಲವರ್ಧನೆ
ದೇಶಿಯ ಶೇರುಪೇಟೆಯ ಚೇತರಿಕೆಯಿಂದಾಗಿ ವಿದೇಶಿ ಬಂಡವಾಳದ ಒಳಹರಿವು ಹೆಚ್ಚಳವಾಗುವ ಸಾಧ್ಯತೆಗಳ ಹಿನ್ನೆಲೆಯಲ್ಲಿ ಡಾಲರ್ ಎದುರಿಗೆ ರೂಪಾಯಿ ಮೌಲ್ಯದಲ್ಲಿ 9 ಪೈಸೆ ಏರಿಕೆಯಾಗಿದೆ.

ವಿದೇಶಿ ವಿನಿಮಯ ಮಾರುಕಟ್ಟೆಯ ಹಿಂದಿನ ದಿನದ ವಹಿವಾಟಿನ ಮುಕ್ತಾಯಕ್ಕೆ 10 ಪೈಸೆ ಏರಿಕೆ ಕಂಡು 47.60/62 ರೂಪಾಯಿಗಳಿಗೆ ತಲುಪಿತ್ತು. ಇಂದಿನ ಆರಂಭಿಕ ವಹಿವಾಟಿನಲ್ಲಿ ಮತ್ತೆ 9 ಪೈಸೆ ಏರಿಕೆ ಕಂಡಿದ್ದರಿಂದ 47.51 ರೂಪಾಯಿಗಳಿಗೆ ತಲುಪಿದೆ.

ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಅಧಿಕಾರಕ್ಕೆ ಬಂದ ಹಿನ್ನೆಲೆಯಲ್ಲಿ ರಾಜಕೀಯ ಸ್ಥಿರತೆಯಿಂದಾಗಿ ವಿದೇಶಿ ಬಂಡವಾಳದ ಒಳಹರಿವು ನಿರಂತರವಾಗಿ ಹೆಚ್ಚಳವಾಗುತ್ತಿರುವುದರಿಂದ ರೂಪಾಯಿ ಮೌಲ್ಯಕ್ಕೆ ಬೆಂಬಲ ದೊರೆತಿರುವುದು ಹಾಗೂ ಇತರ ಕರೆನ್ಸಿಗಳ ಎದಿರು ಡಾಲರ್‌ ದುರ್ಬಲಗೊಂಡಿದ್ದರಿಂದ ರೂಪಾಯಿ ಮೌಲ್ಯ ಏರಿಕೆಗೆ ಕಾರಣವಾಗಿದೆ ಎಂದು ಫಾರೆಕ್ಸ್ ಡೀಲರ್‌ಗಳು ತಿಳಿಸಿದ್ದಾರೆ.

ಮಾಸಾಂತ್ಯದ ಹಿನ್ನೆಲೆಯಲ್ಲಿ ಅಮುದು ಹಾಗೂ ತೈಲ ವಹಿವಾಟುದಾರರಿಂದ ಡಾಲರ್‌ ಬೇಡಿಕೆಯ ಹೆಚ್ಚಳದ ಮಧ್ಯೆಯು ರೂಪಾಯಿ ಮೌಲ್ಯದಲ್ಲಿ ಏರಿಕೆ ಕಂಡಿದೆ.

ಶೇರುಪೇಟೆಯ ಹಿಂದಿನ ದಿನದ ವಹಿವಾಟಿನಲ್ಲಿ ಬಿಎಸ್‌ಇ ಶೇರುಸೂಚ್ಯಂಕ 186 ಪಾಯಿಂಟ್‌ಗಳ ಏರಿಕೆ ಕಂಡು 14,296.01 ಅಂಕಗಳಿಗೆ ತಲುಪಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಗೋದ್ರೇಜ್ ಗಾರ್ಡನ್ ಸಿಟಿ
ಬಜೆಟ್‌ನಲ್ಲಿ ಶೇರು ವಿಕ್ರಯ ಪ್ರಸ್ತಾಪ
ಆರ್ಥಿಕ ಬಿಕ್ಕಟ್ಟು ಪರಿಹಾರ: ಭಾರತಕ್ಕೆ 3ನೇ ಸ್ಥಾನ
ಉತ್ತೇಜನ ಪ್ಯಾಕೇಜ್‌ನಿಂದ 1.50 ಲಕ್ಷ ಉದ್ಯೋಗ ಸೃಷ್ಟಿ: ಒಬಾಮಾ
ಲೀಡ್‌ ಬ್ಯಾಂಕ್‌ಗಳು ಗ್ರಾಹಕರ ಸಭೆ ನಡೆಸಲಿ:ಆರ್‌ಬಿಐ
ಎಲ್‌ ಆಂಡ್ ಟಿ ನಿವ್ವಳ ಲಾಭದಲ್ಲಿ ಗಣನೀಯ ಏರಿಕೆ