ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಸೆಪ್ಟೆಂಬರ್‌‌ನಲ್ಲಿ ರಿಯಲ್ ಎಸ್ಟೇಟ್‌ ಉದ್ಯಮ ಚೇತರಿಕೆ: ಅಸೋಚಾಮ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸೆಪ್ಟೆಂಬರ್‌‌ನಲ್ಲಿ ರಿಯಲ್ ಎಸ್ಟೇಟ್‌ ಉದ್ಯಮ ಚೇತರಿಕೆ: ಅಸೋಚಾಮ್
ಜಾಗತಿಕ ಆರ್ಥಿಕ ಕುಸಿತದಿಂದ ಬಳಲುತ್ತಿರುವ ರಿಯಲ್ ಎಸ್ಟೇಟ್‌ ಕ್ಷೇತ್ರ, ಮುಂಬರುವ ಮೂರು ತಿಂಗಳೊಳಗಾಗಿ ಸುಸ್ಥಿತಿಗೆ ಬರಲಿದೆ ಎಂದು ದೇಶದ ಕೈಗಾರಿಕೋದ್ಯಮ ಸಂಘಟನೆಯಾದ ಅಸೋಚಾಮ್ ಸಮೀಕ್ಷೆಯಲ್ಲಿ ತಿಳಿಸಿದೆ.

ರಿಯಲ್ ಎಸ್ಟೇಟ್‌ ವಹಿವಾಟುದಾರರು ಕೇಂದ್ರ ಸರಕಾರ ಮುಂಬರುವ ಬಜೆಟ್‌ನಲ್ಲಿ ಕೆಲ ನೀತಿಗಳನ್ನು ಪರಿಷ್ಕರಿಸಿ ಕ್ಷೇತ್ರವನ್ನು ಸುಸ್ಥಿತಿಗೆ ತರುವಲ್ಲಿ ಸಹಾಯ ಹಸ್ತ ಚಾಚಲಿದೆ ಎಂದು ಕ್ಷೇತ್ರದ ಉದ್ಯಮಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬಜೆಟ್‌ನಲ್ಲಿ ರಿಯಲ್ ಎಸ್ಟೇಟ್‌ ಉದ್ಯಮಕ್ಕೆ ಅನುಕೂಲವಾದಂತಹ ನೀತಿಗಳನ್ನು ಜಾರಿಗೆ ತಂದು ಗೃಹಯೋಜನೆಗಳಿಗೆ ಸಾಲಸೌಲಭ್ಯ ಕಟ್ಟಡ ನಿರ್ಮಾಣ ವಸ್ತುಗಳ ದರ ಇಳಿಕೆ ಮತ್ತಿತರ ಸೌಲಭ್ಯಗಳನ್ನು ಜಾರಿಗೆ ತಂದಲ್ಲಿ ಉದ್ಯಮ ಚೇತರಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ದೇಶದ ಪ್ರಮುಖ 25 ರಿಯಲ್ ಎಸ್ಟೇಟ್‌ ಉದ್ಯಮಿಗಳು ಸಮೀಕ್ಷೆಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ಗೃಹ ಯೋಜನೆಗಳು ರಿಯಲ್ ಎಸ್ಟೇಟ್‌ ಉದ್ಯಮದಲ್ಲಿ ಪ್ರಮುಖ ಪಾತ್ರ ವಹಿಸುವುದರಿಂದ ಯೋಜನೆಗಳಿಗೆ ಸರಕಾರ ಹೆಚ್ಚಿನ ಆದ್ಯತೆ ನೀಡಿದಲ್ಲಿ ರಿಯಲ್ ಎಸ್ಟೇಟ್‌ ಉದ್ಯಮ ಸುಸ್ಥಿತಿಗೆ ಮರಳಲು ಸಾಧ್ಯವಾಗುತ್ತದೆ ಎಂದು ಶೇ.92 ರಷ್ಟು ಉದ್ಯಮಿಗಳು ಅಭಿಪ್ರಾಯಪಟ್ಟಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಫಾರೆಕ್ಸ್: ರೂಪಾಯಿ ಮೌಲ್ಯ ಬಲವರ್ಧನೆ
ಗೋದ್ರೇಜ್ ಗಾರ್ಡನ್ ಸಿಟಿ
ಬಜೆಟ್‌ನಲ್ಲಿ ಶೇರು ವಿಕ್ರಯ ಪ್ರಸ್ತಾಪ
ಆರ್ಥಿಕ ಬಿಕ್ಕಟ್ಟು ಪರಿಹಾರ: ಭಾರತಕ್ಕೆ 3ನೇ ಸ್ಥಾನ
ಉತ್ತೇಜನ ಪ್ಯಾಕೇಜ್‌ನಿಂದ 1.50 ಲಕ್ಷ ಉದ್ಯೋಗ ಸೃಷ್ಟಿ: ಒಬಾಮಾ
ಲೀಡ್‌ ಬ್ಯಾಂಕ್‌ಗಳು ಗ್ರಾಹಕರ ಸಭೆ ನಡೆಸಲಿ:ಆರ್‌ಬಿಐ