ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > 2011ರಲ್ಲಿ 200 ಮಿನ್‌ ಸಿಡಿಎಂಎ ಗ್ರಾಹಕರ ಸೇರ್ಪಡೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
2011ರಲ್ಲಿ 200 ಮಿನ್‌ ಸಿಡಿಎಂಎ ಗ್ರಾಹಕರ ಸೇರ್ಪಡೆ
ಸಿಡಿಎಂಎ ಮಾರುಕಟ್ಟೆಯಲ್ಲಿ ಜಗತ್ತಿನಲ್ಲಿ ಎರಡನೇ ಸ್ಥಾನಪಡೆದ ಭಾರತ, ಪ್ರಸ್ತುತ 100 ಮಿಲಿಯನ್ ಸಿಡಿಎಂಎ ಗ್ರಾಹಕರನ್ನು ಹೊಂದಿದ್ದು, ಮುಂಬರುವ ಎರಡು ವರ್ಷಗಳಲ್ಲಿ ಮತ್ತೆ 100 ಮಿಲಿಯನ್ ಗ್ರಾಹಕರನ್ನು ಹೊಂದಲಿದೆ ಎಂದು ವಹಿವಾಟು ಸಂಘಟನೆ ತಿಳಿಸಿದೆ.

ಸಿಡಿಎಂಎ ಡೆವಲೆಪ್‌ಮೆಂಟ್‌ ಗ್ರೂಪ್ ವಹಿವಾಟು ಸಂಘಟನೆ ಭಾರತದಲ್ಲಿ ಪ್ರಸ್ತುತ 100 ಮಿಲಿಯನ್ ಸಿಡಿಎಂಎ ಗ್ರಾಹಕರನ್ನು ಹೊಂದಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಕಳೆದ ಕೇವಲ ಎರಡು ವರ್ಷಗಳಲ್ಲಿ ದೇಶದಲ್ಲಿ 50 ಮಿಲಿಯನ್ ಗ್ರಾಹಕರು ಸೇರ್ಪಡೆಯಾಗಿದ್ದು, ಮುಂಬರುವ ಎರಡು ವರ್ಷಗಳಲ್ಲಿ ಮತ್ತೆ 100 ಮಿಲಿಯನ್ ಗ್ರಾಹಕರ ಸ್ರೇಪಟೆಯಾಗಲಿದೆ ಎಂದು ಸಂಘಟನೆಯ ಕಾರ್ಯಕಾರಿ ನಿರ್ದೇಶಕ ಪೆರ್ರಿ ಲಾಫೋರ್ಜೆ ಹೇಳಿದ್ದಾರೆ.

ಕೋಡ್ ಡಿವಿಸನ್ ಮಲ್ಟಿಪಲ್‌ ಎಕ್ಸೆಸ್‌ ಸಿಡಿಎಂಎ ಅತ್ಯಾಧುನಿಕ ಮೊಬೈಲ್ ತಂತ್ರಜ್ಞಾನವನ್ನು ಹೊಂದಿದ್ದು, ಭಾರತದಲ್ಲಿ ಟಾಟಾ ಟೆಲಿಸರ್ವಿಸಸ್ , ರಿಲಯನ್ಸ್ ಕಮ್ಯೂನಿಕೇಶನ್ಸ್ ‌ಗಳು ಸಿಡಿಎಂಎ ತಂತ್ರಜ್ಞಾನ ಹೊಂದಿರುವ ಮೊಬೈಲ್ ಸೇವೆಗಳನ್ನು ನೀಡುತ್ತಿವೆ. ಮತ್ತೊಂದು ಅತ್ಯಾಧುನಿಕ ತಂತ್ರಜ್ಞಾನ ಜಿಎಸ್‌ಎಂ ಕೂಡಾ ಕಾರ್ಯನಿರ್ವಹಿಸುತ್ತಿದೆ.

ಸಿಡಿಎಂಎ ಆಪರೇಟರ್‌ಗಳು ಹ್ಯಾಂಡ್‌ಸೆಟ್ ಉತ್ಪಾದಕರು ಹಾಗೂ ದರದಲ್ಲಿ ಶೇ.40 ರಷ್ಟು ಇಳಿಕೆಯಾಗಿದ್ದರಿಂದ ಗ್ರಾಹಕರಿಗೆ ಪ್ರಿಯವಾದ ಮೊಬೈಲ್ ತಂತ್ರಜ್ಞಾನವಾಗಿದೆ ಎಂದು ನಿರ್ದೇಶಕ ಲಾಫೋರ್ಜೆ ತಿಳಿಸಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸೆಪ್ಟೆಂಬರ್‌‌ನಲ್ಲಿ ರಿಯಲ್ ಎಸ್ಟೇಟ್‌ ಉದ್ಯಮ ಚೇತರಿಕೆ: ಅಸೋಚಾಮ್
ಫಾರೆಕ್ಸ್: ರೂಪಾಯಿ ಮೌಲ್ಯ ಬಲವರ್ಧನೆ
ಗೋದ್ರೇಜ್ ಗಾರ್ಡನ್ ಸಿಟಿ
ಬಜೆಟ್‌ನಲ್ಲಿ ಶೇರು ವಿಕ್ರಯ ಪ್ರಸ್ತಾಪ
ಆರ್ಥಿಕ ಬಿಕ್ಕಟ್ಟು ಪರಿಹಾರ: ಭಾರತಕ್ಕೆ 3ನೇ ಸ್ಥಾನ
ಉತ್ತೇಜನ ಪ್ಯಾಕೇಜ್‌ನಿಂದ 1.50 ಲಕ್ಷ ಉದ್ಯೋಗ ಸೃಷ್ಟಿ: ಒಬಾಮಾ