ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಟಾಟಾ ಪವರ್‌ನಿಂದ 1350 ಕೋಟಿ ರೂಪಾಯಿ ಹೂಡಿಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಟಾಟಾ ಪವರ್‌ನಿಂದ 1350 ಕೋಟಿ ರೂಪಾಯಿ ಹೂಡಿಕೆ
ವಿದ್ಯುತ್ ಉತ್ಪಾದನೆ ಸಾಮರ್ಥ್ಯ ಹೆಚ್ಚಳ , ಪ್ರಸಾರಣೆ ಜಾಲದಲ್ಲಿರುವ ಅವಕಾಶಗಳ ಬಳಕೆಗಳಿಗಾಗಿ ಟಾಟಾ ಪವರ್ ಕಂಪೆನಿ ಪ್ರಸಕ್ತ ವರ್ಷದ ಆರ್ಥಿಕ ಸಾಲಿನಲ್ಲಿ 1,350 ಕೋಟಿ ರೂಪಾಯಿಗಳ ಹೂಡಿಕೆ ಮಾಡಲಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ಪ್ರಸಕ್ತ ವರ್ಷದಲ್ಲಿ ವಿದ್ಯುತ್ ಕ್ಷೇತ್ರಕ್ಕೆ 1,350 ಕೋಟಿ ರೂಪಾಯಿಗಳ ಹೂಡಿಕೆ ಮಾಡಲಾಗುತ್ತಿದ್ದು, ಅದಲ್ಲದೇ ಇನ್ನತರ ಅವಶ್ಕತೆಗಳಿಗಾಗಿ ಒಟ್ಟಾರೆ 4 ಸಾವಿರ ಕೋಟಿ ರೂಪಾಯಿ ಹೂಡಿಕೆ ಮಾಡಲಾಗುತ್ತಿದೆ ಎಂದು ಟಾಟಾ ಪವರ್‌ನ ಕಾರ್ಯಕಾರಿ ನಿರ್ದೇಶಕ (ಹಣಕಾಸು) ಎಸ್‌. ರಾಮಕೃಷ್ಣನ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಟಾಟಾ ಪವರ್ ಕಂಪೆನಿ 1200 ಕೋಟಿ ರೂಪಾಯಿಗಳ ಸಾಲಕ್ಕಾಗಿ ಬ್ಯಾಂಕ್‌ಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಬಾಕಿ ಸಾಲಗಳಿಗಾಗಿ ಹಣಕಾಸು ಸಂಸ್ಥೆಗಳ ನೆರವು ಪಡೆಯುತ್ತಿದೆ ಎಂದು ತಿಳಿಸಿದ್ದಾರೆ.

ಕಂಪೆನಿಯಲ್ಲಿ ಈಗಾಗಲೇ 2,700 ಮೆಗಾ ವ್ಯಾಟ್‌ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯವಿದ್ದು, ಹೂಡಿಕೆಯಿಂದಾಗಿ 200 ಮೆಗಾವ್ಯಾಟ್‌ ಹೆಚ್ಚುವರಿ ವಿದ್ಯುತ್ ಉತ್ಪಾದಿಸಲು ಅನುಕೂಲವಾಗುತ್ತದೆ ಎಂದು ರಾಮಕೃಷ್ಣ್ ವಿವರಣೆ ನೀಡಿದ್ದಾರೆ.

ಟಾಟಾ ಪವರ್ ಕಂಪೆನಿ ಕಳೆದ ವರ್ಷ 811.31 ಕೋಟಿ ರೂಪಾಯಿಗಳ ನಿವ್ವಳ ಲಾಭಗಳಿಸಿದ್ದು, 2009 ರ ಮಾರ್ಚ್ 31ಕ್ಕೆ ಅಂತ್ಯಗೊಂಡಂತೆ ನಿವ್ವಳ ಲಾಭದಲ್ಲಿ ಶೇ.19.25 ರಷ್ಟು ಏರಿಕೆಯಾಗಿ ತೆರಿಗೆ ಪಾವತಿಯ ನಂತರ 967.50 ಕೋಟಿ ರೂಪಾಯಿಗಳ ಲಾಭಗಳಿಸಿದೆ ಎಂದು ರಾಮಕೃಷ್ಣ ಹೇಳಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
2011ರಲ್ಲಿ 200 ಮಿನ್‌ ಸಿಡಿಎಂಎ ಗ್ರಾಹಕರ ಸೇರ್ಪಡೆ
ಸೆಪ್ಟೆಂಬರ್‌‌ನಲ್ಲಿ ರಿಯಲ್ ಎಸ್ಟೇಟ್‌ ಉದ್ಯಮ ಚೇತರಿಕೆ: ಅಸೋಚಾಮ್
ಫಾರೆಕ್ಸ್: ರೂಪಾಯಿ ಮೌಲ್ಯ ಬಲವರ್ಧನೆ
ಗೋದ್ರೇಜ್ ಗಾರ್ಡನ್ ಸಿಟಿ
ಬಜೆಟ್‌ನಲ್ಲಿ ಶೇರು ವಿಕ್ರಯ ಪ್ರಸ್ತಾಪ
ಆರ್ಥಿಕ ಬಿಕ್ಕಟ್ಟು ಪರಿಹಾರ: ಭಾರತಕ್ಕೆ 3ನೇ ಸ್ಥಾನ