ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಭಾರತಕ್ಕೆ ವಿದ್ಯುತ್ ಸರಬರಾಜಿಗೆ ಆಸಕ್ತಿ: ತಾಜಿಕಿಸ್ತಾನ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭಾರತಕ್ಕೆ ವಿದ್ಯುತ್ ಸರಬರಾಜಿಗೆ ಆಸಕ್ತಿ: ತಾಜಿಕಿಸ್ತಾನ್
ಕೇಂದ್ರ ಏಷ್ಯಾ ದೇಶಗಳಾದ ಅಫಘಾನಿಸ್ತಾನ್ ಮತ್ತು ಪಾಕಿಸ್ತಾನ ದೇಶಗಳಿಗೆ ವಿದ್ಯುತ್ ಸರಬರಾಜಿಗಾಗಿ ಹೈಪವರ್ ಲೈನ್ ನಿರ್ಮಾಣ ಕಾರ್ಯ ಮುಂದುವರಿದಿದ್ದು, ಭಾರತಕ್ಕೆ ಕೂಡಾ ವಿದ್ಯುತ್ ಸರಬರಾಜು ಮಾಡುವ ಗುರಿಯನ್ನು ಹೊಂದಲಾಗಿದೆ ಎಂದು ಭಾರತದಲ್ಲಿರುವ ತಾಜಿಕೀಸ್ತಾನ್ ರಾಯಭಾರಿ ತಿಳಿಸಿದ್ದಾರೆ.

ವಿಶ್ವಬ್ಯಾಂಕ್ ಮತ್ತು ಏಷ್ಯಾ ಡೆವಲೆಪ್‌ಮೆಂಟ್ ಬ್ಯಾಂಕ್‌ಗಳ ಆರ್ಥಿಕ ಸಹಯೋಗದೊಂದಿಗೆ ತಾಜಿಕಿಸ್ತಾನ್, ಅಫಘಾನಿಸ್ತಾನ್ ಮತ್ತು ಪಾಕಿಸ್ತಾನ್ ದೇಶಗಳಿಗೆ ವಿದ್ಯುತ್ ಸರಬರಜಾು ಮಾಡಲು ಹೈ ಪವರ್ ಟ್ರಾನ್ಸ್‌ಮಿಷನ್ ಲೈನ್‌ಗಳ ನಿರ್ಮಾಣ ಕಾರ್ಯ ಹಮ್ಮಿಕೊಂಡಿದೆ.

ಮುಂಬರುವ ದಿನಗಳಲ್ಲಿ ಭಾರತಕ್ಕೆ ವಿದ್ಯುತ್ ಸರಬರಾಜು ಮಾಡುವ ಉದ್ದೇಶ ಹೊಂದಲಾಗಿದೆ. ಉಭಯ ದೇಶಗಳ ನಡುವೆ ವಿದ್ಯುತ್ ಕ್ಷೇತ್ರದಲ್ಲಿ ಸಹಕಾರ ಮಹತ್ವದ ಸಂಗತಿಯಾಗಿದೆ ಎಂದು ಭಾರತದಲ್ಲಿರುವ ತಾಜಿಕಿಸ್ತಾನ್ ರಾಯಭಾರಿ ಸೆಡ್‌ಬೆಗ್‌ ಸೈಡೊವ್ ತಿಳಿಸಿದ್ದಾರೆ.

ತಾಜಿಕಿಸ್ತಾನ್‌ನಲ್ಲಿ ವಿದ್ಯುತ್ ಉತ್ಪಾದನೆಗೆ ವಿಫುಲ ಅವಕಾಶಗಳಿರುವುದರಿಂದ ಸಹೋದರ ದೇಶವಾದ ಭಾರತಕ್ಕೆ ವಿದ್ಯುತ್ ಸರಬರಾಜು ಲ ಮಾಡಲು ತೀವ್ರ ಆಸಕ್ತಿ ಹೊಂದಿದೆ ಎಂದು ಸೈಡೊವ್ ಹೇಳಿದ್ದಾರೆ

ಭಾರತದ ಎಂಎಂಟಿಸಿ ಚಿನ್ನದ ಗಣಿಗಾರಿಕೆ ಕಂಪೆನಿ ಜಂಟಿ ಸಹಭಾಗಿತ್ವದಲ್ಲಿ ತಾಜಿಕಿಸ್ತಾನ್‌ನಲ್ಲಿ ಚಿನ್ನದ ಅದಿರು ಸಂಶೋದನೆಗೆ ಒಪ್ಪಂದ ಮಾಡಿಕೊಂಡಿದೆ ಎಂದು ರಾಯಭಾರಿ ಸೈಡೊವ್ ತಿಳಿಸಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ನೋ ಕೆಮಿಕಲ್ಸ್ ಹಬ್, ನೋ ಟಾಟಾ ಮನಿ: ಮಮತಾ
ಟಾಟಾ ಪವರ್‌ನಿಂದ 1350 ಕೋಟಿ ರೂಪಾಯಿ ಹೂಡಿಕೆ
2011ರಲ್ಲಿ 200 ಮಿನ್‌ ಸಿಡಿಎಂಎ ಗ್ರಾಹಕರ ಸೇರ್ಪಡೆ
ಸೆಪ್ಟೆಂಬರ್‌‌ನಲ್ಲಿ ರಿಯಲ್ ಎಸ್ಟೇಟ್‌ ಉದ್ಯಮ ಚೇತರಿಕೆ: ಅಸೋಚಾಮ್
ಫಾರೆಕ್ಸ್: ರೂಪಾಯಿ ಮೌಲ್ಯ ಬಲವರ್ಧನೆ
ಗೋದ್ರೇಜ್ ಗಾರ್ಡನ್ ಸಿಟಿ