ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಶೇ.5.8ಕ್ಕೆ ಏರಿಕೆ ಕಂಡ ಜಿಡಿಪಿ ದರ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಶೇ.5.8ಕ್ಕೆ ಏರಿಕೆ ಕಂಡ ಜಿಡಿಪಿ ದರ
ಜಾಗತಿಕ ಆರ್ಥಿಕ ಕುಸಿತದ ಒತ್ತಡವನ್ನು ಎದುರಿಸುತ್ತಿರುವ ಭಾರತ ಮೂರನೇ ತ್ರೈಮಾಸಿಕದಲ್ಲಿ ಜಿಡಿಪಿ ದರ ಶೇ.5.3 ರಷ್ಟಿದ್ದು ಜನೆವರಿ -ಮಾರ್ಚ್ ತಿಂಗಳ ನಾಲ್ಕನೇ ತ್ರೈಮಾಸಿಕದಲ್ಲಿ ಶೇ.5.8ಕ್ಕೆ ಏರಿಕೆ ಕಂಡು ಮರುಗಳಿಕೆಯತ್ತ ಸಾಗಿದೆ.

ಕಳೆದ ಮೂರನೇ ತ್ರೈಮಾಸಿಕ ಅವಧಿಗೆ ಹೋಲಿಸಿದಲ್ಲಿ ನಾಲ್ಕನೇ ತ್ರೈಮಾಸಿಕ ಅವಧಿಯಲ್ಲಿ ಆರ್ಥಿಕ ಅಭಿವೃದ್ಧಿ ದರ ನಿಧಾನವಾಗಿ ಸ್ಥಿರವಾಗಿ ಸಾಗುತ್ತಿರುವುದರಿಂದ ಮುಂಬರುವ ಆರ್ಥಿಕ ಸಾಲಿನಲ್ಲಿ ಉತ್ತಮ ಫಲಿತಾಂಶ ನೀಡುವ ಸಾಧ್ಯತೆಗಳಿವೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಆದರೆ, ಕಳೆದ ವರ್ಷದ ನಾಲ್ಕನೇ ತ್ರೈಮಾಸಿಕ ಅವಧಿಯಲ್ಲಿ ಶೇ.8.6 ರಷ್ಟಿದ್ದ ಜಿಡಿಪಿ ದರ ಪ್ರಸಕ್ತ ವರ್ಷದ ನಾಲ್ಕನೇ ತ್ರೈಮಾಸಿಕ ಅವಧಿಗೆ ಹೋಲಿಸಿದಲ್ಲಿ ಭಾರಿ ಪ್ರಮಾಣದಲ್ಲಿ ಇಳಿಕೆ ಕಂಡಿದೆ.

ವಿತ್ತ ಸಚಿವಾಲಯದ ಅಧಿಕಾರಿಗಳ ಪ್ರಕಾರ 2008-09ರ ಆರ್ಥಿಕ ಸಾಲಿನಲ್ಲಿ ದೇಶದ ಆರ್ಥಿಕ ಅಭಿವೃದ್ಧಿ ದರ ಶೇ.6.7ಕ್ಕೆ ತಲುಪುವ ಸಾಧ್ಯತೆಗಳಿವೆ ಎಂದು ತಿಳಿಸಿದ್ದಾರೆ.

ಜಾಗತಿಕ ಆರ್ಥಿಕ ಬಿಕ್ಕಟ್ಟಿನಿಂದಾಗಿ ನಾಲ್ಕನೇ ತ್ರೈಮಾಸಿಕ ಅವಧಿಯಲ್ಲಿ (ಜನೆವರಿ-ಮಾರ್ಚ್) ಉತ್ಪಾದಕ ಕ್ಷೇತ್ರದ ವಹಿವಾಟಿನಲ್ಲಿ ಶೇ.1.4ರಷ್ಟು ಇಳಿಕೆ ಕಂಡಿದ್ದು, ಕಳೆದ ವರ್ಷ ಶೇ.6.3 ರಷ್ಟು ಏರಿಕೆ ಕಂಡಿತ್ತು ಎಂದು ವಿತ್ತ ಸಚಿವಾಲಯದ ಅದಿಕಾರಿಗಳು ತಿಳಿಸಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಭಾರತಕ್ಕೆ ವಿದ್ಯುತ್ ಸರಬರಾಜಿಗೆ ಆಸಕ್ತಿ: ತಾಜಿಕಿಸ್ತಾನ್
ನೋ ಕೆಮಿಕಲ್ಸ್ ಹಬ್, ನೋ ಟಾಟಾ ಮನಿ: ಮಮತಾ
ಟಾಟಾ ಪವರ್‌ನಿಂದ 1350 ಕೋಟಿ ರೂಪಾಯಿ ಹೂಡಿಕೆ
2011ರಲ್ಲಿ 200 ಮಿನ್‌ ಸಿಡಿಎಂಎ ಗ್ರಾಹಕರ ಸೇರ್ಪಡೆ
ಸೆಪ್ಟೆಂಬರ್‌‌ನಲ್ಲಿ ರಿಯಲ್ ಎಸ್ಟೇಟ್‌ ಉದ್ಯಮ ಚೇತರಿಕೆ: ಅಸೋಚಾಮ್
ಫಾರೆಕ್ಸ್: ರೂಪಾಯಿ ಮೌಲ್ಯ ಬಲವರ್ಧನೆ