ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > 3 ಸಾವಿರ ಗಡಿ ದಾಟಿದ ಭಾರತೀಯನ ತಲಾ ಆದಾಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
3 ಸಾವಿರ ಗಡಿ ದಾಟಿದ ಭಾರತೀಯನ ತಲಾ ಆದಾಯ
ಕಳೆದ 2005-06 ರಿಂದ ನಿರಂತರವಾಗಿ ಮೂರು ವರ್ಷಗಳ ಕಾಲ ಅಭಿವೃದ್ಧಿ ದರ ಶೇ.9 ರಷ್ಟು ಕಾಯ್ದುಕೊಂಡ ಬಂದ ಹಿನ್ನೆಲೆಯಲ್ಲಿ ಇದೀಗ ಸರಾಸರಿ ಭಾರತೀಯನ ಮಾಸಿಕ ಆದಾಯ 3000 ರೂಪಾಯಿಗಳಿಗೆ ಏರಿಕೆ ಕಂಡಿದೆ.

2008-09ರಲ್ಲಿ ತಲಾ ಆದಾಯದಲ್ಲಿ ಶೇ.12.2 ರಷ್ಟು ಏರಿಕೆಯಾಗಿ ವಾರ್ಷಿಕವಾಗಿ 37,490 ರೂಪಾಯಿಗಳಿಗೆ ತಲುಪಿದೆ ಎಂದು ಸೆಂಟ್ರಲ್ ಸ್ಟ್ಯಾಟಿಸ್ಟಿಕಲ್ ಆರ್ಗನೈಜೇಶನ್‌ ಬಿಡುಗಡೆಗೊಳಿಸಿದ ಅಡ್ವಾನ್ಸ್ ಎಸ್ಟಿಮೇಟ್‌ ಫಾರ್ ನ್ಯಾಷನಲ್ ಇನ್‌ಕಂ ವರದಿಯಲ್ಲಿ ಪ್ರಕಟಿಸಿದೆ. ಕಲೆದ 2007-08ರ ಆರ್ಥಿಕ ಸಾಲಿನಲ್ಲಿ ಭಾರತೀಯನ ಸರಾಸರಿ ವಾರ್ಷಿಕ ಆದಾಯ 33,283 ರೂಪಾಯಿಗಳಾಗಿತ್ತು.

ಭಾರತೀಯನ ಸರಾಸರಿ ಆದಾಯದಲ್ಲಿ ಹೆಚ್ಚಳವಾಗಿದ್ದರೂ ಜಾಗತಿಕ ಆರ್ಥಿಕ ಕುಸಿತದಿಂದಾಗಿ ದೇಶದ ಆರ್ಥಿಕತೆ ಕುಸಿತ ಕಂಡಿದ್ದು, ಕಳೆದ ವರ್ಷ ಜಿಡಿಪಿ ದರ ಶೇ.9 ರಷ್ಟಿದ್ದು, ಪ್ರಸಕ್ತ ವರ್ಷದಲ್ಲಿ ಜಿಡಿಪಿ ದರ ಶೇ.6.7ಕ್ಕೆ ಕುಸಿತ ಕಂಡಿದೆ.

ರಾಷ್ಟ್ರೀಯ ಆದಾಯದಲ್ಲಿ ಶೇ.14.2 ರಷ್ಟು ಏರಿಕೆಯಾಗಿ 43.26 ಲಕ್ಷ ರೂಪಾಯಿಗಳಿಗೆ ತಲುಪಿದ್ದು, ಆದರೆ ದೇಶದ ಜನಸಂಖ್ಯೆ 1.6 ಕೋಟಿಯಿಂದ 115.4 ಕೋಟಿ‌ಗೆ ಏರಿಕೆಯಾಗಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಶೇ.5.8ಕ್ಕೆ ಏರಿಕೆ ಕಂಡ ಜಿಡಿಪಿ ದರ
ಭಾರತಕ್ಕೆ ವಿದ್ಯುತ್ ಸರಬರಾಜಿಗೆ ಆಸಕ್ತಿ: ತಾಜಿಕಿಸ್ತಾನ್
ನೋ ಕೆಮಿಕಲ್ಸ್ ಹಬ್, ನೋ ಟಾಟಾ ಮನಿ: ಮಮತಾ
ಟಾಟಾ ಪವರ್‌ನಿಂದ 1350 ಕೋಟಿ ರೂಪಾಯಿ ಹೂಡಿಕೆ
2011ರಲ್ಲಿ 200 ಮಿನ್‌ ಸಿಡಿಎಂಎ ಗ್ರಾಹಕರ ಸೇರ್ಪಡೆ
ಸೆಪ್ಟೆಂಬರ್‌‌ನಲ್ಲಿ ರಿಯಲ್ ಎಸ್ಟೇಟ್‌ ಉದ್ಯಮ ಚೇತರಿಕೆ: ಅಸೋಚಾಮ್