ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಜೂನ್ ತಿಂಗಳಲ್ಲಿ ಮತ್ತಷ್ಟು ಬಡ್ಡಿ ದರ ಕಡಿತ ಸಾಧ್ಯತೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜೂನ್ ತಿಂಗಳಲ್ಲಿ ಮತ್ತಷ್ಟು ಬಡ್ಡಿ ದರ ಕಡಿತ ಸಾಧ್ಯತೆ
ಕೇಂದ್ರ ಹಣಕಾಸು ಖಾತೆ ಸಚಿವ ಪ್ರಣಬ್ ಮುಖರ್ಜಿ ಜೂನ್ 10 ರಂದು ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್‌‌ಗಳ ಮುಖ್ಯಸ್ಥರೊಂದಿಗೆ ಭೇಟಿ ಮಾಡಿದ ನಂತರ ಬಡ್ಡಿ ದರ ಕಡಿತ ಕುರಿತಂತೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮುಖ್ಯಸ್ಥ ಒ.ಪಿ.ಭಟ್ ತಿಳಿಸಿದ್ದಾರೆ.

ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಆರ್ಥಿಕತೆ ಸದೃಢವಾಗಿದ್ದು, ಠೇವಣಿ ಸಂಗ್ರಹ ಕೂಡಾ ಉತ್ತಮವಾಗಿದೆ. ಆದರೆ ಸಾಲ ವಿತರಣೆಯಲ್ಲಿ ಚೇತರಿಕೆ ಕಂಡಿಲ್ಲ ಎಂದು ಭಟ್ ಡಿಫೆನ್ಸ್ ಸ್ಯಾಲರಿ ಪ್ಯಾಕೇಜ್‌ ಯೋಜನೆಯನ್ನು ಉಧ್ಘಾಟಿಸಿ ಮಾತನಾಡುತ್ತಿದ್ದರು.

ನಗದು ಚಲಾವಣೆ ಹೆಚ್ಚಾದಂತೆ ಬಡ್ಡಿ ದರ ಕಡಿತ ಮತ್ತಷ್ಟು ಇಳಿಕೆಯಾಗುತ್ತದೆ. ಪ್ರಸ್ತುತ ಅವಧಿಯಲ್ಲಿ ಬಡ್ಡಿ ದರ ಏರಿಕೆಗೆ ಅವಕಾಶವಿಲ್ಲ. ಠೇವಣಿ ಸಂಗ್ರಹ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಪ್ರೇಮ್ ಲೆಂಡಿಂಗ್ ದರವನ್ನು ಕಡಿತ ಮಾಡಲು ಸಾಧ್ಯವಾಗುತ್ತಿಲ್ಲ. ಎಂದು ಭಟ್ ಹೇಳಿದ್ದಾರೆ.

ಡಿಫೆನ್ಸ್ ಸ್ಯಾಲರಿ ಪ್ಯಾಕೇಜ್‌ ಕುರಿತಂತೆ ಮಾತನಾಡಿದ ಭಟ್, ಈ ಯೋಜನೆಯಡಿಯಲ್ಲಿ 12ಲಕ್ಷ ಸೈನಿಕರು ಹಾಗೂ 10 ಲಕ್ಷ ಕೈದಿಗಳಿಗೆ ಉಚಿತ ಸೇವೆಯನ್ನು ನೀಡಲಾಗುತ್ತಿದ್ದು. ಸೇನಾ ಸಿಬ್ಬಂದಿಗಳು ತಮ್ಮ ವೇತನವನ್ನು ನೇರವಾಗಿ ಎಸ್‌ಬಿಐ ಖಾತೆಯ ಮೂಲಕ ಪಡೆಯಬಹುದಾಗಿದೆ. ಅಥವಾ ಕುಟುಬಂದ ಸದಸ್ಯರಿಗೆ ನೇರವಾಗಿ ಯಾವುದೇ ಶುಲ್ಕ ಪಾವತಿಸದೇ ಕಳುಹಿಸಿಕೊಡಬಹುದಾಗಿದೆ.

ಖಾತೆದಾರ ಸೇನಾ ಸಿಬ್ಬಂದಿಗೆ ಉಚಿತ ಚೆಕ್ ಬುಕ್ ಎಟಿಎಂ ಕಾರ್ಡ್ , ಎಸ್‌ಬಿಐ ಗ್ರೂಪ್‌ನ ಯಾವುದೇ ಬ್ಯಾಂಕ್‌ಗೆ ಉಚಿತ ಹಣ ವರ್ಗಾವಣೆ ಸೌಲಭ್ಯ ಒದಗಿಸಲಾಗಿದೆ ಎಂದು ಹೇಳಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಜೂನ್ 10 ರಂದು ಬ್ಯಾಂಕ್‌ಗಳ ಮುಖ್ಯಸ್ಥರೊಂದಿಗೆ ಪ್ರಣಬ್ ಭೇಟಿ
ಸತ್ಯಂ ಹಗರಣ: ತ್ವರಿತ ವಿಚಾರಣೆ
ಸಾಲದ ಬಡ್ಡಿದರ ಕಡಿತ: ಎಸ್‌ಬಿಐ
3 ಸಾವಿರ ಗಡಿ ದಾಟಿದ ಭಾರತೀಯನ ತಲಾ ಆದಾಯ
ಶೇ.5.8ಕ್ಕೆ ಏರಿಕೆ ಕಂಡ ಜಿಡಿಪಿ ದರ
ಭಾರತಕ್ಕೆ ವಿದ್ಯುತ್ ಸರಬರಾಜಿಗೆ ಆಸಕ್ತಿ: ತಾಜಿಕಿಸ್ತಾನ್