ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಡೆಲ್‌ಗೆ 290 ಮಿಲಿಯನ್ ಡಾಲರ್ ಲಾಭ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಡೆಲ್‌ಗೆ 290 ಮಿಲಿಯನ್ ಡಾಲರ್ ಲಾಭ
ಕಂಪ್ಯೂಟರ್ ತಯಾರಿಕೆ ಸಂಸ್ಥೆ ಡೆಲ್, ಮೊದಲ ತ್ರೈಮಾಸಿಕ ಅವಧಿಯ ನಿವ್ವಳ ಲಾಭಾಂಶದಲ್ಲಿ ಶೇ.63 ರಷ್ಟು ಕುಸಿತ ಕಂಡು 290 ಮಿಲಿಯನ್ ಡಾಲರ್‌ಗಳಿಗೆ ತಲುಪಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ಡೆಲ್ ಕಂಪೆನಿಯ ಒಟ್ಟು ಆದಾಯ 2008-09ರ ಮೊದಲ ತ್ರೈಮಾಸಿಕ ಅವಧಿಯಲ್ಲಿ 784 ಕೋಟಿ ರೂಪಾಯಿಗಳಾಗಿದೆ ಎಂದು ಡೆಲ್ ಕಂಪೆನಿ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.

ಕಂಪ್ಯೂಟರ್‌ಗಳ ಮಾರಾಟದಲ್ಲಿ ಗಣನೀಯ ಕುಸಿತ ಕಂಡುಬಂದಿದ್ದರಿಂದ ನಿವ್ವಳ ಆದಾಯದಲ್ಲಿ ಶೇ.23 ರಷ್ಟು ಕುಸಿತ ಕಂಡುಬಂದಿದ್ದು 12.34 ಬಿಲಿಯನ್ ಡಾಲರ್‌ಗಳಿಗೆ ತಲುಪಿದೆ. ಕಳೆದ ವರ್ಷದ ಮೊದಲ ತ್ರೈಮಾಸಿಕ ಅವಧಿಯಲ್ಲಿ 16.07 ಬಿಲಿಯನ್ ಡಾಲರ್‌ಗಳಿಗೆ ಏರಿಕೆ ಕಂಡಿತ್ತು.

ಜಾಗತಿಕ ಆರ್ಥಿಕ ಕುಸಿತದ ಸಂದರ್ಭದಲ್ಲಿ ಕೂಡಾ ಉತ್ತಮವಾಗಿ ನಿರ್ವಹಣೆ ಮಾಡಿದ್ದು, ಸುಮಾರು 4ಬಿಲಿಯನ್ ಡಾಲರ್ ವಾರ್ಷಿಕ ವೆಚ್ಚವನ್ನು ಕಡಿತಗೊಳಿಸಿ ಲಾಭಾಂಶ ಹೆಚ್ಚಿಸಲು ಪ್ರಯತ್ನಿಸಲಾಗುವುದು ಎಂದು ಡೆಲ್ ಮುಖ್ಯ ಆರ್ಥಿಕ ಅಧಿಕಾರಿ ಬ್ರಿಯಾನ್ ಗ್ಲಾಡನ್ ಹೇಳಿದ್ದಾರೆ.

ಡೆಲ್ ಕಂಪೆನಿಯ ಜಾಗತಿಕ ವಹಿವಾಟಿನಲ್ಲಿ ಶೇ.16 ರಿಂದ ಶೇ.30 ರಷ್ಟು ಕುಸಿತ ಕಂಡುಬಂದಿದೆ ಎಂದು ಉದ್ಯಮದ ಮೂಲಗಳು ತಿಳಿಸಿವೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮುಂಬರುವ ಬಜೆಟ್‌ನಲ್ಲಿ ರಫ್ತುದಾರರಿಗೆ ರಿಯಾಯಿತಿ:ಶರ್ಮಾ
ಜೂನ್ ತಿಂಗಳಲ್ಲಿ ಮತ್ತಷ್ಟು ಬಡ್ಡಿ ದರ ಕಡಿತ ಸಾಧ್ಯತೆ
ಜೂನ್ 10 ರಂದು ಬ್ಯಾಂಕ್‌ಗಳ ಮುಖ್ಯಸ್ಥರೊಂದಿಗೆ ಪ್ರಣಬ್ ಭೇಟಿ
ಸತ್ಯಂ ಹಗರಣ: ತ್ವರಿತ ವಿಚಾರಣೆ
ಸಾಲದ ಬಡ್ಡಿದರ ಕಡಿತ: ಎಸ್‌ಬಿಐ
3 ಸಾವಿರ ಗಡಿ ದಾಟಿದ ಭಾರತೀಯನ ತಲಾ ಆದಾಯ