ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಭಾರ್ತಿ-ವಾಲ್‌ಮಾರ್ಟ್‌ ಸಹಭಾಗಿತ್ವದಲ್ಲಿ ರಿಟೇಲ್ ಮಳಿಗೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭಾರ್ತಿ-ವಾಲ್‌ಮಾರ್ಟ್‌ ಸಹಭಾಗಿತ್ವದಲ್ಲಿ ರಿಟೇಲ್ ಮಳಿಗೆ
ಭಾರತದ ಭಾರ್ತಿಗ್ರೂಪ್ ಹಾಗೂ ಜಗತ್ತಿನ ಬೃಹತ್ ರಿಟೇಲ್ ವಹಿವಾಟು ಕಂಪೆನಿಯಾದ ವಾಲ್‌-ಮಾರ್ಟ್ ಜಂಟಿಯಾಗಿ 7 ಮಿಲಿಯನ್ ಡಾಲರ್ ವೆಚ್ಚದಲ್ಲಿ ನಗರದಲ್ಲಿ ರಿಟೇಲ್ ಮಳಿಗೆಯನ್ನು ಆರಂಭಿಸಿದ್ದು, ಮುಂಬರುವ ಮೂರು ವರ್ಷಗಳಲ್ಲಿ ದೇಶದಾದ್ಯಂತ 15 ರಿಟೇಲ್ ಮಳಿಗೆಗಳನ್ನು ಆರಂಭಿಸಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

ಬೆಸ್ಟ್ ಪ್ರೈಸ್ ಮಾಡರ್ನ್ ಹೋಲಸೇಲ್‌ ಎನ್ನುವ ಬ್ರ್ಯಾಂಡ್ ಹೆಸರಿನಲ್ಲಿ ರಿಟೇಲ್ ಮಳಿಗೆಗಳು ಕಾರ್ಯ ನಿರ್ವಹಿಸಲಿವೆ ಎಂದು ಭಾರ್ತಿ ಏಂಟರ್‌ಪ್ರೈಸೆಸ್‌ನ ಉಪಾಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ರಾಜನ್ ಭಾರ್ತಿ ಮಿತ್ತಲ್ ತಿಳಿಸಿದ್ದಾರೆ.

ಇಂದು ಆರಂಭವಾಗಿದ್ದು, ಮುಂಬರುವ ಮೂರು ವರ್ಷಗಳಲ್ಲಿ 15 ರಿಟೇಲ್ ಮಳಿಗೆಗಳನ್ನು ಆರಂಭಿಸಲು ನಿರ್ಧರಿಸಲಾಗಿದೆ. ನಾವು ಈಗಾಗಲೇ 30 ಸಾವಿರ ರಿಟೇಲರ್‌ಗಳು ಹಾಗೂ 8 ಸಾವಿರ ಸರಬರಾಜುದಾರರೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಇನ್ನೂ ಹೆಚ್ಚಿನ ವಹಿವಾಟುದಾರರೊಂದಿಗೆ ಒಪ್ಪಂದ ಮಾಡಿಕೊಳ್ಳುವ ನಿರೀಕ್ಷೆಯಿದೆ ಎಂದು ಮಿತ್ತಲ್ ವಿವರಣೆ ನೀಡಿದ್ದಾರೆ.

ರಿಟೇಲ್ ಮಳಿಗೆಗೆ ಸರಬರಾಜು ಮಾಡುವವರಲ್ಲಿ ಶೇ.80 ರಷ್ಟು ಪಂಜಾಬ್‌ಗೆ ಸೇರಿದವರಾಗಿದ್ದು, ಮುಂದಿನ ರಿಟೇಲ್ ಮಳಿಗೆಯನ್ನು ಲೂಧಿಯಾನಾದಲ್ಲಿ ಆರಂಭಿಸಲಾಗುವುದು ಎಂದು ಅಮೃತ್‌ಸರ್‌‌ನಲ್ಲಿ ರಿಟೇಲ್ ಮಳಿಗೆಯನ್ನು ಉದ್ಘಾಟಿಸಿ ಮಿತ್ತಲ್ ಮಾತನಾಡುತ್ತಿದ್ದರು.

ಭೂಮಿಯ ದರವನ್ನು ಹೊರತುಪಡಿಸಿ ಪ್ರತಿಯೊಂದು ಮಳಿಗೆ ಆರಂಭಕ್ಕೆ 7 ಮಿಲಿಯನ್ ಡಾಲರ್‌ಗಳ ಅಗತ್ಯವಿದೆ ಎಂದು ಮಿತ್ತಲ್ ಹೇಳಿದ್ದಾರೆ..

ಮಿತ್ತಲ್ ಪ್ರಕಾರ, ಅಮೃತ್‌ಸರ್‌ನಲ್ಲಿರುವ ರಿಟೇಲ್ ಮಳಿಗೆ 10 ಸಾವಿರ ಚದುರ ಅಡಿಯಲ್ಲಿ ವ್ಯಾಪಿಸಿದ್ದು, 200 ನೇರ ಹಾಗೂ 500 ಪರೋಕ್ಷ ಉದ್ಯೋಗಗಳನ್ನು ಸೃಷ್ಠಿಸಿದೆ ಎಂದು ತಿಳಿಸಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಜೂನ್ 1 ರಿಂದ ಬಿಗ್‌ಟಿವಿಯಲ್ಲಿ 10 ಹೊಸ ಚಾನೆಲ್‌ಗಳು
ಸ್ಪೆಕ್ಟ್ರಂ ಹಂಚಿಕೆ ನೀತಿಗೆ ಹೈಕೋರ್ಟ್ ತರಾಟೆ
ಡೆಲ್‌ಗೆ 290 ಮಿಲಿಯನ್ ಡಾಲರ್ ಲಾಭ
ಮುಂಬರುವ ಬಜೆಟ್‌ನಲ್ಲಿ ರಫ್ತುದಾರರಿಗೆ ರಿಯಾಯಿತಿ:ಶರ್ಮಾ
ಜೂನ್ ತಿಂಗಳಲ್ಲಿ ಮತ್ತಷ್ಟು ಬಡ್ಡಿ ದರ ಕಡಿತ ಸಾಧ್ಯತೆ
ಜೂನ್ 10 ರಂದು ಬ್ಯಾಂಕ್‌ಗಳ ಮುಖ್ಯಸ್ಥರೊಂದಿಗೆ ಪ್ರಣಬ್ ಭೇಟಿ