ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಫಾರೆಕ್ಸ್: ರೂಪಾಯಿ ಮೌಲ್ಯ ಬಲವರ್ಧನೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಫಾರೆಕ್ಸ್: ರೂಪಾಯಿ ಮೌಲ್ಯ ಬಲವರ್ಧನೆ
ಏಷ್ಯಾ ಶೇರುಪೇಟೆಗಳ ಸ್ಥಿರ ವಹಿವಾಟಿನಿಂದಾಗಿ ದೇಶಿಯ ಶೇರುಪೇಟೆ ಚೇತರಿಸಿಕೊಂಡು ವಿದೇಶಿ ಬಂಡವಾಳದ ಒಳಹರಿವು ಹೆಚ್ಚಳವಾಗಲಿದೆ ಎನ್ನುವ ನಿರೀಕ್ಷೆಯಲ್ಲಿ ಡಾಲರ್ ಎದುರಿಗೆ ರೂಪಾಯಿ ಮೌಲ್ಯ 13 ಪೈಸೆ ಏರಿಕೆ ಕಂಡಿದೆ.

ವಿದೇಶಿ ವಿನಿಮಯ ಮಾರುಕಟ್ಟೆಯ ಹಿಂದಿನ ದಿನದ ವಹಿವಾಟಿನ ಮುಕ್ತಾಯಕ್ಕೆ ಡಾಲರ್ ಎದುರಿಗೆ 47.11/12 ರೂಪಾಯಿಗಳಿಗೆ ತಲುಪಿತ್ತು. ಆದರೆ ಇಂದಿನ ಆರಂಭಿಕ ವಹಿವಾಟಿನಲ್ಲಿ ಡಾಲರ್ ಎದುರಿಗೆ ರೂಪಾಯಿ 13 ಪೈಸೆ ಏರಿಕೆ ಕಂಡು 46.98 ರೂಪಾಯಿಗಳಿಗೆ ತಲುಪಿದೆ.

ಮಾರುಕಟ್ಟೆಗಳಲ್ಲಿ ಡಾಲರ್ ಮೌಲ್ಯ ಇಳಿಕೆ ಕಂಡಿದ್ದರಿಂದ ರೂಪಾಯಿ ಮೌಲ್ಯ ಏರಿಕೆಗೆ ಕಾರಣವಾಗಿದೆ. ಏಷ್ಯಾ ಶೇರುಪೇಟೆಗಳ ಚೇತರಿಕೆಯ ಹಿನ್ನೆಲೆಯಲ್ಲಿ ದೇಶಿಯ ಶೇರುಪೇಟೆಯಲ್ಲಿ ವಿದೇಶಿ ಬಂಡವಾಳದ ಒಳಹರಿವು ಹೆಚ್ಚಳವಾಗಿರುವುದು ರೂಪಾಯಿ ಮೌಲ್ಯ ಏರಿಕೆಗೆ ಕಾರಣವಾಗಿದೆ ಎಂದು ಮಾರುಕಟ್ಟೆಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಶುಕ್ರವಾರದ ವಹಿವಾಟಿನ ಮುಕ್ತಾಯಕ್ಕೆ ಬಿಎಸ್‌‌ಇ-30 ಸೂಚ್ಯಂಕ 329.24 ಪಾಯಿಂಟ್‌ಗಳ ಏರಿಕೆ ಕಂಡು 14,625.25 ಅಂಕಗಳಿಗೆ ತಲುಪಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕಾಫಿ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್
ಇಂದಿನಿಂದ ಆರ್ಥಿಕ ತಜ್ಞರೊಂದಿಗೆ ಪ್ರಣವ್ ಮಾತುಕತೆ
ಇಪಿಎಫ್ ನೌಕರರ ಭವಿಷ್ಯ ನಿಧಿ ಠೇವಣಿ ಶೇ.8.5
2010ರ ವೇಳೆಗೆ ಆರ್ಥಿಕ ಚೇತರಿಕೆ: ಐಎಮ್‌ಎಫ್ ಮುಖ್ಯಸ್ಥ
ಆರೋಗ್ಯ ವಲಯ ಶೇ.12ರಷ್ಟು ವೃದ್ಧಿ: ಮ್ಯಾಕ್‌ಕಿನ್‌ಸ್ಲೆ ಸಮೀಕ್ಷೆ
ಪ್ರವಾಸಿಗರ ಆಕರ್ಷಣೆಗೆ ಯತ್ನ: ಸಚಿವೆ ಸೆಲ್ಜಾ