ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಹೂಡಿಕೆದಾರರ ಸಂಪತ್ತಿನಲ್ಲಿ 17 ಲಕ್ಷ ಕೋಟಿ ಏರಿಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹೂಡಿಕೆದಾರರ ಸಂಪತ್ತಿನಲ್ಲಿ 17 ಲಕ್ಷ ಕೋಟಿ ಏರಿಕೆ
ಕಳೆದ ವರ್ಷದ ಆರ್ಥಿಕ ಸಾಲಿನಲ್ಲಿ ಹಣ ಕಳೆದುಕೊಂಡ ಹೂಡಿಕೆದಾರರಿಗೆ ಪ್ರಸಕ್ತ ವರ್ಷದ ಆರ್ಥಿಕ ಸಾಲಿನಲ್ಲಿ ಮಾರುಕಟ್ಟೆಯ ಸ್ಥಿರ ವಹಿವಾಟಿನಿಂದಾಗಿ ಎರಡು ತಿಂಗಳಲ್ಲಿ ಹೂಡಿಕೆದಾರರಿಗೆ 17.78 ಲಕ್ಷ ಕೋಟಿ ರೂ ಆದಾಯ ಬಂದಿದೆ.

ಹೂಡಿಕೆದಾರರ ಸಂಪತ್ತು ಹಾಗೂ ಮಾರುಕಟ್ಟೆಯ ಬಂಡವಾಳ ಹೂಡಿಕೆಯ ಒಟ್ಟು ಆಸ್ತಿಯ ಮೌಲ್ಯ 17,78,969.74 ಕೋಟಿ ರೂಪಾಯಿಗಳ ಏರಿಕೆ ಕಂಡು ಮೇ ತಿಂಗಳಾಂತ್ಯಕ್ಕೆ ನೋಂದಣಿಯಾದ ಕಂಪೆನಿಗಳ ಮೌಲ್ಯ 48,65,044.91 ಕೋಟಿ ರೂಪಾಯಿಗಳಿಗೆ ತಲುಪಿದೆ

2009 ಮಾರ್ಚ್ 31ಕ್ಕೆ ಅಂತ್ಯಗೊಂಡಂತೆ ಮೋಂದಣಿಯಾದ ಕಂಪೆನಿಗಳ ಒಟ್ಟು ಮೌಲ್ಯ 30,86,075.17 ಕೋಟಿ ರೂಪಾಯಿಗಳಾಗಿತ್ತು.

ದೇಶಿಯ ಹಾಗೂ ಅಂತಾರಾಷ್ಟ್ರೀಯ ಮಾರುಕಟ್ಟೆಯ ಶೇರುಪೇಟೆಗಳು ಏರುಗತಿಯಲ್ಲಿರುವುದರಿಂದ ಹೂಡಿಕೆದಾರರಿಗೆ ಸಂತಸದ ಕಾಲ ಎದುರಾಗಿದೆ ಎಂದು ಎಸ್‌ಎಂಸಿ ಗ್ಲೋಬಲ್ ಕಂಪೆನಿಯ ಉಪಾಧ್ಯಕ್ಷ ರಾಜೇಶ್ ಜೈನ್ ಹೇಳಿದ್ದಾರೆ.

ಮುಂಬೈ ಶೇರುಪೇಟೆಯ ಸೂಚ್ಯಂಕ ಶುಕ್ರವಾರದ ವಹಿವಾಟಿನಲ್ಲಿ ಶೇ.51 ರಷ್ಟು ಏರಿಕೆ ಕಂಡು 14,625.25 ಅಂಕಗಳಿಗೆ ತಲುಪಿದೆ. ಬಿಎಸ್‌ಇ-30 ಸೂಚ್ಯಂಕ ಕಂಪೆನಿಗಳ ಮಾರುಕಟ್ಟೆಯ ಬಂಡವಾಳದಲ್ಲಿ ಶೇ.47 ರಷ್ಟು ಏರಿಕೆ ಕಂಡು ಎರಡು ತಿಂಗಳ ಅವಧಿಯಲ್ಲಿ 7,15,686 ಕೋಟಿ ರೂಪಾಯಿಗಳ ವಹಿವಾಟು ನಡೆಸಿದೆ ಎಂದು ಜೈನ್ ತಿಳಿಸಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸತ್ಯಂ ಉದ್ಯೋಗಿಗಳ ವಜಾಗೆ ಸರಕಾರ ವಿರೋಧ: ಖುರ್ಷಿದ್
ಫಾರೆಕ್ಸ್: ರೂಪಾಯಿ ಮೌಲ್ಯ ಬಲವರ್ಧನೆ
ಕಾಫಿ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್
ಇಂದಿನಿಂದ ಆರ್ಥಿಕ ತಜ್ಞರೊಂದಿಗೆ ಪ್ರಣವ್ ಮಾತುಕತೆ
ಇಪಿಎಫ್ ನೌಕರರ ಭವಿಷ್ಯ ನಿಧಿ ಠೇವಣಿ ಶೇ.8.5
2010ರ ವೇಳೆಗೆ ಆರ್ಥಿಕ ಚೇತರಿಕೆ: ಐಎಮ್‌ಎಫ್ ಮುಖ್ಯಸ್ಥ