ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಸತ್ಯಂನ ಆಸ್ಟ್ರೇಲಿಯಾ ಮುಖ್ಯಸ್ಥರಾಗಿ ವೆಂಕಿ ಪ್ರತಿವಾದಿ ನೇಮಕ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸತ್ಯಂನ ಆಸ್ಟ್ರೇಲಿಯಾ ಮುಖ್ಯಸ್ಥರಾಗಿ ವೆಂಕಿ ಪ್ರತಿವಾದಿ ನೇಮಕ
ಸತ್ಯಂ ಕಂಪ್ಯೂಟರ್ಸ್‌ನ ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್‌ ದೇಶಗಳ ವ್ಯವಸ್ತಾಪಕರಾಗಿ ವೆಂಕಿ ಪ್ರತಿವಾದಿಯವರನ್ನು ನೇಮಕ ಮಾಡಲಾಗಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ಸತ್ಯಂನ ವಿಜಯ್ ಪ್ರಸಾದ್ ಅವರನ್ನು ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್‌ ದೇಶಗಳ ಪ್ರಮುಖ ಸಲಹೆಗಾರರನ್ನಾಗಿ ನೇಮಕ ಮಾಡಲಾಗಿದೆ ಎಂದು ಮುಂಬೈ ಶೇರುಪೇಟೆಗೆ ಸಲ್ಲಿಸಿದ ಮಾಹಿತಿಯಲ್ಲಿ ಬಹಿರಂಗಪಡಿಸಿದೆ.

ಸತ್ಯಂ ವಹಿವಾಟಿನ ಆಸ್ಟ್ರೇಲಿಯಾ ಮುಖ್ಯಸ್ಥರಾಗಿದ್ದ ದೀಪಕ್ ನಾಂಗಿಯಾ ಅವರು ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ತೆರುವಾದ ಸ್ಥಾನಕ್ಕೆ ಪ್ರತಿವಾದಿಯವರನ್ನು ನೇಮಕ ಮಾಡಲಾಗಿದೆ. ಕಳೆದ ಏಳು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಪ್ರತಿವಾದಿ ನಾಂಗಿಯಾ ನಂತರದ ಸ್ಥಾನವನ್ನು ಹೊಂದಿದ್ದರು ಎನ್ನಲಾಗಿದೆ.

ವೆಂಕಿ ಪ್ರತಿವಾದಿಯವರು, ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ದೇಶಗಳ ಗ್ರಾಹಕ ಸಂಪರ್ಕ ಸೇವಾ ವಿತರಣೆ , ಮಾರಾಟ ಮತ್ತು ಬೆಂಬಲ ವಹಿವಾಟು ಅಭಿವೃದ್ಧಿಯಂತಹ ವಿಭಾಗಗಳನ್ನು ನೇರವಾಗಿ ನೋಡಿಕೊಳ್ಳುವುದಲ್ಲದೇ ಅಗತ್ಯವಾದ ಸಲಹೆ ಸೂಚನೆಗಳನ್ನು ನೀಡಲಿದ್ದಾರೆ ಎಂದು ಸತ್ಯಂ ಮೂಲಗಳು ತಿಳಿಸಿವೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಹೂಡಿಕೆದಾರರ ಸಂಪತ್ತಿನಲ್ಲಿ 17 ಲಕ್ಷ ಕೋಟಿ ಏರಿಕೆ
ಸತ್ಯಂ ಉದ್ಯೋಗಿಗಳ ವಜಾಗೆ ಸರಕಾರ ವಿರೋಧ: ಖುರ್ಷಿದ್
ಫಾರೆಕ್ಸ್: ರೂಪಾಯಿ ಮೌಲ್ಯ ಬಲವರ್ಧನೆ
ಕಾಫಿ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್
ಇಂದಿನಿಂದ ಆರ್ಥಿಕ ತಜ್ಞರೊಂದಿಗೆ ಪ್ರಣವ್ ಮಾತುಕತೆ
ಇಪಿಎಫ್ ನೌಕರರ ಭವಿಷ್ಯ ನಿಧಿ ಠೇವಣಿ ಶೇ.8.5