ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಮಾರುತಿ ಕಾರುಗಳ ಮಾರಾಟದಲ್ಲಿ ಶೇ.15.75 ರಷ್ಟು ಹೆಚ್ಚಳ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಾರುತಿ ಕಾರುಗಳ ಮಾರಾಟದಲ್ಲಿ ಶೇ.15.75 ರಷ್ಟು ಹೆಚ್ಚಳ
ಕಾರುಗಳ ಮಾರಾಟದಲ್ಲಿ ನಿರಂತರ ಏರಿಕೆಯಾಗುತ್ತಿದ್ದು, ಮೇ ತಿಂಗಳ ಅವಧಿಯಲ್ಲಿ ಶೇ.15.75 ರಷ್ಟು ಹೆಚ್ಚಳವಾಗಿದೆ ಎಂದು ಪ್ರಮುಖ ಕಾರು ತಯಾರಿಕೆ ಸಂಸ್ಥೆ ಮಾರುತಿ ಸುಝುಕಿ ಇಂಡಿಯಾ ಲಿಮಿಟೆಡ್‌ನ ಕಂಪೆನಿಯ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ವರ್ಷ 69,001 ಕಾರುಗಳ ಮಾರಾಟವಾಗಿದ್ದು, ಪ್ರಸಕ್ತ ವರ್ಷದಲ್ಲಿ 79,872 ಕಾರುಗಳ ಮಾರಾಟವಾಗಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ

ದೇಶಿಯ ವಹಿವಾಟಿನಲ್ಲಿ ಕಳೆದ ವರ್ಷದ ಮೇ ತಿಂಗಳಲ್ಲಿ 64,143 ಕಾರುಗಳ ಮಾರಾಟ ಮಾಡಲಾಗಿದ್ದು, ಪ್ರಸಕ್ತ ವರ್ಷದ ಮೇ ತಿಂಗಳ ಅವಧಿಯಲ್ಲಿ ಶೇ.10.35 ರಷ್ಟು ಹೆಚ್ಚಳವಾಗಿ 70,785 ಕಾರುಗಳ ಮಾರಾಟವಾಗಿದೆ ಎಂದು ಮಾರುತಿ ಸುಝುಕಿ ಇಂಡಿಯಾ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.

ಮಾರುತಿ ಸುಝುಕಿ ಇಂಡಿಯಾ , ಪ್ರತಿ ತಿಂಗಳಿಗೆ 70 ಸಾವಿರ ಕಾರುಗಳಂತೆ ಮಾರಾಟ ಮಾಡಿ ದಾಖಲೆ ಸ್ತಾಪಿಸಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ಮಾರುತಿ ಸುಝುಕಿಯ ಹಳೆ ಮಾಡೆಲ್ ಎಂ800 , ಹಿಂದಿನ ವರ್ಷದ ಮೇ ತಿಂಗಳ ಅವಧಿಯಲ್ಲಿ 6,830 ಕಾರುಗಳನ್ನು ಮಾರಾಟ ಮಾಡಲಾಗಿತ್ತು. ಪ್ರಸಕ್ತ ವರ್ಷದ ಮೇ ತಿಂಗಳ ಮಾರಾಟದಲ್ಲಿ ಶೇ.65.80 ರಷ್ಟು ಕುಸಿತ ಕಂಡು 2,336 ಕಾರುಗಳನ್ನು ಮಾರಾಟ ಮಾಡಲಾಗಿದೆ. ಅಲ್ಟೋ, ವಾಗನ್ ಆರ್ , ಝೆನ್ ಎಸ್ಟಿಲೊ , ಸ್ವಿಫ್ಟ್ ಮತ್ತು ಎ-ಸ್ಟಾರ್ ಕಾರುಗಳ ಮಾರಾಟದಲ್ಲಿ ಶೇ.20.70 ರಷ್ಟು ಏರಿಕೆಯಾಗಿದೆ ಎಂದು ಕಂಪೆನಿ ತಿಳಿಸಿದೆ.

ಎ-3 ವಿಭಾಗದಲ್ಲಿ (ಎಸ್‌ಎಕ್ಸ್‌ 4 ಮತ್ತು ಡಿಜೈರ್ ) ಕಾರುಗಳ ಮಾರಾಟದಲ್ಲಿ ಶೇ.14.06 ರಷ್ಟು ಏರಿಕೆಯಾಗಿದೆ. ಕಳೆದ ವರ್ಷದ ಮೇ ತಿಂಗಳ ಅವಧಿಯಲ್ಲಿ 5,946 ಕಾರುಗಳನ್ನು ಮಾರಾಟ ಮಾಡಲಾಗಿದ್ದು, ಪ್ರಸಕ್ತ ವರ್ಷದ ಮೇ ತಿಂಗಳ ಅವಧಿಯಲ್ಲಿ 6,782 ಕಾರುಗಳ ಮಾರಾಟದಲ್ಲಿ ಹೆಚ್ಚಳವಾಗಿದೆ. ಪ್ರಯಾಣಿಕ ಕಾರುಗಳ ಮಾರಾಟದಲ್ಲಿ ಶೇ.11.18 ರಷ್ಟು ಏರಿಕೆ ಕಂಡಿದೆ ಎಂದು ಮಾರುತಿ ಸುಝುಕಿ ಇಂಡಿಯಾ ಹೊರಡಿಸಿದ ಪ್ರಕಟಮೆಯಲ್ಲಿ ತಿಳಿಸಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸತ್ಯಂನ ಆಸ್ಟ್ರೇಲಿಯಾ ಮುಖ್ಯಸ್ಥರಾಗಿ ವೆಂಕಿ ಪ್ರತಿವಾದಿ ನೇಮಕ
ಹೂಡಿಕೆದಾರರ ಸಂಪತ್ತಿನಲ್ಲಿ 17 ಲಕ್ಷ ಕೋಟಿ ಏರಿಕೆ
ಸತ್ಯಂ ಉದ್ಯೋಗಿಗಳ ವಜಾಗೆ ಸರಕಾರ ವಿರೋಧ: ಖುರ್ಷಿದ್
ಫಾರೆಕ್ಸ್: ರೂಪಾಯಿ ಮೌಲ್ಯ ಬಲವರ್ಧನೆ
ಕಾಫಿ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್
ಇಂದಿನಿಂದ ಆರ್ಥಿಕ ತಜ್ಞರೊಂದಿಗೆ ಪ್ರಣವ್ ಮಾತುಕತೆ