ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ರಫ್ತು ವಹಿವಾಟು ವೃದ್ಧಿಗೆ ಸೂಕ್ತ ಕ್ರಮ :ಸಿಂಧಿಯಾ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಫ್ತು ವಹಿವಾಟು ವೃದ್ಧಿಗೆ ಸೂಕ್ತ ಕ್ರಮ :ಸಿಂಧಿಯಾ
ರಫ್ತು ವಹಿವಾಟು ಕುಸಿತವನ್ನು ತಡೆಯಲು ಕೇಂದ್ರ ಸರಕಾರ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕೆ ಖಾತೆ ರಾಜ್ಯ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದ್ದಾರೆ.

ರಫ್ತು ವಹಿವಾಟು ಕ್ಷೇತ್ರ ಚೇತರಿಸಿಕೊಳ್ಳಲು ಅಗತ್ಯವಾದ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು . ಉತ್ಪಾದಕ ಹಾಗೂ ರಫ್ತು ಕ್ಷೇತ್ರಗಳಲ್ಲಿರುವ ಸಮಸ್ಯೆಗಳನ್ನು ಬಗೆಹರಿಸುವತ್ತ ಗಮನಹರಿಸಬೇಕಾಗಿದೆ ಎಂದು ತಿಳಿಸಿದ್ದಾರೆ.

ಅಮೆರಿಕ ಮತ್ತು ಯುರೋಪ್ ಮಾರುಕಟ್ಟೆಗಳ ಆರ್ಥಿಕ ಕುಸಿತದಿಂದಾಗಿ ಕಳೆದ ವರ್ಷದ ಆರ್ಥಿಕ ಸಾಲಿನಲ್ಲಿ 163 ಬಿಲಿಯನ್ ಡಾಲರ್‌ಗಳ ರಫ್ತು ವಹಿವಾಟು ಗುರಿಯನ್ನು ತಲುಪಲಾಗಿದ್ದು, ಪ್ರಸಕ್ತ ವರ್ಷದ ಅವಧಿಯಲ್ಲಿ ಕೇವಲ ಶೇ.3.4ರಷ್ಟು ಏರಿಕೆಯಾಗಿ 168.7 ಬಿಲಿಯನ್ ಡಾಲರ್‌ಗಳಿಗೆ ತಲುಪಿದೆ.

ಮುಂಬರುವ ಅಗಸ್ಟ್ ತಿಂಗಳೊಳಗಾಗಿ ನೂತನ ವಿದೇಶಿ ವ್ಯಾಪಾರ ನೀತಿಯನ್ವಯ ರಫ್ತು ವಹಿವಾಟು ಕ್ಷೇತ್ರ ಚೇತರಿಕೆಗೆ ಹಲವು ಯೋಜನೆಗಳನ್ನು ರೂಪಿಸಲಾಗುವುದು ಎಂದು ತಿಳಿಸಿದ್ದಾರೆ.

ಆಸಿಯಾನ್ ಮತ್ತು ದಕ್ಷಿಣ ಕೊರಿಯಾ ದೇಶಗಳೊಂದಿಗೆ ಮುಕ್ತ ವ್ಯಾಪಾರ ಒಪ್ಪಂದಗಳನ್ನು ಸಂಪುಟದಲ್ಲಿ ಮಂಡಿಸಲಾಗುವುದು.ಯುರೋಪ್ ದೇಶಗಳೊಂದಿಗಿನ ಎಫ್‌ಟಿಎ ಒಪ್ಪಂದ ಹೆಚ್ಚಿನ ಸಮಯಾವಕಾಶವನ್ನು ತೆಗೆದುಕೊಳ್ಳಲಿದೆ ಎಂದು ಸಿಂದಿಯಾ ತಿಳಿಸಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮಾರುತಿ ಕಾರುಗಳ ಮಾರಾಟದಲ್ಲಿ ಶೇ.15.75 ರಷ್ಟು ಹೆಚ್ಚಳ
ಸತ್ಯಂನ ಆಸ್ಟ್ರೇಲಿಯಾ ಮುಖ್ಯಸ್ಥರಾಗಿ ವೆಂಕಿ ಪ್ರತಿವಾದಿ ನೇಮಕ
ಹೂಡಿಕೆದಾರರ ಸಂಪತ್ತಿನಲ್ಲಿ 17 ಲಕ್ಷ ಕೋಟಿ ಏರಿಕೆ
ಸತ್ಯಂ ಉದ್ಯೋಗಿಗಳ ವಜಾಗೆ ಸರಕಾರ ವಿರೋಧ: ಖುರ್ಷಿದ್
ಫಾರೆಕ್ಸ್: ರೂಪಾಯಿ ಮೌಲ್ಯ ಬಲವರ್ಧನೆ
ಕಾಫಿ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್