ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಎಕ್ಸಿಸ್ ಬ್ಯಾಂಕ್‌ ಸಿಇಒ ಸ್ಥಾನಕ್ಕೆ ಶಿಖಾ ಶರ್ಮಾ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಎಕ್ಸಿಸ್ ಬ್ಯಾಂಕ್‌ ಸಿಇಒ ಸ್ಥಾನಕ್ಕೆ ಶಿಖಾ ಶರ್ಮಾ
ಖಾಸಗಿ ಕ್ಷೇತ್ರದ ಎಕ್ಸಿಸ್‌ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕಿ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಶಿಖಾ ಶರ್ಮಾ ಅಧಿಕಾರ ಸ್ವೀಕರಿಸಿದ್ದಾರೆ ಎಂದು ಬ್ಯಾಂಕ್‌ ಮೂಲಗಳು ತಿಳಿಸಿವೆ.

ಎಕ್ಸಿಸ್ ಬ್ಯಾಂಕ್ ದೇಶದ ಖಾಸಗಿ ಕ್ಷೇತ್ರದ ಬ್ಯಾಂಕಿಂಗ್ ವಲಯದಲ್ಲಿ ಮೂರನೇ ಸ್ಥಾನ ಪಡೆದಿದ್ದು,ದೇಶಾದ್ಯಂತ 840 ಬ್ಯಾಂಕ್‌ ಶಾಖೆಗಳು ಹಾಗೂ 3,600 ಕ್ಕೂ ಹೆಚ್ಚಿನ ಎಟಿಎಂ ಸೆಂಟರ್‌ಗಳನ್ನು ಹೊಂದಿದೆ

ಕಳೆದ 29 ವರ್ಷಗಳಿಂದ ಬ್ಯಾಂಕಿಂಗ್ ಸೇವೆಯಲ್ಲಿರುವ ಶರ್ಮಾ ವಿವಿಧ ಹುದ್ದೆಗಳನ್ನು ಯಶಸ್ವಿಯಾಗಿ ನಿರ್ವಹಿಸಿ ತುಂಬಾ ಅನುಭವ ಹೊಂದಿದ್ದಾರೆ ಎಂದು ಎಕ್ಸಿಸ್ ಬ್ಯಾಂಕ್ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.

ಕಳೆದ 9 ವರ್ಷಗಳ ಹಿಂದೆ ಐಸಿಐಸಿಐನ ಪ್ರುವುಡೆನ್ಶಿಯಲ್ ಲೈಫ್ ಇನ್‌ಸ್ಯೂರೆನ್ಸ್ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕಿ ಹಾಗೂ ಸಂಸ್ಥಾಪಕ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಸ್ಪರ್ಧಾತ್ಮಕತೆಯಲ್ಲೂ ದಕ್ಷತೆಯಿಂದ ಕಾರ್ಯನಿರ್ವಹಿಸಿ ನಂಬರ್ ಒನ್ ಸ್ಥಾನಕ್ಕೆ ತರುವಲ್ಲಿ ಯಶಸ್ವಿಯಾಗಿದ್ದರು.

ಎಕ್ಸಿಸ್ ಬ್ಯಾಂಕ್‌ನ ಅಡಳಿತ ಮಂಡಳಿ ನನ್ನ ಮೇಲಿಟ್ಟಿರುವ ನಂಬಿಕೆಯಿಟ್ಟು ಗೌರವಿ ನೀಡಿರುವುದಕ್ಕಾಗಿ ಅಭಿನಂದಿಸುತ್ತೇನೆ. ಬ್ಯಾಂಕ್‌ನ ಸಿಬ್ಬಂದಿಯೊಂದಿಗೆ ಉತ್ತಮವಾಗಿ ಹೊಂದಾಣಿಕೆಯಿಂದ ಕರ್ತವ್ಯ ನಿರ್ವಹಿಸಿ , ಅಭಿವೃದ್ಧಿ ಪಥದತ್ತ ಸಾಗಿಸಲು ಪ್ರಯತ್ನಿಸುತ್ತೇನೆ ಎಂದು ಶಿಖಾ ಶರ್ಮಾ ತಿಳಿಸಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ರಫ್ತು ವಹಿವಾಟು ವೃದ್ಧಿಗೆ ಸೂಕ್ತ ಕ್ರಮ :ಸಿಂಧಿಯಾ
ಮಾರುತಿ ಕಾರುಗಳ ಮಾರಾಟದಲ್ಲಿ ಶೇ.15.75 ರಷ್ಟು ಹೆಚ್ಚಳ
ಸತ್ಯಂನ ಆಸ್ಟ್ರೇಲಿಯಾ ಮುಖ್ಯಸ್ಥರಾಗಿ ವೆಂಕಿ ಪ್ರತಿವಾದಿ ನೇಮಕ
ಹೂಡಿಕೆದಾರರ ಸಂಪತ್ತಿನಲ್ಲಿ 17 ಲಕ್ಷ ಕೋಟಿ ಏರಿಕೆ
ಸತ್ಯಂ ಉದ್ಯೋಗಿಗಳ ವಜಾಗೆ ಸರಕಾರ ವಿರೋಧ: ಖುರ್ಷಿದ್
ಫಾರೆಕ್ಸ್: ರೂಪಾಯಿ ಮೌಲ್ಯ ಬಲವರ್ಧನೆ