ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಮಹೀಂದ್ರಾ ವಾಹನಗಳ ಮಾರಾಟದಲ್ಲಿ ಕುಸಿತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಹೀಂದ್ರಾ ವಾಹನಗಳ ಮಾರಾಟದಲ್ಲಿ ಕುಸಿತ
ವಾಹನೋದ್ಯಮ ತಯಾರಿಕೆ ಸಂಸ್ಥೆ ಮಹೀಂದ್ರಾ ಆಂಡ್ ಮಹೀಂದ್ರಾ ಕಳೆದ ವರ್ಷದ ಅವಧಿಯಲ್ಲಿ 19,296 ವಾಹನಗಳನ್ನು ಮಾರಾಟ ಮಾಡಿದ್ದು, ಪ್ರಸಕ್ತ ವರ್ಷದ ಮೇ ತಿಂಗಳ ಅವಧಿಗೆ ಹೋಲಿಸಿದಲ್ಲಿ ಶೇ.14 .1 ರಷ್ಟು ಕುಸಿತ ಕಂಡು 16,581 ವಾಹನಗಳನ್ನು ಮಾರಾಟ ಮಾಡಲಾಗಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ಇತ್ತೀಚೆಗೆ ನಾಸಿಕ್‌ನಲ್ಲಿರುವ ಘಟಕವನ್ನು ಸ್ಥಗಿತಗೊಳಿಸಿದ ನಂತರವೂ 2009ರ ಮೇ ತಿಂಗಳ ಅವದಿಯಲ್ಲಿ 16,581 ವಾಹನಗಳನ್ನು ಮಾರಾಟ ಮಾಡಿದ್ದು, ಗ್ರಾಹಕರಿಂದ ಸಕಾರಾತ್ಮಕ ಬೇಡಿಕೆ ಉಂಟಾಗಿದೆ ಎಂದು ಮಹೀಂದ್ರಾ ವಾಹನೋದ್ಯಮ ಕ್ಷೇತ್ರದ ಮುಖ್ಯಸ್ಥ ರಾಜೇಶ್ ಜೆಜುರಿಕರ್ ಹೇಳಿದ್ದಾರೆ.

ನಿಗದಿತ ವಾರ್ಷಿಕ ಗುರಿಯನ್ನು ತಲುಪುವಲ್ಲಿ ಕಾರ್ಮಿಕರ ಸತ್ಯಾಗ್ರಹ ಅಡ್ಡಿಯಾಗಬಹುದೆಂದು ನಿರೀಕ್ಷಿಸಿರಲಿಲ್ಲ . ಕಾರ್ಮಿಕ ಮುಖಂಡನ ಅಮಾನತು ವಿರೋಧಿಸಿ ಕಳೆದ ತಿಂಗಳು ಸುಮಾರು ಎರಡು ವಾರಗಳ ಕಾಲ ಕಾರ್ಮಿಕರು ಮುಷ್ಕರ ಹಮ್ಮಿಕೊಂಡಿದ್ದರಿಂದ ಘಟಕವನ್ನು ಸ್ಥಗಿತಗೊಳಿಸಬೇಕಾಯಿತು ಎಂದು ತಿಳಿಸಿದ್ದಾರೆ.

ವಾಹನಗಳ ರಫ್ತು ವಹಿವಾಟಿನಲ್ಲಿ ಶೇ.79 ರಷ್ಟು ಕುಸಿತ ಕಂಡಿದ್ದು, ಕಳೆದ ಮೇ ತಿಂಗಳಲ್ಲಿ 1,357 ವಾಹನಗಳನ್ನು ರಫ್ತು ಮಾಡಲಾಗಿತ್ತು. ಆದರೆ ಪ್ರಸಕ್ತ ಮೇ ತಿಂಗಳಲ್ಲಿ 285 ವಾಹನಗಳನ್ನು ರಫ್ತು ಮಾಡಲು ಸಾಧ್ಯವಾಗಿದೆ ಎಂದು ರಾಜೇಶ್ ಹೇಳಿದ್ದಾರೆ

ನಾಸಿಕ್‌ ಘಟಕವನ್ನು ಮುಷ್ಕರದ ಕಾರಣದಿಂದಾಗಿ ಸ್ಥಗಿತಗೊಳಿಸಿದ್ದರಿಂದ ಉತ್ಪಾದನೆಯಲ್ಲಿ ನಷ್ಟವಾಗಿದ್ದು ,ಅದನ್ನು ಸರಿಪಡಿಸಲಾಗುವುದು ಎಂದು ರಾಜೇಶ್ ಜೆಜುರಿಕರ್ ತಿಳಿಸಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಏರ್‌ ಇಂಡಿಯಾ: ಗುತ್ತಿಗೆ ನೌಕರರಿಂದ ಮುಷ್ಕರ
ಎಕ್ಸಿಸ್ ಬ್ಯಾಂಕ್‌ ಸಿಇಒ ಸ್ಥಾನಕ್ಕೆ ಶಿಖಾ ಶರ್ಮಾ
ರಫ್ತು ವಹಿವಾಟು ವೃದ್ಧಿಗೆ ಸೂಕ್ತ ಕ್ರಮ :ಸಿಂಧಿಯಾ
ಮಾರುತಿ ಕಾರುಗಳ ಮಾರಾಟದಲ್ಲಿ ಶೇ.15.75 ರಷ್ಟು ಹೆಚ್ಚಳ
ಸತ್ಯಂನ ಆಸ್ಟ್ರೇಲಿಯಾ ಮುಖ್ಯಸ್ಥರಾಗಿ ವೆಂಕಿ ಪ್ರತಿವಾದಿ ನೇಮಕ
ಹೂಡಿಕೆದಾರರ ಸಂಪತ್ತಿನಲ್ಲಿ 17 ಲಕ್ಷ ಕೋಟಿ ಏರಿಕೆ